ಕೊಲ್ಲಂ: ಶಬರಿಮಲೆ ಚಿನ್ನ ಕಳವು ಪ್ರಕರಣದ ಆರೋಪಿಗಳಾದ ಉಣ್ಣಿಕೃಷ್ಣನ್ ಪೋತಿ ಮತ್ತು ಮುರಾರಿ ಬಾಬು ಅವರನ್ನು ಎರಡು ದಿನಗಳ ಕಾಲ ಕಸ್ಟಡಿಗೆ ನೀಡಲಾಗಿದೆ.
ಕೊಲ್ಲಂ ವಿಜಿಲೆನ್ಸ್ ಕೋರ್ಟ್ ಅವರನ್ನು ಎಸ್‍ಐಟಿ ವಶಕ್ಕೆ ಒಪ್ಪಿಸಿದೆ. ಉಣ್ಣಿಕೃಷ್ಣನ್ ಗೋಡೆಗಳ ತಗಡು ಮಾರಿದ ಪ್ರಕರಣದಲ್ಲಿ ಹಾಗೂ ಮುರಾರಿ ಬಾಬು ದ್ವಾರಪಾಲಕ ಮೂರ್ತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು.
ಇದೇ ವೇಳೆ ಚಿನ್ನ ಕಳವು ಪ್ರಕರಣದ ಆರೋಪಿ ಸುಧೀಶ್ ಕುಮಾರ್ ಗೆ ಜಾಮೀನು ಲಭಿಸಿಲ್ಲ. ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್ ಕುಮಾರ್ ಅವರ ಎರಡೂ ಜಾಮೀನು ಅರ್ಜಿಗಳನ್ನು ವಿಜಿಲೆನ್ಸ್ ಕೋರ್ಟ್ ತಿರಸ್ಕರಿಸಿದೆ. ತಿರುವಾಭರಣಂ ಆಯುಕ್ತರೇ ಹೊಣೆ, ಸುಧೀಶ್ ಅಲ್ಲ ಎಂದು ಪ್ರತಿವಾದ ಮಂಡಿಸಿದರು.
ಆದರೆ, ಅಧಿಕಾರಿಯಾಗಿ ಸುಧೀಶ್ ಕುಮಾರ್ ಅವರ ಪಾತ್ರವೂ ಇದೆ ಎಂದು ಪ್ರಾಸಿಕ್ಯೂಷನ್ ವಾದಿಸಿತು. ಪ್ರಾಸಿಕ್ಯೂಷನ್ ಪರವಾಗಿ ಅಡ್ವ.ಸಿಜು ರಾಜನ್ ವಾದ ಮಂಡಿಸಿದ್ದರು. ಚಿನ್ನ ಕಳ್ಳತನದಲ್ಲಿ ಭಾಗಿಯಾಗಿರುವ ಉನ್ನತ ಹುದ್ದೆಯ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಆರೋಪಿಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.

