ಪತ್ತನಂತಿಟ್ಟ: ಶಬರಿಮಲೆಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಶನಿವಾರ ಸಂಜೆ 6 ಗಂಟೆಯವರೆಗೆ 67,000 ಯಾತ್ರಿಕರು ಭೇಟಿ ನೀಡಿದ್ದಾರೆ. ಕಳೆದ ಎರಡು ದಿನಗಳಲ್ಲಿ ಸುಮಾರು ಒಂದು ಲಕ್ಷ ಜನರು ಭೇಟಿ ನೀಡಿದ್ದಾರೆ.
ಕರಿಮಲ ಮತ್ತು ಪುಲ್ಲುಮೇಡು ಸೇರಿದಂತೆ ಅರಣ್ಯ ಮಾರ್ಗಗಳ ಮೂಲಕ ಬರುವ ಯಾತ್ರಿಕರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಹದಿನೆಂಟನೇ ಮೆಟ್ಟಲು, ಸೋಪಾನಂ, ತಿರುಮುಟ್ಟಂ ಮತ್ತು ಮಾಳಿಗಪ್ಪುರಂಗಳಲ್ಲಿ ಮೊಬೈಲ್ ಛಾಯಾಗ್ರಹಣಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಹೈಕೋರ್ಟ್ ನಿರ್ದೇಶನದ ಪ್ರಕಾರ ಪೋಲೀಸರು ತಿಳಿಸಿದ್ದಾರೆ.
.

