ಪೆರ್ಲ: ಬಣ್ಣುತ್ತಡ್ಕ ಶ್ರೀಅಯ್ಯಪ್ಪ ಸ್ವಾಮಿ ಭಜನಾ ಮಂದಿರ 39ನೇ ವಾರ್ಷಿಕೋತ್ಸವ ಇಂದು(ಡಿ. 20ಕ್ಕೆ) ಜರಗಲಿದೆ. ಇದರ ಅಂಗವಾಗಿ ಬೆಳಿಗ್ಗೆ 8ಕ್ಕೆ ದೀಪ ಪ್ರಜ್ವಲನೆ, ಬಳಿಕ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘ, ಬಣ್ಣುತ್ತಡ್ಕ ಇವರಿಂದ ಭಜನೆ, 9ಕ್ಕೆ ಮಾತೃಶ್ರೀ ಭಜನಾ ಸಂಘ, ಕೂಡ್ಲು ಇವರಿಂದ ಭಜನೆ, 10ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಆರಂಭ, 10.45 ರಾಧಾಕೃಷ್ಣ ಪಳ್ಳಕಾನ ಮತ್ತು ರಾಮಚಂದ್ರ ಭಟ್ ಮತ್ತು ಬಳಗದವರಿಂದ ಭಕ್ತಿಸಂಗೀತ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಶರಣಂವಿಳಿ, ಪ್ರಸಾದ ವಿತರಣೆ, 1ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ 1.15 ರಿಂದ ಗೌರವ್ ಡಿ. ಶೆಟ್ಟಿ ಮತ್ತು ಬಳಗ, ಅಡ್ಯಾರ್ - ಮಂಗಳೂರು ಇವರಿಂದ ಭಜನಾ ಸಂಕೀರ್ತನೆ, ಸಂಜೆ 3ಕ್ಕೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘ, ಅಗಲ್ಪಾಡಿ ಅವರಿಂದ ಭಜನೆ, ಸಂಜೆ 5. ರಿಂದ ಮನು ಪಣಿಕ್ಕರ್ ಮತ್ತು ಸಂಘ ಬೆದ್ರಡಿ-ಅಗಲ್ಪಾಡಿ, ಇವರಿಂದ ತಾಯಂಬಕಂ, 6ಕ್ಕೆ ಶ್ರೀ ದುರ್ಗಾ ಬಂಟರ ಮಹಿಳಾ ಸಂಘ, ಪೆರ್ಲ ಇವರಿಂದ ಭಜನೆ, 6.30 ರಿಂದ ಬಣ್ಣುತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಶಾಲೆಯ ಪರಿಸರದಿಂದ ಮಂದಿರಕ್ಕೆ ಉಲ್ಪೆ ಮೆರವಣಿಗೆ, ವಿಶೇಷ ಆಕರ್ಷಣೆಯಾಗಿ ನಾಸಿಕ ಬ್ಯಾಂಡ್ ಇರಲಿದೆ. ರಾತ್ರಿ 8.30ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಬಣ್ಣುತ್ತಡ್ಕ ಮತ್ತು ಸ್ವಾಮಿಗಳಿಂದ ಭಜನೆ, ರಾತ್ರಿ 9.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 9.45 ರಿಂದ ಶ್ರೀ ಬೆಂಕಿನಾಥೇಶ್ವರ ಕೃಪಾಪೆÇೀಷಿತ ದಶಾವತಾರ ಯಕ್ಷಗಾನ ಮಂಡಳಿ, ಕಳುವಾರು, ಬಾಳ, ಮಂಗಳೂರು-ಇವರಿಂದ ಯಕ್ಷಗಾನ ಬಯಲಾಟ
ಮತ್ತು ತುಳು ಚಲನಚಿತ್ರ ರಂಗದ ಕಲಾವಿದ ರವಿಕುಮಾರ್ ಸುರತ್ಕಲ್ ರಚನೆಯ ನಾಗ ತಂಬಿಲ ನಾಟಕ ಪ್ರದರ್ಶನಗೊಳ್ಳಲಿದೆ.

