ನ್ಯೂಯಾರ್ಕ್: ಅಮೆರಿಕಾದ ನ್ಯಾಷನಲ್ ಬುಕ್ ಫೌಂಡೇಷನ್ ಕೊಡಮಾಡುವ 2025ರ ನ್ಯಾಷನಲ್ ಬುಕ್ ಪ್ರಶಸ್ತಿಗೆ ಲೆಬನಾನಿನ ಕಾದಂಬರಿಕಾರ ರಬಿಹ್ ಅಲಮೆದ್ದೀನ್ ಮತ್ತು ಚಿಕಾಗೋದ ಸಾಹಿತಿ ಪೆಟ್ರೀಷಿಯಾ ಸ್ಮಿತ್ ಆಯ್ಕೆಯಾಗಿದ್ದಾರೆ.
ಕಾದಂಬರಿ ವಿಭಾಗದಲ್ಲಿ ಅಲಮೆದ್ದೀನ್ ಅವರ `ದಿ ಟ್ರೂ ಟ್ರೂ ಸ್ಟೋರಿ ಆಫ್ ರಾಜಾ ದಿ ಗಲ್ಲಿಬಲ್(ಆಯಂಡ್ ಹಿಸ್ ಮದರ್), ಕವಿತೆಗಳ ವಿಭಾಗದಲ್ಲಿ ಪೆಟ್ರೀಷಿಯಾ ಸ್ಮಿತ್ ಅವರ `ದಿ ಇಂಟೆನ್ಷನ್ ಆಫ್ ಥಂಡರ್', ಸಾಕ್ಷ್ಯಚಿತ್ರ ವಿಭಾಗದಲ್ಲಿ ಈಜಿಪ್ಟ್ ಮೂಲದ ಒಮರ್ ಎಲ್ ಅಕ್ಕಾಡ್, ಯುವ ಸಾಹಿತಿಗಳ ವಿಭಾಗದಲ್ಲಿ ಇರಾನ್ ಮೂಲದ ಡೇನಿಯಲ್ ನಯೇರಿ , ಅನುವಾದ ಸಾಹಿತ್ಯ ವಿಭಾಗದಲ್ಲಿ ಅಮೆರಿಕಾದ ರೋಬಿನ್ ಮೆಯರ್ಸ್ ಅನುವಾದಿಸಿದ ಅರ್ಜೆಂಟೀನಾ ಸಾಹಿತಿ ಗ್ಯಾಬ್ರಿಯೆಲಾ ಕ್ಯಾಬೆಝಾನ್ ಕೆಮರಾ ಅವರ ಕೃತಿ ಪ್ರಶಸ್ತಿ ಪಡೆದಿದೆ.




