ಪೆರ್ಲ: ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಶಾಲಾ ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್)ವಾರ್ಷಿಕ ಶಿಬಿರ ಡಿ.26ರಿಂದ ಜ. 1ರ ವರೆಗೆ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಜರುಗಲಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತಸಮಿತಿ ರಚನಾ ಸಭೆ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಗ್ರಂಥಾಲಯಸಭಾಂಗಣದಲ್ಲಿಜರುಗಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷ ಪುರುಷೋತ್ತಮ ಬಿ.ಎಂ ಅಧ್ಯಕ್ಷತೆ ವಹಿಸಿದ್ದರು.
ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಮಾಧವನ್ ಭಟ್ಟಾದಿರಿಪ್ಪಾಡ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಏಳು ದಿವಸಗಳ ಕಾಲ ನಡೆಯಲಿರುವ ಶಿಬಿರದ ಬಗ್ಗೆ ಪರಿಚಯ ನೀಡಿದರು. ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯರಾದ ಅಶ್ವಿನಿ ಕೆ.ಎಂ, ಹಮೀದ್ ಕೆಡೆಂಜಿ, ಎಣ್ಮಕಜೆ ಗ್ರಾಪಂ ಸದಸ್ಯೆ ವಿಜಯ ಕೆ.ಸಿ, ಶಿಕ್ಷಕರಾದ ಶ್ರೀನಾಥ್, ರಾಜೀವ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಸ್ವಾಗತ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪೆರಡಾಲ ಮತ್ತು ಪೆರ್ಲ ಶಾಲಾ ಆಡಳಿತ ಸಮಿತಿ ಪದಾಧಿಕಾರಿಗಳನ್ನು ಮುಖ್ಯ ರಕ್ಷಾಧಿಕಾರಿಗಳನ್ನಾಗಿ ಆಯ್ಕೆ ಮಡಲಾಯಿತು. ಎಣ್ಮಕಜೆ ಗ್ರಾಪಂ ಸದಸ್ಯೆ ಆಯಿಷಾ ಎ.ಎ ಅಧ್ಯಕ್ಷೆ, ಬದಿಯಡ್ಕ ಗ್ರಾಪಂ ಸದಸ್ಯೆ ಅಶ್ವಿನಿ ಕೆ.ಎಂ ಉಪಾಧ್ಯಕ್ಷೆ, ಪೆರ್ಲ ಶಾಲಾ ಪಿಟಿಎ ಅಧ್ಯಕ್ಷ ಪುರುಷೋತ್ತಮ ಬಿ.ಎಂ ಕಾರ್ಯಾಧ್ಯಕ್ಷ, ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಮಾಧವನ್ ಭಟ್ಟಾದಿರಿಪ್ಪಾಡ್ ಜನರಲ್ ಕನ್ವೀನರ್, ಪೆರ್ಲ ಶಾಲಾ ಮುಖ್ಯ ಶಿಕ್ಷಕ ಎನ್.ಕೇಶವ ಪ್ರಕಾಶ್ ಸಹ ಕನ್ವೀನರ್, ಎನ್ನೆಸ್ಸೆಸ್ ಪ್ರೋಗ್ರಾಂ ಅಧಿಕಾರಿಗಳಾದ ಶ್ರೀಜಾ, ಎಂ.ವಿ ಕೃಷ್ಣ ಕನ್ವೀನರ್‍ಗಳು, ಪ್ರೋಗ್ರಾಂ ಕಮಿಟಿ ಅಧ್ಯಕ್ಷೆಯಾಗಿ ಎಣ್ಮಕಜೆ ಗ್ರಾಪಂ ಸದಸ್ಯೆ ವಿಜಯಾ ಕೆ.ಸಿ, ಉಪಾಧ್ಯಕ್ಷೆಯಾಗಿ ಉಷಾಗಣೇಶ್, ಆಹಾರ ಸಮಿತಿಗೆ ಮನೋಹರನ್, ಶಶಿಕಲಾ, ರಕ್ಷಣಾ ವಿಭಾಗಕ್ಕೆ ಅಶ್ರಫ್ ಮತ್ರ್ಯ, ಮಹಮ್ಮದ್ ನವಾಜ್, ಧ್ವನಿಮತ್ತು ಬೆಳಕು ವಿಭಾಗ ಸಂಚಾಳಕರಾಗಿ ಸದಾಶಿವ ಭಟ್ ಹರಿನಿಲಯ, ಜಲಜಾಕ್ಷಿ, ವೇದಿಕೆ ಮತ್ತು ವಸತಿ ವಿಭಾಗಕ್ಕೆ ವೆಂಕಟರಾಜ ಮಿತ್ರ ಮತ್ತು ಸತ್ಯಾವತಿ ಅವರನ್ನು ಆಯ್ಕೆ ಮಾಡಲಾಯಿತು.
(ಸಾಂಕೇತಿಕ ಚಿತ್ರ)

