HEALTH TIPS

ಹಾಡಹಗಲು ಯುವಕನ ಅಪಹರಣ-ಮಲಯಾಳಿಗರು ಸೇರಿದಂತೆ ಏಳು ಮಂದಿ ಸೆರೆ

ಕಾಸರಗೋಡು: ಹಾಡಹಗಲೇ ಕಾಸರಗೋಡು ನಗರದಿಂದ ಯುವಕನನ್ನು ಸಿನಿಮೀಯ ಶೈಲಿಯಲ್ಲಿ ಅಪಹರಿಸಿದ ಕೊಟೇಷನ್ ತಂಡವನ್ನು ಪೆÇಲೀಸರು ಹಾಸನದ ಸಕಲೇಶಪುರದಿಂದ ಬಂಧಿಸಿದ್ದಾರೆ. ಕೇರಳ ಮತ್ತು ಕರ್ನಾಟಕ ಪೆÇಲೀಸರ ಸಂಯುಕ್ತ ಕಾರ್ಯಾಚರಣೆಯಲ್ಲಿ ಇವರನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶ ನಿವಾಸಿಗಳಾದ ಎಸ್. ಸೋಂಕಾರ್, ಎ.ಶ್ರೀನಾಥ್, ಮಾರುತಿ ಪ್ರಸಾದು ಹಾಗೂ ಪೃಥ್ವೀರಾಜ್ ರೆಡ್ಡಿ ಬಂಧಿತರು. ಇವರು ಅಪಹರಣಕ್ಕೆ ಬಳಸಿದ್ದ ವಾಹನವನ್ನೂ ವಶಪಡಿಸಿಕೊಂಡಿದ್ದಾರೆ. ಇವರೊಂದಿಗೆ ಕಾಸರಗೋಡಿನ ಮೂರು ಮಂದಿಯೂ ಪೊಲೀಸರ ವಶದಲ್ಲಿರುವುದಾಗಿ ಮಾಹಿತಿಯಿದೆ.

ಕಾಸರಗೋಡು ನಗರದ ಕರಂದಕ್ಕಾಡು ಬಳಿಯ ಹೋಟೆಲ್ ಎದುರು ನಿಂತಿದ್ದ ಮೇಲ್ಪರಂಬ ನಿವಾಸಿ ಹನೀಫ ಎಂಬವರನ್ನು ಆಂಧ್ರಪ್ರದೇಶ ನೋಂದಾಯಿತ ಕಾರಿನಲ್ಲಿ ಬುಧವಾರ ಹಾಡಹಗಲು ಅಪಹರಿಸಲಾಗಿತ್ತು. ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದ ವಿಷಯಕ್ಕೆ ಸಂಬಂಧಿಸಿ ಬೇಕಲ ನಿವಾಸಿಯೊಬ್ಬರು ನೀಡಿದ ಕೊಟೇಷನ್ ಅನ್ವಯ ಈ ಅಪಹರಣ ನಡೆದಿರುವುದಾಘಿ ಪೊಲೀಸರು ತಿಳಿಸಿದ್ದಾರೆ.  ಆಂಧ್ರದಿಂದ ಬಂದ ನಾಲ್ವರ ತಂಡ ಕಾಸರಗೋಡಿನಲ್ಲಿ ಕಳೆದ ನಾಲ್ಕು ದಿನಗಳಿಂದ ಬೀಡುಬಿಟ್ಟಿದ್ದು, ಹನೀಫ ಅವರ ಚಲನವಲನ ವೀಕ್ಷಿಸುತ್ತಿದ್ದರು. ನಗರದ ಹೋಟೆಲ್ ಎದುರಿನಿಂದ ಅಪಹರಣ ನಡೆದಾಗ ಹನೀಫ್ ಯಾವುದೇ ಪ್ರತಿಭಟನೆ ನಡೆಸಿಲ್ಲವೆಂಬ ಕಾರಣದಿಂದ ಆರಂಭದಲ್ಲಿ ಪೆÇಲೀಸರು ಕೇಸು ದಾಖಲಿಸಲು ಹಿಂದೇಟುಹಾಕಿದ್ದರು. ನಂತರ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವಿ.ಬಿ ವಿಜಯಭರತ್ ರೆಡ್ಡಿ ನಿರ್ದೇಶನದಂತೆ ಕೇಸು ದಾಖಲಿಸಿ ಮಾಹಿತಿಯನ್ನು ಅಂತಾರಾಜ್ಯ ಪೆÇಲೀಸರಿಗೆ ನೀಡಿದ  ಹಿನ್ನೆಲೆಯಲ್ಲಿ ಬುಧವಾರ ಸಂಜೆಯ ವೇಳೆಗೆ ಸಕಲೇಶಪುರದಿಂದ ಅಪಹರಣಕಾರರನ್ನು ವಶಕ್ಕೆ ತೆಗೆಯಲಾಗಿತ್ತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries