HEALTH TIPS

ಡಿ. 15ರಿಂದ ಜೋರ್ಡಾನ್‌, ಇಥಿಯೋಪಿಯಾ, ಒಮಾನ್‌ಗೆ ಪ್ರಧಾನಿ ಮೋದಿ ಭೇಟಿ

 ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 15ರಿಂದ ನಾಲ್ಕು ದಿನಗಳ ಕಾಲ ಜೋರ್ಡಾನ್, ಇಥಿಯೋಪಿಯಾ, ಒಮಾನ್‌ ದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ(ಎಂಇಎ) ಶುಕ್ರವಾರ ತಿಳಿಸಿದೆ.

ದೊರೆ ಎರಡನೇ ಅಬ್ದುಲ್ಲಾ ಬಿನ್‌ ಅಲ್‌ ಹುಸೇನ್‌ ಅವರ ಆಹ್ವಾನದ ಮೇರೆಗೆ ಮೊದಲಿಗೆ ಜೋರ್ಡಾನ್‌ಗೆ ತೆರಳಲಿರುವ ಮೋದಿ ಅವರು ಡಿ.15ರಿಂದ 16ರವರೆಗೆ ಅಲ್ಲಿ ತಂಗಲಿದ್ದಾರೆ.

ಈ ವೇಳೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಎಂಇಎ ತಿಳಿಸಿದೆ.

ಡಿ.16ರಂದು ಪ್ರಧಾನಿ ಜೋರ್ಡಾನ್‌ನಿಂದ ಹೊರಟು ಇಥಿಯೋಪಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇದು ಪೂರ್ವ ಆಫ್ರಿಕಾದ ದೇಶಕ್ಕೆ ಅವರ(ಮೋದಿ) ಮೊದಲ ಭೇಟಿಯಾಗಲಿದೆ. ಎರಡು ದಿನಗಳ ಭೇಟಿಯ ವೇಳೆ ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್ ಅಲಿ ಅವರೊಂದಿಗೆ ಸಹಕಾರ, ರಕ್ಷಣೆಗೆ ಸಂಬಂಧಪಟ್ಟಂತೆ ಮಾತುಕತೆ ನಡೆಸಲಿದ್ದಾರೆ ಎಂದಿದೆ.

ಪ್ರವಾಸದ ಕೊನೆಯ ಭಾಗವಾಗಿ, ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಡಿಸೆಂಬರ್ 17ರಿಂದ 18 ರವರೆಗೆ ಒಮಾನ್‌ಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದೆ.  







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries