HEALTH TIPS

ಉಕ್ರೇನ್ ವಿಷಯದಲ್ಲಿ ಅಮೆರಿಕದೊಂದಿಗೆ ಭಿನ್ನಾಭಿಪ್ರಾಯಗಳಿಲ್ಲ ಎಂದ ರಷ್ಯಾ

 ಮಾಸ್ಕೊ: ಈ ತಿಂಗಳ ಆರಂಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಗೂ ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್‌ ಅವರು ನಡೆಸಿದ ಸಭೆಯ ಬಳಿಕ ಉಕ್ರೇನ್‌ ವಿಚಾರವಾಗಿ ಉಭಯ ರಾಷ್ಟ್ರಗಳು ಹೊಂದಿದ್ದ ಭಿನ್ನಾಭಿಪ್ರಾಯಗಳು ಬಗೆಹರಿದಿವೆ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್‌ ಗುರುವಾರ ತಿಳಿಸಿದ್ದಾರೆ. 


ಡಿಸೆಂಬರ್‌ 2ರಂದು ಪುಟಿನ್‌ ಹಾಗೂ ಸ್ಟೀವ್ ಮಾತುಕತೆ ನಡೆಸಿದ್ದರು. ಉಕ್ರೇನ್‌ ಸಮರವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಮಹತ್ವದ ಪ್ರಗತಿ ಸಾಧ್ಯವಾಗಿಲ್ಲದಿದ್ದರೂ, ಸಭೆಯು ರಚನಾತ್ಮಕವಾಗಿತ್ತು ಎಂದು ಲಾವ್ರೋವ್‌ ಶ್ಲಾಘಿಸಿದ್ದಾರೆ.

ಅಲಸ್ಕಾದಲ್ಲಿ ಇದೇ ವರ್ಷ ಆಗಸ್ಟ್‌ನಲ್ಲಿ ನಡೆದ ಶೃಂಗ ಸಭೆ ವೇಳೆ ಪುಟಿನ್‌ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವಣ ಪರಸ್ಪರ ಕರಾರು ಏರ್ಪಟ್ಟಿರುವುದನ್ನು ಇತ್ತೀಚಿನ ಮಾತುಕತೆ ದೃಢಪಡಿಸಿದೆ ಎಂದು ಮಾಹಿತಿ ನೀಡಿದ್ದಾರೆ.

'ಉಕ್ರೇನ್ ವಿಷಯವಾಗಿ ಅಮೆರಿಕದ ಜೊತೆ ಹೊಂದಿದ್ದ ಭಿನ್ನಾಭಿಪ್ರಾಯಗಳು ಹಾಗೂ ದೋಷಪೂರಿತ ಗ್ರಹಿಕೆ ಈಗ ಬಗೆಹರಿದಿವೆ ಎಂದು ವೈಯಕ್ತಿಕವಾಗಿ ನಂಬಿದ್ದೇನೆ' ಎಂದು ಲಾವ್ರೋವ್‌ ತಿಳಿಸಿದ್ದಾರೆ.

ಉಕ್ರೇನ್‌ನಲ್ಲಿ ದೀರ್ಘಾವಧಿವರೆಗೆ ಸುಸ್ಥಿರ ಶಾಂತಿ ಒಪ್ಪಂದಕ್ಕೆ ಆಧಾರವಾಗಬಲ್ಲ ಪೂರಕ ದಾಖಲೆಗಳನ್ನು ಸಂಬಂಧಪಟ್ಟ ಎಲ್ಲ ಪಕ್ಷಗಳಿಗೂ ಒದಗಿಸಬೇಕು. ಆ ನಿಟ್ಟಿನಲ್ಲಿ ಖಾತ್ರಿಯನ್ನು ರಷ್ಯಾ ಬಯಸುತ್ತದೆ ಎಂದು ಸಚಿವ ಸ್ಪಷ್ಟಪಡಿಸಿದ್ದಾರೆ.

ಉಕ್ರೇನ್‌ ಕೇಂದ್ರೀಕೃತವಾಗಿಯೇ ಭದ್ರತೆಯ ಖಾತ್ರಿ ವಿಚಾರವನ್ನು ಚರ್ಚಿಸಲು ಸಾಧ್ಯವಿಲ್ಲ. ಸಾಮೂಹಿಕ ಭದ್ರತಾ ಖಾತರಿ ಕುರಿತು ಅಮೆರಿಕದ ಸಹೋದ್ಯೋಗಿಗಳಿಗೆ ತಿಳಿಸಿದ್ದೇವೆ. ಹಾಗೆಯೇ, ಉಕ್ರೇನ್ ನ್ಯಾಟೊ ಸದಸ್ಯತ್ವ ಪಡೆಯುವುದನ್ನು ರಷ್ಯಾ ಒಪ್ಪುವುದಿಲ್ಲ. ಉಕ್ರೇನ್‌ನಲ್ಲಿ ರಷ್ಯನ್ ಭಾಷಿಕರಿಗೆ ರಕ್ಷಣೆ ನೀಡಬೇಕೆಂಬುದು ನಮ್ಮ ಬಯಕೆಯಾಗಿದೆ ಎಂದೂ ವಿವರಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries