ಕಾಸರಗೋಡು: ಕಾಸರಗೋಡು ಬ್ಲಾಕ್ ಪಂಚಾಯತ್‍ನ 2025-30 ನೇ ಸಾಲಿನ ಜನಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಬ್ಲಾಕ್ ಪಂಚಾಯತ್ ಆವರಣದಲ್ಲಿ ಭಾನುವಾರ ನಡೆಯಿತು. ಬ್ಲಾಕ್ ಪಂಚಾಯತ್‍ನ ಎಲ್ಲಾ 18 ವಿಭಾಗಗಳ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು. ಚುನಾವಣಾಧಿಕಾರಿ ಮತ್ತು ಕಾಸರಗೋಡು ಕಂದಾಯ ವಿಭಾಗೀಯ ಅಧಿಕಾರಿ ಬಿನು ಜೋಸೆಫ್ ಹಿರಿಯ ಸದಸ್ಯೆ ಚೂರಿ ವಿಭಾಗದ ಲೀಲಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ನಂತರ ಇತರ ಸದಸ್ಯರು ವಿಭಾಗಗಳ ಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಆರಿಕ್ಕಾಡಿ ವಿಭಾಗದಿಂದ ಪಿ ಎಂ ನಾಜಿಮಾ, ಮೊಗ್ರಾಲ್ ವಿಭಾಗದಿಂದ ಪೃಥ್ವಿ ರಾಜ್ ಜಗನ್ನಾಥ ಶೆಟ್ಟಿ, ಕುಂಬಳೆ ರೈಲು ನಿಲ್ದಾಣ ವಿಭಾಗದಿಂದ ಅಶ್ರಫ್ ಕಾರ್ಲೆ, ಎರಿಯಾಲ್ ವಿಭಾಗದಿಂದ ಜೋಯಾ ಲತೀಫ್, ರಾಮದಾಸ್ ನಗರ ವಿಭಾಗದಿಂದ ಅಜ್ಮಿನಾ ಹಬೀಬ್ ಚೆಟ್ಟುಂಕುಝಿ, ಉಳಿಯತ್ತಡ್ಕ ವಿಭಾಗದಿಂದ ಉಷಾ ಅರ್ಜುನನ್, ಬೇಳ ಡಿವಿಜನ್‍ನಿಂದ ಖಾದರ್ ಮಾನ್ಯ, ನೀರ್ಚಾಲು ವಿಭಾಗದಿಂದ ಮಹೇಶ್ ವಳಕ್ಕುಂಜ, ಬದಿಯಡ್ಕ ವಿಭಾಗದಿಂದ ಮೊಯ್ದು ಗೋಳಿಯಡ್ಕ, ಎಡನೀರು ವಿಭಾಗದಿಂದ ಸಿ ವಿ ಜೇಮ್ಸ್, ಪಾಡಿ ವಿಭಾಗದಿಂದ ಸಕೀನಾ ಅಬ್ದುಲ್ಲಾ ಹಾಜಿ ಗೋವಾ, ಸಿವಿಲ್ ಸ್ಟೇಷನ್ ವಿಭಾಗದಿಂದ ಅಬ್ದುಲ್ಲ ಕುಂಞÂ್ಞ ಚೆರ್ಕಳ, ಚೆಂಗಳ ವಿಭಾಗದಿಂದ ನಝೀಫ ಎ ಕೆ ಜಲೀಲ್, ತೆಕ್ಕಿಲ್ ವಿಭಾಗದಿಂದ ಅನ್ವರ್ ಕೋಳಿಯಡ್ಕ, ಕಳನಾಡು ವಿಭಾಗದ ಮರಿಯಾ ಮಾಹಿನ್,ಮೇಲ್ಪರಂಬ ವಿಭಾಗದ ಶಾಹಿದಾ, ಚೆಮ್ನಾಡ್ ವಿಭಾಗದಿಂದ ಸಫೀನಾ ಹುಸೈನ್ ಪ್ರಮಾಣ ವಚನ ಸ್ವೀಕರಿಸಿದ ಇತರೆ ಜನಪ್ರತಿನಿಧಿಗಳು.
ಪ್ರಮಾಣ ವಚನ ಸ್ವೀಕಾರದ ನಂತರ ಲೀಲಾ ಅವರ ಅಧ್ಯಕ್ಷತೆಯಲ್ಲಿ ಮೊದಲ ಸಭೆ ನಡೆಯಿತು. ಈ ತಿಂಗಳ 27 ರಂದು ಬೆಳಿಗ್ಗೆ 10.30 ಕ್ಕೆ ಅಧ್ಯಕ್ಷರ ಚುನಾವಣೆ ಮತ್ತು ಮಧ್ಯಾಹ್ನ 2.30 ಕ್ಕೆ ಉಪಾಧ್ಯಕ್ಷ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಅನೇಕರು ಸಮಾರಂಭದಲ್ಲಿ ಭಾಗವಹಿಸಿದ್ದರು.

