ತಿರುವನಂತಪುರಂ: ಕಳೆದ ಸ್ಥಳೀಯ ಸಂಸ್ಥೆ ಚುನಾವಣೆಯ ಅಧಿಕೃತ ಮತ ಎಣಿಕೆ ಬಿಡುಗಡೆಯಾದಾಗ, ಯುಡಿಎಫ್ ಎಲ್‍ಡಿಎಫ್‍ಗಿಂತ 28.79 ಲಕ್ಷ ಹೆಚ್ಚು ಮತಗಳನ್ನು ಗಳಿಸಿದೆ.
ಯುಡಿಎಫ್ ಶೇ. 41.20 ರಷ್ಟು ಮತಗಳನ್ನು ಪಡೆದರೆ, ಎಲ್‍ಡಿಎಫ್ ಶೇ. 35.95 ರಷ್ಟು ಮತಗಳನ್ನು ಗಳಿಸಿದೆ. ಎನ್‍ಡಿಎ ಶೇ. 15.05 ರಷ್ಟು ಮತಗಳನ್ನು ಗಳಿಸಿದೆ.
ನಗರಸಭೆ, ಕಾರ್ಪೋರೇಷನ್ ಮತ್ತು ತ್ರಿಸ್ತರ ಹಂತದ ಪಂಚಾಯತ್ ಚುನಾವಣೆಗಳಲ್ಲಿ ಒಟ್ಟು 5,48,68,290 ಮತಗಳು ಚಲಾವಣೆಯಾಗಿವೆ.
ಇದರಲ್ಲಿ ಯುಡಿಎಫ್ 2,26,04,339 ಮತಗಳನ್ನು ಪಡೆದರೆ, ಎಲ್‍ಡಿಎಫ್ 1,97,25,218 ಮತಗಳನ್ನು ಗಳಿಸಿದೆ. ಎನ್‍ಡಿಎ 82,58,873 ಮತಗಳನ್ನು ಗಳಿಸಿದೆ. ಇತರರು 42,79,860 ಮತಗಳನ್ನು ಪಡೆದರು.
ಗ್ರಾಮ ಪಂಚಾಯಿತಿಗಳಿಂದ ತೊಡಗಿ ಕಾರ್ಪೋರೇಷನ್ ಗಳವರೆಗೆ, ಎಲ್ಲಾ ಕ್ಷೇತ್ರಗಳಲ್ಲಿ ಯುಡಿಎಫ್ ವಿಜಯಶಾಲಿಯಾಗಿ ಹೊರಹೊಮ್ಮಿತು. ನಗರಸಭೆಗಳನ್ನು ಪರಿಗಣಿಸಿದಾಗ, ಯುಡಿಎಫ್ ಎಲ್‍ಡಿಎಫ್‍ಗಿಂತ ಶೇ 9.12 ರಷ್ಟು ಹೆಚ್ಚಿನ ಮತಗಳನ್ನು ಪಡೆದುಕೊಂಡಿದೆ.
2020 ರ ಚುನಾವಣೆಯಲ್ಲಿ, ಎಲ್‍ಡಿಎಫ್ ಗೆದ್ದ ಸ್ಥಳೀಯಾಡಳಿತ ಸಂಸ್ಥೆಗಳ ಸಂಖ್ಯೆಯಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿತ್ತು, ಒಟ್ಟು ಮತಗಳ ವಿಷಯದಲ್ಲಿ ಎಲ್‍ಡಿಎಫ್ ಯುಡಿಎಫ್‍ಗಿಂತ ಶೇ 1.66 ರಷ್ಟು ಹೆಚ್ಚಿನ ಮತಗಳನ್ನು ಮಾತ್ರ ಪಡೆದುಕೊಂಡಿತು. ಆ ವೇಳೆ ಶೇ.14.31 ರಷ್ಟು ಮತಗಳನ್ನು ಗಳಿಸಿದ್ದ ಎನ್‍ಡಿಎ, ಮತಗಳಲ್ಲಿ ಕೇವಲ ನಾಮಮಾತ್ರ ಹೆಚ್ಚಳವನ್ನು ಕಂಡಿದೆ.

