ನವದೆಹಲಿ: ಸಂಸತ್‌ನಲ್ಲಿ ಇತ್ತೀಚೆಗೆ ಅಂಗೀಕರಿಸಿದ ಬೆನ್ನಲ್ಲೆ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್ ಮಸಾಲಗಳ ಮೇಲೆ ಹೊಸ ಸೆಸ್ ವಿಧಿಸಿ ಕೇಂದ್ರ ಸರ್ಕಾರ ಘೋಷಿಸಿದೆ. ಈ ತೆರಿಗೆ ಹೆಚ್ಚಳವು ಫೆಬ್ರವರಿ 1ರಿಂದ ಜಾರಿಗೆ ಬರಲಿದೆ. ಅಲ್ಲಿಂದ ಗುಟ್ಕಾ, ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಬೆಲೆ ಮತ್ತಷ್ಟು ದುಬಾರಿ ಆಗಲಿದೆ.
ಹೊಸ ವರ್ಷಕ್ಕೆ ತಂಬಾಕು ವ್ಯಸನಿಗಳಿಗೆ ಕೇಂದ್ರ ಶಾಕ್ ನೀಡಿದೆ.
ಈ ಸಂಬಂಧ ಬುಧವಾರ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರವು ಸರಕು ಸೇವಾ ತೆರಿಗೆ (ಜಿಎಸ್‌ಟಿ) ದರಕ್ಕಿಂತಲೂ ಅಧಿಕ ಹೊಸ ಸುಂಕವನ್ನು ತಂಬಾಕು ಹಾಗೂ ಪಾನ್ ಮಸಾಲಗಳ ಮೇಲೆ ಹೇರುತ್ತಿದೆ. ಈ ಮಾದಕ ವಸ್ತುಗಳ ಮೇಲಿನ ಪರಿಹಾರ ಸೆಸ್ ಹೆಚ್ಚಾಗಲಿದೆ. ದೇಶದಲ್ಲಿ ಯುವ ಸಮೂಹ ಹೆಚ್ಚಿನ ಪ್ರಮಾಣದಲ್ಲಿ ಈ ತಂಬಾಕು ವ್ಯಸನಕ್ಕೆ ಅಂಟಿಕೊಂಡಿದ್ದು, ಭವಿಷ್ಯ ದೃಷ್ಟಿಯಿಂದ ಯುವಕರನ್ನು ತಂಬಾಕು ಸೇವನೆಯಿಂದ ವಿಮುಖರಾಗಿಸಲು ಈ ನಿರ್ಧಾರ ಕೈಗೊಂಡಿದೆ.
ಅಧಿಸೂಚನೆ ಪ್ರಕಾರ 2026 ಯು ಫೆಬ್ರವರಿ 1ರಿಂದ ಶೇಕಡಾ 40 ಸರಕು ಸೇವಾ ತೆರಿಗೆ ಬೀಡಿ, ಸಿಗರೇಟ್‌ಗಳ ಮೇಲೆ ಹೇರಲಾಗುತ್ತದೆ. ಅದರಿಂದ 1,000 ಸಿಗರೇಟ್‌ಗಳಿಗೆ 2,050-8,500 ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಿದಂತಾಗುತ್ತದೆ. ಜನಪ್ರಿಯ ಬ್ರ್ಯಾಂಡ್‌ಗಳ ದರಗಳನ್ನು ಶೇಕಡಾ 22 ರಿಂದ 28ರಷ್ಟು ಏರಿಸಲಾಗುತ್ತದೆ. ತೆರಿಗೆಗಳನ್ನು ಆರೋಗ್ಯ ವೆಚ್ಚಗಳೊಂದಿಗೆ ಹೊಂದಿಸಲಾಗುತ್ತದೆ. ಸಿಗರೇಟ್ ಸೇದುವವರ ಬಾಯಿ ಸುಡುವ ದಿನಗಳು ಸಮೀಪಿಸುತ್ತಿವೆ.
ಕೇಂದ್ರದ ಈ ಪರಿಣಾಮಕಾರಿ ತೆರಿಗೆ ಹೇರಿಕೆಯಿಂದ ಅಧ್ಯಯನಗಳ ಪ್ರಕಾರ ಶೇಕಡಾ 10ರಿಂದ 15ರಷ್ಟು ಬೇಡಿಕೆ ಇಳಿಕೆ ಆಗಲಿದೆ. ಈ ಮಧ್ಯ ಅಕ್ರಮ ವ್ಯಾಪಾರ ಮತ್ತು ಕಳ್ಳಸಾಗಣೆ, ನಿಯಮ ಉಲ್ಲಂಘಿಸಿದಂತೆ ಎಚ್ಚರಿಕೆ ವಹಿಸಲಿದೆ. ಈ ತೆರಿಗೆ ನೀತಿಯು ಕೇಂದ್ರ ಅಬಕಾರಿ ತಿದ್ದುಪಡಿ ಮಸೂದೆ 2025 ರಡಿ ಹೇರಿಕೆ ಮಾಡಲಾಗಿದೆ. ಇಂಪಿರೀಯಲ್ ಟೊಬ್ಯಾಕೋ ಕಂಪನಿ (ಐಟಿಸಿ) ತಂಬಾಕು ಸ್ಟಾಕ್‌ಗಳು ಘೋಷಣೆಯ ವಾರ್ಷಿಕವಾಗಿ 20,000 ಕೋಟಿ ರೂ.ಗಳ ಸುಂಕ ಪಾವತಿಸುವ ಉದ್ಯಮಗಳ ಮೇಲೆ ಆರ್ಥಿಕ ಏರಿಳಿತದ ಕಂಡು ಬಂದವು.
ತಂಬಾಕು ಉತ್ಪಾದನೆ, ಮಾರಾಟ ಮೇಲೆ ನಿಯಂತ್ರಣ
ಸಿಗರೇಟ್, ಬೀಡಿ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲೆ ಶೇಕಡಾ 40ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಇನ್ನೂ ಪಾನ್ ಮಸಾಲಗಳ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸುವ ಬಗ್ಗೆ ಇತ್ತೀಚೆಗೆ ಸಂಸತ್‌ನಲ್ಲಿ ಅಂಗೀಕರಿಸಲಾಗಿತ್ತು. ಅದರಂತೆ ಅಧಿಸೂಚನೆ ಹೊರಡಿಸಲಾಗಿದೆ. ಈ ಮೂಲಕ ತಂಬಾಕು ಉತ್ಪಾದನೆ, ಮಾರಾಟ ಹಾಗೂ ಸೇವನೆ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಮುಂದಾಗಿದೆ.
ತರಿಗೆ ವಂಚಿಸದಂತೆ ಸರ್ಕಾರ ಕ್ರಮ
ಇನ್ನೂ ಫೆಬ್ರವರಿ 1ರಿಂದ ಈ ದುಬಾರಿ ತೆರಿಗೆ ಪಾವತಿಸದೇ ವಂಚನೆ ಮಾಡುವ ಬಗ್ಗೆ ಮುನ್ನೆಚ್ಚರಿಕೆ ವಹಿಸಿರುವ ಕೇಂದ್ರ ಸರ್ಕಾರವು ಕಠಿಣ ಮೇಲ್ವಿಚಾರಣೆ ಜಾರಿ ಮಾಡುತ್ತದೆ. ಅಂದರೆ ಸಿಗರೇಟ್, ಬೀಡಿ, ಪಾನ್ ಮಸಾಲ ತಯಾರಕರು ತಮ್ಮೆಲ್ಲ ಎಲ್ಲಾ ಉತ್ಪಾದನಾ ಪ್ಯಾಕಿಂಗ್ ಪ್ರದೇಶಗಳ ಸೇರಿದಂತೆ ಅಗತ್ಯವಿರುವ ಕಡೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಅದರಲ್ಲಿನ ದೃಶ್ಯಾವಳಿಗಳು 48 ತಿಂಗಳು ಕಾಲ ಸಂರಕ್ಷಿಸಿಡಬೇಕು ಎಂದು ತಿಳಿಸಿದೆ.
ಸಾಲದೆಂಬಂತೆ ತಂಬಾಕು ಉತ್ಪನ್ನಗಳ ತಯಾರಕರು 2026 ಫೆಬ್ರವರಿ 7ರ ಒಳಗೆ ತಮ್ಮ ಉತ್ಪಾದನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಘೋಷಿಸುವಂತೆ (ಫಾರ್ಮ್ CE DEC-01) ಸೂಚನೆ ನೀಡಿದೆ. ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೆ, ಮಾಹಿತಿ ಘೋಷಿಸದಿದ್ದರೆ ಕ್ರಮ ಕೈಗೊಳ್ಳಲಿದೆ.

