ಜೇಮ್‌ಶೆಡ್‌ಪುರ: ಆನೆಗಳ ಚಲನವಲನದ ಕಾರಣದಿಂದ ಆಗ್ನೇಯ ರೈಲ್ವೆಯ ಚಕ್ರಧರಪುರ ವಿಭಾಗದಲ್ಲಿ ಡಿಸೆಂಬರ್ 22ರಿಂದ ಮೂರು ದಿನ 10ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.
ಮೆಮು ರೈಲು ಸೇವೆಯನ್ನೂ ಡೆಸೆಂಬರ್ 22ರಿಂದ 24ರವರೆಗೆ ರದ್ದು ಮಾಡಲಾಗಿದೆ ಎಂದು ಆಗ್ನೇಯ ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.
'ಆನೆಗಳ ಗುಂಪು ಚಕ್ರಧರಪುರ ಮತ್ತು ಝಾರಸುಗುಡ ನಡುವಣ ರೈಲ್ವೆ ಹಳಿಗಳ ಸಮೀಪ ಇರುವುದು ಪತ್ತೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ರೈಲು ಸೇವೆಯನ್ನು ನಿಧಾನಿಸಲಾಗಿದೆ. ಪರಿಣಾಮವಾಗಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಇದರಿಂದಲೂ ರೈಲು ಸೇವೆಯಲ್ಲಿ ವಿಳಂಬವಾಗುತ್ತಿದೆ' ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಆದಿತ್ಯ ಚೌಧರಿ ತಿಳಿಸಿದರು.

