HEALTH TIPS

ಪ್ರೀತಿಯಲ್ಲಿ ಯುವಕರಿಗೇ ಹೆಚ್ಚು ನೋವಾಗಲು ಕಾರಣ: ಮನೋವಿಜ್ಞಾನ ಹೇಳೋದೇನು?

'ಹದಿಹರೆಯ' ವಯಸ್ಸು ಮನುಷ್ಯನ ಪ್ರಮುಖ ಗಟ್ಟವಾಗಿದೆ. ಈ ಹಂತ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಸೂಕ್ಷ್ಮ ಹಂತಗಳಲ್ಲಿ ಒಂದು. ವಿಶೇಷವಾಗಿ ಯುವಕರು ದೈಹಿಕವಾಗಿ ಬಲಿಷ್ಠರಾಗಿದ್ದರೂ, ಮಾನಸಿಕವಾಗಿ ಅಸ್ಥಿರ ಮತ್ತು ಅಸುರಕ್ಷಿತರಾಗಿರುತ್ತಾರೆ. ಆದರೆ ಸಮಾಜದಲ್ಲಿ ಯುವಕರನ್ನು 'ಬಲಿಷ್ಠ', 'ಭಾವನಾತ್ಮಕವಲ್ಲದ' ಮತ್ತು 'ಏಕಾಂಗಿಯಾಗಿ ಎಲ್ಲವನ್ನು ನಿಭಾಯಿಸುವವರು' ಎಂಬ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ.

ಆದರೆ, ವಾಸ್ತವವಾಗಿ ಹದಿಹರೆಯದ ಯುವಕರು ಹೆಚ್ಚು ಭಾವನಾತ್ಮಕವಾಗಿರುತ್ತಾರೆ. 


 ಹದಿಹರೆಯದ ವಯಸ್ಸಿನಲ್ಲಿ ಪ್ರೀತಿಯಾದರೆ, ಯುವಕರಿಗೆ ಅದು ಕೇವಲ ಸಂಬಂಧವಾಗಿರುವುದಿಲ್ಲ. ಬದಲಿಗೆ ಅವರ ವೈಯಕ್ತಿಕ ಹಿತಾಸಕ್ತಿ, ಗುರುತು ಮತ್ತು ಭವಿಷ್ಯದ ಕನಸುಗಳಾಗಿರುತ್ತವೆ. ಕೆಲವೊಮ್ಮೆ ಪ್ರೇಮದಲ್ಲಿ ಬಿರುಕು ಉಂಟಾಗಿ ವಿಫಲವಾದಾಗ ಹುಡುಗರು ಮೌನಕ್ಕೆ ಜಾರುತ್ತಾರೆ. ಈ ಮೌನ ಹೆಚ್ಚು ಅಪಾಯಕಾರಿ ಎಂದು ಮನೋವಿಜ್ಞಾನ ಹೇಳುತ್ತದೆ.

ಇತ್ತೀಚಿಗೆ ನಡೆದ ಸಂಶೋಧನೆಗಳ ಪ್ರಕಾರ, ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಹುಡುಗರ ಪ್ರಮಾಣ ಹುಡುಗಿಯರಿಗಿಂತ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಈ ವರದಿಯಿಂದ ಹುಡುಗರ ಮಾನಸಿಕ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.

ಹುಡುಗರ ಮಾನಸಿಕ ಸ್ಥಿತಿ:

ಈ ಹಂತದಲ್ಲಿ ಯಾವುದೇ ಯುವತಿಯ ಮೇಲೆ ಮನಸ್ಸಾಗಿ ಪ್ರೀತಿ ಉಂಟಾದಾಗ, ನಾನು ಮುಖ್ಯ, ಆಕೆಯ ಜೊತೆ ಜೀವಸಬೇಕು ಎಂಬ ಭಾವನೆಯನ್ನು ಹುಡುಗರಲ್ಲಿ ಮೂಡುತ್ತದೆ. ಪ್ರೇಮ ವೈಫಲ್ಯ ಉಂಟಾದಾಗ ನಾನು ವ್ಯರ್ಥ ಎಂಬ ಭಾವನೆ ಮೂಡುತ್ತದೆ.

ಹುಡುಗರಲ್ಲಿ ಪ್ರೀತಿ ಯಾಕೆ ಅಷ್ಟು ಆಳವಾಗಿ ಬೇರೂರುತ್ತದೆ?

ಭಾವನೆಗಳನ್ನು ವ್ಯಕ್ತಪಡಿಸದಿರುವುದು: ಹುಡುಗರಿಗೆ ಬಾಲ್ಯದಿಂದಲೇ ಭಾವನೆಗಳನ್ನು ವ್ಯಕ್ತಪಡಿಸದಿರುವುದನ್ನು ಕಲಿಸಲಾಗುತ್ತದೆ. ಅಂದರೆ ನೀನು ಹುಡುಗ ಆಳಬಾರದು, ಬೇಸರ ಮಾಡಿಕೊಳ್ಳಬಾರದು ಎಂಬುದನ್ನು ಹೇಳಿಕೊಡಲಾಗುತ್ತದೆ. ಆದರೆ ಇದು ವಯಸ್ಕರಾದಗ ತೀವ್ರ ಪರಿಣಾಮ ಬೀರುತ್ತದೆ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗುವ ಸಾಧ್ಯತೆ ಹೆಚ್ಚು.

ಮೊದಲ ಪ್ರೀತಿ: ಮೊದಲ ಪ್ರೀತಿಯು ಹುಡುಗರ ದಿನಚರಿ, ಆತ್ಮವಿಶ್ವಾಸ, ಕನಸು ಎಲ್ಲವನ್ನೂ ಆವರಿಸಿಕೊಂಡಿರುತ್ತದೆ. ಅರಿವಿನ ಮನೋವಿಜ್ಞಾನ (Cognitive psychology) ಪ್ರಕಾರ ಇದನ್ನು ಭಾವನಾತ್ಮಕ ಅತಿವ್ಯಾಪಕತೆ (emotional overgeneralization) ಎನ್ನುತ್ತಾರೆ.

ಹುಡುಗರಲ್ಲಿ ಆತ್ಮಹತ್ಯೆ ಯೋಚನೆ:

ಸಂಶೋಧನೆಯ ಪ್ರಕಾರ, ಹುಡುಗರು ಆತ್ಮಹತ್ಯೆ ಬಗ್ಗೆ ಯೋಚಿಸುವಾಗ, ಅವರಿಗೆ ಸಾಯಬೇಕು ಅನ್ನುವುದು ಮುಖ್ಯ ಉದ್ದೇಶವಾಗಿರುವುದಿಲ್ಲ. ಬದಲಾಗಿ ನೋವಿನಿಂದ ಮುಕ್ತಿ ಪಡೆದರೆ ಸಾಕು ಎಂಬುದು ಮುಖ್ಯವಾಗಿರುತ್ತದೆ. ಆ ಕಾರಣಕ್ಕಾಗಿಯೇ ಹುಡುಗರು ಆತ್ಮಹತ್ಯೆ ಹೆಚ್ಚು ಮಾಡಿಕೊಳ್ಳುತ್ತಾರೆ.

ಹುಡುಗರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳು:

  • ನನ್ನ ನೋವು ಯಾರಿಗೂ ಕಾಣುತ್ತಿಲ್ಲ

  • ನಾನು ಯಾರಿಗೂ ಉಪಯೋಗ ಇಲ್ಲ

  • ಇದು ಎಂದಿಗೂ ಸರಿಯಾಗುವುದಿಲ್ಲ

ಭಾರತದಲ್ಲಿ ಅಕಾಲಿಕವಾಗಿ ನಿಧನರಾಗುವ ಯುವಕರ ಪೈಕಿ ಶೇ 70ರಷ್ಟು ಆತ್ಮಹತ್ಯೆಗೆ ಶರಣಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶ ಹೇಳುತ್ತದೆ.

ಹುಡುಗರು ಪಾಲಿಸಬೇಕಾದ ಅಂಶಗಳು:

ವ್ಯಕ್ತಪಡಿಸುವುದು: ಮನಸ್ಸಿನಲ್ಲಿರುವ ನೋವು ಹಾಗೂ ಆತಂಕವನ್ನು ಇತರರೊಂದಿಗೆ ಹಂಚಿಕೊಳ್ಳಬೇಕು. ಇದರಿಂದ ಮನಸ್ಸು ಹಗುರವಾಗುವುದರ ಜೊತೆಗೆ ಆತ್ಮಹತ್ಯೆ ಯೋಚನೆಯಿಂದ ಹೊರಗುಳಿಯಬಹುದು.

ನೋವು ಹೇಳೋದು ದುರ್ಬಲತೆ ಅಲ್ಲ: ನಿಮ್ಮ ನೋವನ್ನು ವ್ಯಕ್ತಪಡಿಸುವುದು ದುರ್ಬಲತೆ ಅಲ್ಲ. ಸಮಾಜದ ಬಗ್ಗೆ ಎಂದಿಗೂ ಚಿಂತಿಸಬೇಡಿ, ಭಾವನೆಗಳನ್ನು ವ್ಯಕ್ತಪಡಿಸುವುದು ಪ್ರತಿಯೊಬ್ಬರ ಹಕ್ಕು ಆಗಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries