HEALTH TIPS

ಬೇಕಲ್ ಅಂತರರಾಷ್ಟ್ರೀಯ ಬೀಚ್ ಉತ್ಸವದ ಮೂರನೇ ಆವೃತ್ತಿಗೆ ಚಾಲನೆ- ಸಾಥ್ ನೀಡಿದ ಬಾಂಬೆ ಚಿತ್ರ ಕಲಾವಿದರ ತಂಡ

ಕಾಸರಗೋಡು: ಬೇಕಲ್ ಅಂತರರಾಷ್ಟ್ರೀಯ ಬೀಚ್ ಉತ್ಸವದ ಮೂರನೇ ಆವೃತ್ತಿಗೆ ರಾಜ್ಯ ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಖಾತೆ ಸಚಿವಪಿ.ಎ.ಮಹಮ್ಮದ್ ರಿಯಾಸ್ ಬೇಏಕಲಕೋಟೆಯಲ್ಲಿಚಾಲನೆ ನೀಡಿದರು. ಖ್ಯಾತ ನಿರ್ದೇಶಕ ಮಣಿರತ್ನಂ, ಚಲನಚಿತ್ರ ತಾರೆ ಮನೀಷಾ ಕೊಯಿರಾಲ ಮತ್ತು ಛಾಯಾಗ್ರಾಹಕ ರಾಜೀವ್ ಮೆನನ್ ಅವರೊಂದಿಗೆ ಸಚಿವಮಹಮ್ಮದ್ ರಿಯಾಸ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. 


ಈ ಸಂದರ್ಭ ಮಾತನಾಡಿದ ಅವರು, ಸಿನಿಮಾ-ಪ್ರವಾಸೋದ್ಯಮ ಯೋಜನೆಯನ್ವಯ ಕೇರಳದ ಹಳೇ ಮತ್ತು ಹೊಸ ಚಲನಚಿತ್ರಗಳ ಚಿತ್ರೀಕರಣ ನಡೆಸಲಾದ ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಪ್ರಚಾರ ಮಾಡಲು ಸಾಧ್ಯವಾಗಲಿದೆ ಎಂಬುದಕ್ಕೆ ಬೇಕಲಕೋಟೆಯಲ್ಲಿ ಚಿತ್ರೀಕರಿಸಲಾದ ಬಾಂಬೆ ಚಿತ್ರ ನಿದರ್ಶನವಾಗಿದೆ. ಚಲನಚಿತ್ರ ಪ್ರವಾಸೋದ್ಯಮದ ಕಲ್ಪನೆಯನ್ನು 2023 ರಲ್ಲಿ ಮಣಿರತ್ನಂ ಅವರಿಗೆ ತಿಳಿಸಲಾಗಿತ್ತು. ಇದರ ಅಂಗವಾಗಿ ಎರಡು ವರ್ಷಗಳ ನಂತರ ತಮ್ಮ ತಂಡದೊಂದಿಗೆ ಬೇಕಲಕೋಟೆಗೆ ಆಗಮಿಸಿದ ತಂಡದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.  ಶಾಸಕ ಸಿ.ಎಚ್.ಕುಂಜಂಬು ಅಧ್ಯಕ್ಷತೆ ವಹಿಸಿದ್ದರು.

ನಿರ್ದೇಶಕ ಮಣಿರತ್ನಂ, ನಾಯಕಿ ಮನಿಷಾ ಕೊಯಿರಾಲ ಮತ್ತು ಬೇಕಲ್ ಕೋಟೆಯಲ್ಲಿ ಬಾಂಬೆ ಚಿತ್ರವನ್ನು ಚಿತ್ರೀಕರಿಸಿದ ಛಾಯಾಗ್ರಾಹಕ ರಾಜೀವ್ ಮೆನನ್ ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭ ಸಚಿವ ಮಹಮ್ಮದ್ ರಿಯಾಸ್ ಅವರು ಚಿತ್ರ ತಂಡದ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. .ಶಾಸಕರಾದ ಎಂ.ರಾಜಗೋಪಾಲನ್, ಇ.ಚಂದ್ರಶೇಖರನ್, ಎನ್.ಎ.ನೆಲ್ಲಿಕುನ್ನು, ಮಾಜಿ ಶಾಸಕ ಕೆ.ವಿ.ಕುಞÂರಾಮನ್, ಮಾಜಿ ಸಂಸದ ಪಿ.ಪಿ.ಕರುಣಾಕರನ್, ವಿವಿಧ ಪಕ್ಷದ ರಾಜಕೀಯ ಪ್ರತಿನಿಧಿಗಳಾದ ಹಕೀಂ ಕುನ್ನಿಲ್, ಕೆ.ಇ.ಎ.ಬಕ್ಕರ್, ಹಮೀದ್ ಹಾಜಿ, ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ಜಿಲ್ಲಾ ಪೆÇಲೀಸ್ ಮುಖ್ಯಸ್ಥ ವಿಜಯ್ ಭರತ್ ರೆಡ್ಡಿ ಮತ್ತು ಜನರಲ್ ಕನ್ವೀನರ್ ಬೇಬಿ ಬಾಲಕೃಷ್ಣನ್ ಉಪಸ್ಥಿತರಿದ್ದರು.

 ಕೇರಳ ಪ್ರವಾಸೋದ್ಯಮ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಸುರೇಂದ್ರನ್ ಸ್ವಾಗತಿಸಿದರು. ಬೇಕಲ್ ರೆಸಾಟ್ರ್ಸ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ. ಶಿಜಿನ್‍ವಂದಿಸಿದರು. ಡಿ. 31ರ ವರೆಗೆ ಬೇಕಲ್ ಬೀಚ್ ಉತ್ಸವ ನಡೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries