HEALTH TIPS

ನರವಣೆ ಪುಸ್ತಕ ಸೋರಿಕೆ ಸಂಘಟಿತ ಕೃತ್ಯ:ಸ್ಫೋಟಕ ಮಾಹಿತಿ ಬಿಚ್ಚಿಟ್ಟ ದೆಹಲಿ ಪೊಲೀಸರು

ನವದೆಹಲಿ: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಅಪ್ರಕಟಿತ ಪುಸ್ತಕ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಸೋರಿಕೆ ಕುರಿತಂತೆ ದೆಹಲಿ ಪೊಲೀಸರ ವಿಶೇಷ ವಿಭಾಗ ಬಹು ರಾಷ್ಟ್ರೀಯ ತನಿಖೆ ತೀವ್ರಗೊಳಿಸಿದ್ದು, ಮಹತ್ವದ ಮಾಹಿತಿ ಕಲೆ ಹಾಕಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ರಕ್ಷಣಾ ಸಚಿವಾಲಯದ ಅನುಮೋದನೆ ಪಡೆಯದೆಯೇ ಪುಸ್ತಕವು ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಿದೆ ಎಂದು ಅವರು ತಿಳಿಸಿದ್ದಾರೆ.

ಅಪ್ರಕಟಿತ ಪುಸ್ತಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಸೇರಿದ್ದು ಹೇಗೆ ಎಂಬ ಪ್ರಶ್ನೆಗಳ ನಡುವೆಯೇ ದೆಹಲಿ ಪೊಲೀಸರು ಪುಸ್ತಕ ಸೋರಿಕೆ ಸಂಬಂಧ ಕ್ರಿಮಿನಲ್ ಸಂಚು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಪುಸ್ತಕ ಸೋರಿಕೆಯು ಒಂದು ಪ್ರತ್ಯೇಕ ಕೃತ್ಯವಲ್ಲ, ಬದಲಾಗಿ ರಕ್ಷಣಾ ಸಂಬಂಧಿತ ಪ್ರಕಟಣೆಗಳಿಗೆ ಉದ್ದೇಶಿಸಲಾದ ಅಧಿಕೃತ ಅನುಮೋದನೆ ಪ್ರಕ್ರಿಯೆಗಳನ್ನು ಮರೆಮಾಚಿ ಮಾಡಿದ ಯೋಜಿತ ಮತ್ತು ಸಂಘಟಿತ ಕಾರ್ಯಾಚರಣೆ ಎಂದು ಹೇಳಿದೆ.

ಅಧಿಕೃತ ಅನುಮತಿ ಪಡೆಯುವ ಮೊದಲು ಪುಸ್ತಕವನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದ್ದು, ಪುಸ್ತಕ ಸೋರಿಕೆ ಸಂಬಂಧಿಸಿ ಡಿಜಿಟಲ್ ಮತ್ತು ಆರ್ಥಿಕ ಕಾರ್ಯಾಚರಣೆಗಳ ಕುರಿತಂತೆ ಅಮೆರಿಕ, ಕೆನಡಾ, ಜರ್ಮನಿ ಮತ್ತು ಆಸ್ಟ್ರೇಲಿಯಾದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪುಸ್ತಕದ ಪ್ರಕಾಶನದ ಹಕ್ಕು ಹೊಂದಿರುವ ಪೆಂಗ್ವಿನ್ ಇಂಡಿಯಾ, ನರವಣೆ ಆತ್ಮಚರಿತ್ರೆಯು ಪ್ರಕಟವಾಗಿಲ್ಲ ಮತ್ತು ಯಾವುದೇ ಅಧಿಕೃತ ಪ್ರತಿಗಳು ಅಸ್ತಿತ್ವದಲ್ಲಿಲ್ಲ ಎಂದು ಸ್ಪಷ್ಟಪಡಿಸಿತ್ತು.

ನರವಣೆ ಅವರ ಆತ್ಮಚರಿತ್ರೆಯ ಸೋರಿಕೆಯಾದ ಆವೃತ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡಲಾಗಿದ್ದು ಮಾತ್ರವಲ್ಲದೆ, ಮೊದಲು ವಿದೇಶಿ ಮಾರುಕಟ್ಟೆಗಳಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ಜರ್ಮನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ಲಾಟ್‌ಫಾರ್ಮ್‌ಗಳಲ್ಲಿ ಆನ್‌ಲೈನ್ ಮಾರಾಟ ಪತ್ತೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries