ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಬದಿಯಡ್ಕ ಘಟಕದ ವತಿಯಿಂದ ಪೆನ್ಶನರ್ಸ್ ದಿನಾಚರಣೆಯನ್ನು ಆಚರಿಸಲಾಯಿತು. ಹಿರಿಯ ಸದಸ್ಯ ಶ್ಯಾಮ ಭಟ್ ಕುತ್ತಗುಡ್ಡೆ ಅವರನ್ನು ಅವರ ಮನೆಯಲ್ಲಿ ಶಾಲು ಹೊದೆಸಿ, ಹಣ್ಣುಹಂಪಲುಗಳನ್ನು ನೀಡಿ ಗೌರವಿಸಲಾಯಿತು.
ಘಟಕದ ಅಧ್ಯಕ್ಷ ಕೆ.ಗೋಪಾಲಕೃಷ್ಣ ಭಟ್ ಕಡಾರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಮೈರ್ಕಳ ನಾರಾಯಣ ಭಟ್ ಅಭಿನಂದನಾ ನುಡಿಗಳನ್ನಾಡಿ, ಪೆನ್ಶನರ್ಸ್ ದಿನಾಚರಣೆಯ ಕುರಿತು ಮಾತನಾಡಿದರು. ಕಾರ್ಯದರ್ಶಿ ವೆಂಕಟ್ರಾಜ ಚಾಳೆತ್ತಡ್ಕ, ಉದನೇಶ ವೀರ ಕಿಳಿಂಗಾರು, ಹರೀಶ ಇಕ್ಕೇರಿ, ನವೀನಚಂದ್ರ ಮಾನ್ಯ ಉಪಸ್ಥಿತರಿದ್ದರು.

.jpg)
