ಕಣ್ಣೂರು: ಕಣ್ಣೂರು ಜಿಲ್ಲೆಯ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಪ್ರಮಾಣವಚನ ಸಮಾರಂಭಗಳಿಗೆ ಹಲವು ಸದಸ್ಯರು ಜೈಲ್ಲಿರುವ ಕಾರಣ ಹಾಜರಾಗಿರಲಿಲ್ಲ.
ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ನಂತರ ಜೈಲಿನಲ್ಲಿರುವ ಬಿಜೆಪಿ ಮತ್ತು ಸಿಪಿಎಂ ಕೌನ್ಸಿಲರ್‍ಗಳು ಪ್ರಮಾಣವಚನ ಸ್ವೀಕರಿಸಲಿಲ್ಲ.
ಪಯ್ಯನ್ನೂರು ನಗರಸಭೆಯ ಸಿಪಿಎಂ ಕೌನ್ಸಿಲರ್ ವಿ.ಕೆ. ನಿಶಾದ್ ಮತ್ತು ತಲಶ್ಶೇರಿ ನಗರಸಭೆಯ ಬಿಜೆಪಿ ಕೌನ್ಸಿಲರ್ ಯು. ಪ್ರಶಾಂತ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಲಿಲ್ಲ.
ಪಯ್ಯನ್ನೂರಿನಲ್ಲಿ ಬಾಂಬ್ ಎಸೆಯುವ ಮೂಲಕ ಪೆÇಲೀಸ್ ಅಧಿಕಾರಿಯನ್ನು ಕೊಲ್ಲಲು ಯತ್ನಿಸಿದ ಪ್ರಕರಣದಲ್ಲಿ ವಿ.ಕೆ. ನಿಶಾದ್ ಶಿಕ್ಷೆಗೊಳಗಾಗಿದ್ದರೆ, ತಲಶ್ಶೇರಿಯ ಕೊಡಿಯೇರಿಯಲ್ಲಿ ಸಿಪಿಎಂ ಕಾರ್ಯಕರ್ತ ಪಿ. ರಾಜೇಶ್ ಅವರನ್ನು ಕೊಲ್ಲಲು ಯತ್ನಿಸಿದ ಪ್ರಕರಣದಲ್ಲಿ ಯು. ಪ್ರಶಾಂತ್ ಶಿಕ್ಷೆಗೊಳಗಾಗಿರುವರು.

