ತಿರುವನಂತಪುರಂ: ಆಪರೇಷನ್ ಡಿ-ಹಂಟ್‍ನ ಭಾಗವಾಗಿ ರಾಜ್ಯಾದ್ಯಂತ ನಡೆಸಿದ ವಿಶೇಷ ಡ್ರೈವ್‍ನಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಹೊಂದಿದ್ದಕ್ಕಾಗಿ 54 ಪ್ರಕರಣಗಳು ದಾಖಲಾಗಿವೆ. 60 ಜನರನ್ನು ಬಂಧಿಸಲಾಯಿತು. ಪೆÇಲೀಸರು ಅವರಿಂದ ಎಂಡಿಎಂಎ, ಗಾಂಜಾ ಮತ್ತು ಗಾಂಜಾ ಬೀಡಿಯಂತಹ ಮಾರಕ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿರುವರು.
ನಿಷೇಧಿತ ಮಾದಕ ದ್ರವ್ಯಗಳ ಸಂಗ್ರಹಣೆ ಮತ್ತು ಮಾರಾಟದಲ್ಲಿ ತೊಡಗಿರುವವರನ್ನು ಗುರುತಿಸಲು ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಲು ಡಿಸೆಂಬರ್ 18 ರಂದು ರಾಜ್ಯದಾದ್ಯಂತ ಆಪರೇಷನ್ ಡಿ-ಹಂಟ್ ಅನ್ನು ನಡೆಸಲಾಯಿತು.
ಸಾರ್ವಜನಿಕರಿಂದ ಮಾದಕ ವಸ್ತುಗಳ ಬಗ್ಗೆ ಮಾಹಿತಿ ಪಡೆಯಲು ಮತ್ತು ಕ್ರಮ ಕೈಗೊಳ್ಳಲು 24 ಗಂಟೆಗಳ ಮಾದಕ ವಸ್ತುಗಳ ವಿರೋಧಿ ನಿಯಂತ್ರಣ ಕೊಠಡಿ (9497927797) ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

