ಕಾಸರಗೋಡು: ಪುಲ್ಲೂರು ಪೆರಿಯ ಪಂಚಾಯತಿ ವ್ಯಾಪ್ತಿಯಲ್ಲಿ ಮತ್ತೆ ಚಿರತೆ ದಾಳಿ ನಡೆದಿದ್ದು, ಅಂಬಲತ್ತರ ನಿವಾಸಿ ವಿಜಯನ್ ಎಂಬವರ ಪೆರಿಯ ನಾರ್ಕೊಳಂ ಭಗವತಿ ಕ್ಷೇತ್ರ ಸಮೀಪದ ರಬ್ಬರ್ ತೋಟದಲ್ಲಿ ಸಾಕು ನಾಯಿಯೊಂದನ್ನು ಚಿರತೆ ಕೊಂದು ಹಾಕಿದೆ. ಶುಕ್ರವಾರ ಬೆಳಿಗ್ಗೆ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಚಿರತೆ ದಾಳಿಯಿಂದ ಮೃತ ಪಟ್ಟ ಚಿರತೆಯ ಕಳೇಬರ ಪತ್ತೆಹಚ್ಚಿದ್ದರು. ಈ ಬಗ್ಗೆ ಕಾಂರ್ಇಕರು ಅಂಬಲತ್ತರ ಪೆÇಲೀಸ್ ಠಾಣೆಗೆ ನೀಡಿದ ಮಾಹಿತಿಯನ್ವಯ ಪೆÇೀಲೀಸರು ಸ್ಥಳಕ್ಕಾಗಮಿಸಿ, ಚಿರತೆ ದಾಳಿ ಖಚಿತಪಡಿಸಿದ್ದಾರೆ.
ನಾಯಿಯ ಮೃತದೇಹ ರಕ್ತಸಿಕ್ತವಾಗಿ ಕಂಡುಬಂದಿದ್ದು, ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ನಾಗರಿಕರು ಜಾಗ್ರತೆ ಪಾಲಿಸುವಂತೆ ಸೂಚಿಸಿದ್ದಾರೆ. ಗುರುವಾರ ರಾತ್ರಿ ಈ ವಠಾರದಲ್ಲಿ ನಾಯಿಗಳು ವ್ಯಾಪಕವಾಗಿ ಬೊಗಳುತ್ತಿದ್ದ ಬಗ್ಗೆ ರಬ್ಬರ್ ತೋಟದ ಕಾರ್ಮಿಕರು ಮಾಹಿತಿ ನೀಡಿದ್ದಾರೆ. ಚಿರತೆ ದಾಳಿ ನಡೆಸಿದ ತೋಟದ ಸನಿಹವೇ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಕ್ಯಾಂಪಸ್ ಇದ್ದು, ಈ ಹಿಂದೆಯೂ ಚಿರತೆ ಇಲ್ಲಿ ಕಾಣಿಸಿಕೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಇಲ್ಲಿಂದ ಅನತಿ ದೂರದ ಕೃಷಿಕರೊಬ್ಬರ ಕೆರೆಗೆ ಚಿರತೆ ಬಿದ್ದಿದ್ದು, ನಂತರ ಅರಣ್ಯ ಇಲಾಖೆ ಇದನ್ನು ಸೆರೆಹಿಡಿದು ತ್ರಿಶ್ಯೂರಿನ ಮೃಗಾಲಯಕ್ಕೆ ಸ್ಥಳಾಂತರಿಸಿತ್ತು.

