HEALTH TIPS

ಗುಜರಾತ್: SIR ಬಳಿಕ ಕರಡು ಮತದಾರರ ಪಟ್ಟಿ ಪ್ರಕಟ, 73.73 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಡಿಲೀಟ್!

ಅಹಮದಾಬಾದ್: ಗುಜರಾತ್‌ನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಬಳಿಕ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು,, 73.73 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಲು ಜನವರಿ 18, 2026 ರವರೆಗೆ ಒಂದು ತಿಂಗಳ ಅವಧಿಯ ಅವಕಾಶ ನೀಡಲಾಗಿದೆ.

ಹೆಸರು ನಾಪತ್ತೆಯಾಗಿರುವ, ತಪ್ಪಾಗಿ ಸೇರ್ಪಡೆಗೊಂಡಿರುವ ಮತದಾರರಿಗೆ ಆಕ್ಷೇಪಣೆ ಸಲ್ಲಿಸಲು ಅಥವಾ ಸೇರ್ಪಡೆಗೆ 2026ರ ಜನವರಿ 18ರವರೆಗೆ ಕಾಲಾವಕಾಶ ನೀಡಲಾಗಿದೆ. ಚುನಾವಣಾ ಅಧಿಕಾರಿಗಳು ಫೆಬ್ರವರಿ 10, 2026 ರೊಳಗೆ ಈ ಪ್ರಕ್ರಿಯೆಯನ್ನು ಪರಿಶೀಲಿಸಿ, ಬಗೆಹರಿಸುತ್ತಾರೆ.

ಕರಡು ಪಟ್ಟಿಯಲ್ಲಿ 4.34 ಕೋಟಿ ಮತದಾರರು ನೋಂದಾಯಿಸಿಕೊಂಡಿದ್ದರೆ, SIR ಪ್ರಕ್ರಿಯೆಯಲ್ಲಿ 73.73 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ.

SIR ಪ್ರಕ್ರಿಯೆಗಾಗಿ ಗುಜರಾತ್‌ನಾದ್ಯಂತ 33 ಜಿಲ್ಲಾ ಚುನಾವಣಾ ಅಧಿಕಾರಿಗಳು, 182 ಮತದಾರರ ನೋಂದಣಿ ಅಧಿಕಾರಿಗಳು, 855 ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು, 50,963 ಬೂತ್ ಮಟ್ಟದ ಅಧಿಕಾರಿಗಳು (BLOs), 54,443 ಬೂತ್ ಮಟ್ಟದ ಏಜೆಂಟರು (BLA) ಮತ್ತು 30,833 ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು ಎಂದು ಮುಖ್ಯ ಚುನಾವಣಾಧಿಕಾರಿ ಹರಿತ್ ಶುಕ್ಲಾ ತಿಳಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಆರಂಭಕ್ಕೂ ಮುನ್ನಾ ಗುಜರಾತ್ ನಲ್ಲಿ 5,08,43,436 ನೋಂದಾಯಿತ ಮತದಾರರಿದ್ದರು. ಆದರೆ ಕರಡು ಪಟ್ಟಿಯನ್ನು ಅಂತಿಮಗೊಳಿಸಿದ ನಂತರ, ಈ ಸಂಖ್ಯೆಯು ಈಗ 4,34,70,109 ರಷ್ಟಿದೆ.

ನಿರಂತರ ಮನೆ-ಮನೆ ಸಮೀಕ್ಷೆಯ ಸಮಯದಲ್ಲಿ ನಡೆಸಿದ ಪರಿಶೀಲನೆ ಮತ್ತು ದಾಖಲಾತಿ ಪರಿಶೀಲನೆಯ ನಂತರ ನಕಲಿ ಮತದಾರರ ಹೆಸರನ್ನು ಪಟ್ಟಿಯಿಂದ ತಗೆದುಹಾಕಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮತದಾರರ ಪಟ್ಟಿಯಿಂದ ಡಿಲೀಟ್ ಆದ ಮತದಾರರು

• ಮೃತ ಮತದಾರರು: 18,07,278

• ಗೈರು ಹಾಜರಾದ ಮತದಾರರು: 9,69,662

• ಶಾಶ್ವತವಾಗಿ ವಲಸೆ ಹೋದ ಮತದಾರರು: 40,25,553

• ಎರಡು ಕಡೆಗಳಲ್ಲಿ ನೋಂದಾಯಿಸಿಕೊಂಡ ಮತದಾರರು: 3,81,470

• ಇತರೆ ಮತದಾರರು: 1,89,364

ವ್ಯಾಪಕ ಪ್ರಚಾರ ಮತ್ತು ಬೂತ್ ಮಟ್ಟದ ಏಜೆಂಟರ ಪದೇ ಪದೇ ಭೇಟಿಗಳ ಹೊರತಾಗಿಯೂ, ಅನೇಕ ಮತದಾರರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಹಲವು ಪ್ರಕರಣಗಳಲ್ಲಿ ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದು, ಬೇರೆಡೆ ನೋಂದಾಯಿಸಿಕೊಂಡಿದ್ದಾರೆ. ಕೆಲವರು ಮರಣಹೊಂದಿದ್ದಾರೆ ಅಥವಾ ಮತದಾರರ ಪಟ್ಟಿಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries