ತಿರುವನಂತಪುರಂ: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ರಾಜ್ಯ ಚುನಾವಣಾ ಆಯುಕ್ತ ಎ. ಶಹಜಹಾನ್ ಅವರಿಗೆ ಚಿನ್ನದ ಪದಕ ನೀಡಿ ಸನ್ಮಾನಿಸಿದರು.
ಸಾರ್ವತ್ರಿಕ ಚುನಾವಣೆಗಳ ಕುರಿತು ವರದಿಯನ್ನು ಸಲ್ಲಿಸಲು ಲೋಕಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದಾಗ ರಾಜ್ಯಪಾಲರು ಆಯುಕ್ತರನ್ನು ಅಭಿನಂದಿಸಿದರು. ಚುನಾವಣೆಗಳು ಶಾಂತಿಯುತವಾಗಿ ಮತ್ತು ಯಾವುದೇ ದೂರುಗಳಿಲ್ಲದೆ ನಡೆದಿದ್ದಕ್ಕೆ ರಾಜ್ಯಪಾಲರು ಸಂತೋಷ ವ್ಯಕ್ತಪಡಿಸಿದರು.

