HEALTH TIPS

ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ 'ಲಾಟರಿ ರಾಜ' ಮಾರ್ಟಿನ್‌ ಪುತ್ರ

ಪುದುಚೇರಿ: 'ಲಾಟರಿ ರಾಜ' ಸ್ಯಾಂಟಿಯಾಗೊ ಮಾರ್ಟಿನ್‌ ಅವರ ಪುತ್ರ ಜೋಸ್‌ ಚಾರ್ಲ್ಸ್‌ ಮಾರ್ಟಿನ್‌ ಅವರು 'ಲಕ್ಷೀಯ ಜನನಾಯಕ ಕಚ್ಚಿ' (ಎಲ್‌ಜೆಕೆ) ಎಂಬ ರಾಜಕೀಯ ಪಕ್ಷಕ್ಕೆ ಭಾನುವಾರ ಚಾಲನೆ ನೀಡಿದರು.

ಜೆಸಿಎಂ ಮಕ್ಕಳ ಮಂದಿರ ಸಂಘಟನೆಯ ಮೂಲಕ ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಅಗತ್ಯವಿರುವವರಿಗೆ ನೆರವು ನೀಡುವಲ್ಲಿ ತೊಡಗಿಸಿಕೊಂಡಿದ್ದ ಮಾರ್ಟಿನ್‌, ಕೇಂದ್ರಾಡಳಿತ ಪ್ರದೇಶದಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದರು.

ಇದೀಗ ಸಂಘಟನೆಯನ್ನೇ ತನ್ನ ನೂತನ ರಾಜಕೀಯ ಪಕ್ಷವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.

ಜೋಸ್‌ 2015ರಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು. ಸ್ಥಳೀಯ ನಾಯಕರೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಿದ್ದರಿಂದ 2024ರಲ್ಲಿ ಕೇಸರಿ ಪಾಳಯದಿಂದ ದೂರವಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries