ಕಾಸರಗೋಡು: ನಕಲಿ ಮತದಾನ ಮಾಡುವ ಪ್ರಯತ್ನಗಳು ವಿಫಲವಾದ ಹತಾಶೆಯಿಂದ ಸಿಪಿಐಎಂ ವ್ಯಾಪಕ ಆಕ್ರಮಣಗಳಿಗೆ ಸಿದ್ಧತೆ ನಡೆಸಿ ಸಜ್ಜಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ದೇಲಂಪಾಡಿ ಗಾಮ ಪಂಚಾಯಿತಿಯಲ್ಲಿ ಬಿಎಲ್‍ಓ ಒಬ್ಬರನ್ನು ಆಕ್ರಮಿಸಿದ ಪ್ರಕರಣದ ಆರೋಪಿ ಸಿಪಿಎಂ ಮುಖಂಡ ಕೆ. ಸುರೇಂದ್ರನ್ ಮತಗಟ್ಟೆಯ ಬಳಿಯಲ್ಲೇ ಎನ್. ಡಿ. ಎ ಅಭ್ಯರ್ಥಿ ವಿದ್ಯಾ ಮಹೇಶ್ ಮೇಲೆರಗಿ ಹಲ್ಲೆ ನಡೆಸಿರುವುದಲ್ಲದೆ ಬೆದರಿಕೆ ಒಡ್ಡಿರುವುದಾಗಿಯೂ ಬಿಜೆಪಿ ದೂರಿದೆ.
ಕುತ್ತಿಕ್ಕೋಲ್ ಪಂಚಾಯತಿನ ಎರಡನೇ ವಾರ್ಡಿನಲ್ಲಿ ಬಿಜೆಪಿ ಕಾರ್ಯಕರ್ತರು ಜಾಗ್ರತೆಯಿಂದ ಮುನ್ನೆಚ್ಚರಿಕೆ ಪಾಲಿಸಿದ ಕಾರಣ ಸಿಪಿಎಂಗೆ ನಕಲಿ ಮತದಾನ ಮಾಡಲು ಅಸಾಧ್ಯವಾಗಿದೆ. ಈ ಧ್ವೇಷದಿಂದ ಮತದಾನದ ಬಳಿಕ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಬಿಜೆಪಿ ದೂರಿದೆ.
ಆಕ್ರಮಣದಲ್ಲಿ ಗಾಯಗೊಂಡ ಬಿಜೆಪಿ ಕಾರ್ಯಕರ್ತ ಗೋಪಾಲಕೃಷ್ಣನ್ ಸಿ, ಅನುರಾಜ್ ಪಿ., ಮಿಥುನ್ ಎಂಬಿವರು ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರನ್ನು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಸಿಪಿಎಂ ಹತಾಶೆಯಿಂದ ಆಕ್ರಮಣಕ್ಕೆ ಮುಮದಗಿದೆ. ಫಲಿತಾಂಶ ಪ್ರಕಟವಾಗುವ ದಿನ ಬಿಜೆಪಿ ಅಭ್ಯರ್ಥಿ, ಕಾರ್ಯಕರ್ತರ ಮೇಲೆ ಆಕ್ರಮಣ ನಡೆಯುವ ಸಾಧ್ಯತೆಗಳಿದ್ದು ಪೆÇಲೀಸ್ ಇಲಾಖೆ ಮುನ್ನೆಚ್ಚರಿಕೆ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದೆ

