HEALTH TIPS

ಕಣ್ಣೂರು ವಿವಿ ಕಲೋತ್ಸವ: ಯಕ್ಷಗಾನ ಸ್ಪರ್ಧೆಯಲ್ಲಿ ಕಾಸರಗೋಡು ಸರ್ಕಾರಿ ಕಾಲೇಜು ಪ್ರಥಮ

ಕಾಸರಗೋಡು: ಪಡನ್ನಕ್ಕಾಡ್ ನೆಹರು ಆಟ್ರ್ಸ್-ಸೈನ್ಸ್ ಕಾಲೇಜಲ್ಲಿ ನಡೆದ ಕಣ್ಣೂರು ವಿಶ್ವವಿದ್ಯಾನಿಲಯ ಕಲೋತ್ಸವ-2026 ಯಕ್ಷಗಾನ ಸ್ಪರ್ಧೆಯಲ್ಲಿ ಕಾಸರಗೋಡು ಸರ್ಕಾರಿ ಕಾಲೇಜು 'ಎ' ಗ್ರೇಡ್ ಸಹಿತ ಸತತ ಎರಡನೇ ಬಾರಿಗೆ ಪ್ರಥಮ ಸ್ಥಾನವನ್ನು ಪಡೆದಿದೆ.

'ಬಬ್ರುವಾಹನ ಕಾಳಗ' ಪ್ರಸಂಗವನ್ನು ಪ್ರದರ್ಶಿಸಿದ್ದ ತಂಡದಲ್ಲಿ ಭಾಗವತರಾಗಿ ಕು. ಹೇಮಸ್ವಾತಿ ಕುರಿಯಾಜೆ, ಚೆಂಡೆಯಲ್ಲಿ ವರ್ಷಿತ್ ಕೆಜ್ಜೆಕ್ಕಾರು, ಮದ್ದಳೆಯಲ್ಲಿ ಶಿವಶಂಕರ ಅಂಬೆಮೂಲೆ, ಚಕ್ರತಾಳ ಹಾಗೂ ನಿರ್ದೇಶನದಲ್ಲಿ ಬಾಲಕೃಷ್ಣ ಏಳ್ಕಾನ, ವೇಷಭೂಷಣದಲ್ಲಿ ಶ್ರೀ ದುರ್ಗಾಂಬಾ ವೇಷಭೂಷಣ ಮಲ್ಲ ಸಹಕರಿಸಿದರು.

ಮುಮ್ಮೇಳದಲ್ಲಿ ಅರ್ಜುನ- ಯಸ್. ಸನತ್ ರಾಜ್, ವೃಷಕೇತು - ಲಿಖಿತ್. ವಿ, ಬಬ್ರುವಾಹನ- ಹರ್ಷ ಎಂ.ಆರ್, ಮಂತ್ರಿ- ರಶ್ಮಿಪ್ರಭಾ. ಬಿ.ಜೆ, ಚಿತ್ರಾಂಗದೆ- ಆದಿಶ್ರೀ ಎಸ್.ಯನ್, ಅನುಸಾಲ್ವ- ಎ. ವಿವೇಕ್, ಕೃಷ್ಣ- ಕೀರ್ತನಾ ಯನ್, ರಂಗ ಸಹಾಯಕರಾಗಿ ಮನೀಶ್ ಹಾಗೂ ವಿಖ್ಯಾತ್ ಸಿ.ಎ ಭಾಗವಹಿಸಿದರು. ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ವಿದ್ಯಾರ್ಥಿಗಳ ಜೊತೆಗಿದ್ದು ಸಹಕರಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries