HEALTH TIPS

Artificial Intelligence: ಬಾಗಿಲು ತೆಗೆದಾಯ್ತು, ಎಂಟ್ರಿ ಕೊಟ್ಟಾಯ್ತು! ಇನ್ನೇನಿದ್ರೂ ನಂದೇ ಹವಾ ಅಂತಿದೆ AI!

ಹೊಸ ವರ್ಷಕ್ಕೆ (New Year) ಕ್ಷಣಗಣನೆ ಶುರುವಾಗಿದೆ. ಇನ್ನೆರಡು ದಿನ ಕಳೆದ್ರೆ 2026ರ ಹೊಸ ವರ್ಷಕ್ಕೆ ಕಾಲಿಡುತ್ತೇವೆ. ವರ್ಷಗಳು ಬದಲಾದಂತೆ, ಜನರು ಕೂಡ ಬದಲಾಗುತ್ತಿದ್ದಾರೆ. ಹಾಗೇ ಟೆಕ್ನಾಲಜಿ (Technology) ಕೂಡ ಶರವೇಗದಲ್ಲಿ ಬೆಳೆಯುತ್ತಿದೆ. ಇದನ್ನ ನಾವು ಎಐ ಯುಗ ಅಂದ್ರು ತಪ್ಪಾಗಲ್ಲ, ಜನರು ಟೆಕ್ನಾಲಜಿ ಬದಲಾದಂತೆ ಎಐ (Artificial Intelligence) ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.

ಚಾಟ್​ಜಿಪಿಟಿ (ChatGpt) , ಗ್ರೋಕ್ (Grok), ಜೆಮಿನಿ ಎಐ (GeminiAi) ಹೀಗೆ ಹಲವಾರು ಎಐ ಸಾಫ್ಟ್​ವೇರ್​ಗಳನ್ನ ಜನರು ತಮ್ಮ ಸ್ನೇಹಿತರೆಂದೆ ಭಾವಿಸಿದ್ದಾರೆ. ಡೈಲಿ ರೂಟಿನ್​ನಿಂದ ಹಿಡಿದು ಜನರ ಪ್ರತಿಯೊಂದು ಸಮಸ್ಯೆಗೂ ಎಐ ಬಳಿ ಉತ್ತರಗಳು ಸಲಹೆಗಳು ಸಿಗುತ್ತಿದ್ದು, ಎಐ ಈಗ ಬದುಕಿನ ಭಾಗವಾಗಿ ಹೋಗಿದೆ.

2025ರಲ್ಲಿ ಎಐ ಪಾತ್ರ ಹೇಗಿತ್ತು?

ಕಂಪ್ಯೂಟರ್ ರೋಬೋಟ್‌ನಂತೆ ಈ ಎಐ ಕೂಡ ಕೆಲಸ ಮಾಡುತ್ತೆ. 2025ರಲ್ಲಿ ಈ ಬಳಕೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಮೊದಲು ಕೇವಲ ಕೋಡಿಂಗ್​ಗಾಗಿ ವಿದ್ಯಾರ್ಥಿಗಳು ಬಳಸುತ್ತಿದ್ದರು. ಇದೀಗ ಜನರು ಎಐ ಮೇಲೆ ತಮ್ಮ ಸ್ವಿಇಚ್ಛಾ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದು, ಚಿಕ್ಕ ಚಿಕ್ಕ ವಿಷಯಕ್ಕೂ ಎಐ ಬಳಿ ಉತ್ತರ ಹುಡುಕಿಕೊಂಡು ಹೋಗುತ್ತಿದ್ದಾರೆ.

ನ್ಯಾನೋ ಬನಾನ ಕ್ರೇಜ್​!

ಇದಷ್ಟೇ ಅಲ್ಲದೇ 2025ರಲ್ಲಿ ಕೆಲ ಎಐ ಟೂಲ್​ಗಳು ಕೂಡ ಸಾಕಷ್ಟು ಸದ್ದು ಮಾಡಿತ್ತು. ಇದರ ಕ್ರೇಜ್​ ಹೇಗಿತ್ತು ಅಂದರೇ ಇಡೀ ಯುವ ಸಮೂಹವೇ ಇದರ ಹಿಂದೆ ಬಿದಿತ್ತು, ಗೂಗಲ್​ ಜೆಮಿನಿ ಎಐನ ನ್ಯಾನೋ ಬನಾನಾ ಟೆಕ್ನೋಲಾಜಿ ಯುವ ಸಮೂಹಕ್ಕೆ ಚಿರಪರಿಚಿತವಾಗಿದೆ. ಇತ್ತೀಚಿಗೆ ನ್ಯಾನೋ ಬನಾನಾ AI ಫೋಟೋ ಎಡಿಟ್​ ಸಿಕ್ಕಾಪಟ್ಟೆ ಟ್ರೆಂಡ್​ ಆಗಿತ್ತು. ಯುವಕ ಯುವತಿಯರು ನಮ್ದು ಒಂದು ಫೋಟೋ ಇರ್ಲಿ ಅಂತಾ ಪ್ರಾಂಪ್ಟ್​ ಬಳಸಿ ಫೋಟೊಗಳನ್ನ ಜೆನರೇಟ್​ ಮಾಡಿ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು. ಕೇವಲ ಫೋಟೋಗಳು ಮಾತ್ರವಲ್ಲದೇ 2025ರಲ್ಲಿ ಎಐ ವಿಡಿಯೋಗಳು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು.

2026ರಲ್ಲಿ ಹೇಗಿರಲಿದೆ ಎಐ?

2026ರಲ್ಲಿ ಎಐನ ಪಾತ್ರ ಮತ್ತು ಪರಿಣಾಮಗಳು ಬಹಳ ಪ್ರಮುಖ ಮತ್ತು ವ್ಯಾಪಕವಾಗಿ ಬದಲಾಗುತ್ತಿವೆ ಜೀವನದ‌ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅದು ಹೊಸ ಹೊಸ ರೀತಿಯಲ್ಲಿ ಪರಿಣಮಿಸುತ್ತಿದೆ. ಇಲ್ಲಿದೆ 2026ರಲ್ಲಿ ಎಐ ಹೇಗೆ ಬದಲಾಗಿದೆ ಎಂಬುದು ಪ್ರಮುಖ ಅಂಶಗಳು ಇಲ್ಲಿದೆ

AI-ಮಾನವ ಸಹಕಾರ ಹೆಚ್ಚುತ್ತಲಿದೆ

2026ರಲ್ಲಿ AIಯನ್ನು ಸಹಾಯಕ/ಸಹೋದ್ಯೋಗಿ ರೂಪದಲ್ಲಿ ಬಳಸಲಾಗುತ್ತದೆ ಕೆಲಸಗಳು ಶೀಘ್ರವಾಗಿ, ಹೆಚ್ಚು ದಕ್ಷವಾಗಿ ನಡೆಯುತ್ತದೆ ಎಂದು ಊಹಿಸಲಾಗಿದೆ. AI ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಹಿರಿಯ ಸಹಾಯಕನಾಗಿ ಕೆಲಸ ಮಾಡುತ್ತದೆ ಎನ್ನಲಾಗಿದೆ

ಸ್ವಯಂಚಾಲಿತ AI ಏಜೆಂಟ್ಸ್

AI ಮೊದಲಿನಂತೆ ಕೇವಲ ಪ್ರಶ್ನೆಗೆ ಉತ್ತರಿಸುವ ಬದಲು ಹಲವು ಹಂತದ ಕೆಲಸಗಳನ್ನು ನಿಭಾಯಿಸುತ್ತದೆ ಎಂದು ತಿಳಿದು ಬಂದಿದೆ ಉದಾಹರಣೆಗೆ ಇಮೇಲ್ ಶೆಡ್ಯೂಲ್ ಮಾಡುವುದು, ಮಾಹಿತಿ ಸಂಶೋಧನೆ ಸೇರಿದಂತೆ ಇನ್ನು ಹಲವಾರು ಕ್ಷೇತ್ರಗಳಲ್ಲಿ ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸಲಿದೆ. ಈ ಸ್ವತಂತ್ರ ಏಜೆಂಟ್ಸ್​​ಗಳು 2026ರಲ್ಲಿ ವಾಸ್ತವಿಕ ಕೆಲಸಗಳಲ್ಲಿ ವ್ಯಾಪಕವಾಗಿ ಬಳಸಲಿವೆ ಅದರ ಪರಿಣಾಮರಾಗಿ ಕೆಲಸದ ವಿಧಾನಗಳು ಮತ್ತು ROI (Return-on-Investment) ಬದಲಾವಣೆಗೆ ಒಳಗಾಗುತ್ತವೆ.

ಒಟ್ಟಾರೆಯಾಗಿ ವರ್ಷಗಳು ಕಳೆದಂತೆ ಜನರು ಹೆಚ್ಚು ಕೃತಕ ಬುದ್ಧಿಮತ್ತೆ ಮೇಲೆ ಹೆಚ್ಚು ಅವಲಂಬಿತರಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಪ್ರತಿಯೊಂದು ಕೆಲಸಕ್ಕೂ AIನ ಬಳಕೆಯಿಂದ, ಮನುಷ್ಯನು ಸ್ವಂತವಾಗಿ ಯೋಚನೆ ಮಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾನೆ. ಮೆದುಳಿಗೆ ಕೆಲಸ ಮಾಡಲು ಅವಕಾಶ ನೀಡದ ಕಾರಣ ಸೃಜನಶೀಲತೆ ನಾಶವಾಗುತ್ತದೆ. AI ಒದಗಿಸುವ ಮಾಹಿತಿಯನ್ನು ಮಾತ್ರ ಸತ್ಯವೆಂದು ನಂಬುವುದರಿಂದ ವಿಶ್ಲೇಷಣಾತ್ಮಕ ಸಾಮರ್ಥ್ಯ ಕೂಡ ಕುಗ್ಗುತ್ತಿದೆ. ಇದು ಭವಿಷ್ಯದಲ್ಲಿ ಮನುಷ್ಯರನ್ನು ಮತ್ತಷ್ಟು ಯಂತ್ರದ ಮೇಲೆ ಅವಲಂಬಿತರನ್ನಾಗಿ ಮಾಡುತ್ತದೆ. ಇದಷ್ಟೇ ಅಲ್ಲದೇ ಉದ್ಯೋಗಿಗಳ ಕೆಲಸವನ್ನ ಸಹ ಕಸಿದುಕೊಳ್ಳುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಅದಕ್ಕಾಗಿ ನಾವು ತಂತ್ರಜ್ಞಾನವನ್ನು ನಮ್ಮ ಬೆಳವಣಿಗೆಗೆ ಮಾತ್ರ ಬಳಸಬೇಕು, ಆದರೆ ಅದರ ಗುಲಾಮರಾಗಬಾರದು. ಅಗತ್ಯವಿರುವಂತೆ ಮಾತ್ರ AI ಅನ್ನು ಬಳಸುವುದು ಮತ್ತು ನಮ್ಮ ಸ್ವಂತ ಬುದ್ಧಿಮತ್ತೆಯನ್ನು ಹರಿತಗೊಳಿಸುವುದು ಬಹಳ ಮುಖ್ಯ. AI ಕೇವಲ ಒಂದು ಸಾಧನ, ಅದು ಮನುಷ್ಯರಿಗೆ ಬದಲಿಯಲ್ಲ ಎಂಬುದನ್ನು ನಾವು ಗುರುತಿಸಬೇಕಾಗಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries