HEALTH TIPS

13,600 ಕೋಟಿ ಒಡೆಯ, ವಿಶ್ವವಿಖ್ಯಾತ ಇಟಾಲಿಯನ್ ಫ್ಯಾಷನ್ ಡಿಸೈನರ್ ವ್ಯಾಲಿಂಟಿನೋ ಗರವಾನಿ ನಿಧನ

ರೋಮ್​: 1.5 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯ ಒಡೆಯ, ವಿಶ್ವ ವಿಖ್ಯಾತ ಇಟಾಲಿಯನ್ ಫ್ಯಾಷನ್ ಡಿಸೈನರ್ ವ್ಯಾಲೆಂಟಿನೊ ಗರವಾನಿಯವರು(Valentino Garavani) ತಮ್ಮ 93ನೇ ವಯಸ್ಸಿನಲ್ಲಿ ಸೋಮವಾರ(ಜ. 19) ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಕಳೆದ ಐದು ದಶಕಗಳಿಂದ ಫ್ಯಾಷನ್ ಲೋಕದ ದಿಗ್ಗಜರಾಗಿದ್ದ ಅವರು, 'ವ್ಯಾಲೆಂಟಿನೋ ರೆಡ್' ಎಂಬ ತಮ್ಮದೇ ವಿಶಿಷ್ಟ ಕೆಂಪು ಬಣ್ಣದ ವಿನ್ಯಾಸಗಳ ಮೂಲಕ ವಿಶ್ವದಾದ್ಯಂತ ಗುರುತಿಸಿಕೊಂಡಿದ್ದರು.

ಈ ಕುರಿತು ಮಾಹಿತಿ ನೀಡಿರುವ ಅವರ ಫೌಂಡೇಷನ್, ವ್ಯಾಲೆಂಟಿನೋ ಗರವಾನಿ ಇಂದು ತಮ್ಮ ಪ್ರೀತಿಪಾತ್ರರಿಂದ ಸುತ್ತುವರೆದಿರುವ ತಮ್ಮ ರೋಮನ್ ನಿವಾಸದಲ್ಲಿ ನಿಧನರಾದರು.ಜನವರಿ 21 ಬುಧವಾರ ಮತ್ತು ಜನವರಿ 22 ಗುರುವಾರ ಬೆಳಿಗ್ಗೆ 11:00 ರಿಂದ ಸಂಜೆ 6:00 ರವರೆಗೆ ಪಿಯಾಝಾ ಮಿಗ್ನನೆಲ್ಲಿ ಅಂತಿಮ ದರ್ಶನ ಇರಲಿದೆ. ಜ. 23 ಶುಕ್ರವಾರದಂದು ರೋಮ್‌ನ ಪಿಯಾಝಾ ಡೆಲ್ಲಾ ರಿಪಬ್ಲಿಕಾ 8 ರಲ್ಲಿರುವ ಬೆಸಿಲಿಕಾ ಸಾಂತಾ ಮಾರಿಯಾ ಡೆಗ್ಲಿ ಏಂಜೆಲಿ ಇ ಡೀ ಮಾರ್ಟಿರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದೆ.

ಹಾಲಿವುಡ್ ನಟಿಯರಾದ ಎಲಿಜಬೆತ್ ಟೇಲರ್, ಜೂಲಿಯಾ ರಾಬರ್ಟ್ಸ್ ಹಾಗೂ ಬ್ರಿಟನ್ ರಾಜಕುಮಾರಿ ಡಯಾನಾ ಅವರಂತಹ ಗಣ್ಯರಿಗೆ ವಸ್ತ್ರ ವಿನ್ಯಾಸ ಮಾಡಿದ್ದರು. ಆಧುನಿಕ ಫ್ಯಾಷನ್ ಇತಿಹಾಸದಲ್ಲಿ ಅವರು ತಮ್ಮದೇ ಆದ ಅಳಿಸಲಾಗದ ಛಾಪು ಮೂಡಿಸಿದ್ದಾರೆ.

1.5 ಬಿಲಿಯನ್ ಡಾಲರ್ ಒಡೆಯ


ಸೆಲೆಬ್ರಿಟಿ ನಿವ್ವಳ ಮೌಲ್ಯದ ಪ್ರಕಾರ, ವ್ಯಾಲೆಂಟಿನೋ ಗರವಾನಿ ಅವರ ನಿವ್ವಳ ಮೌಲ್ಯವು 2026ರ ವೇಳೆಗೆ 1.5 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ. ಇದು ಅ'ವರ ದಶಕಗಳ ಸ್ಮಾರ್ಟ್ ವ್ಯವಹಾರ ಮತ್ತು ವ್ಯಾಲೆಂಟಿನೋ ಹೆಸರಿನ ಬ್ರಾಂಡ್​ಗಳನ್ನು ಒಳಗೊಂಡಿದೆ.

ಜೊತೆಗೆ ಅವರ ದೀರ್ಘಕಾಲದ ಪಾಲುದಾರ ಜಿಯಾನ್ಕಾರ್ಲೊ ಗಿಯಾಮೆಟ್ಟಿ ಪ್ರಭಾವಶಾಲಿ ರಿಯಲ್ ಎಸ್ಟೇಟ್ ಪೋರ್ಟ್‌ಫೋಲಿಯೊದಲ್ಲೂ ಪಾಲು ಹೊಂದಿದ್ದರು. ಅವರ ಆಸ್ತಿಗಳಲ್ಲಿ ರೋಮ್, ಲಂಡನ್, ಪ್ಯಾರಿಸ್, ಮ್ಯಾನ್‌ಹ್ಯಾಟನ್, ಸ್ವಿಟ್ಜರ್‌ಲ್ಯಾಂಡ್‌ನಲ್ಲಿರುವ ಐಷಾರಾಮಿ ಮನೆಗಳು ಮತ್ತು ಪ್ಯಾರಿಸ್‌ನ ಹೊರಗಿನ ಪ್ರಸಿದ್ಧ ಅರಮನೆ ಸೇರಿವೆ. ಈ ಆಸ್ತಿಗಳು ಮಾತ್ರ ನೂರಾರು ಮಿಲಿಯನ್ ಡಾಲರ್‌ಗಳ ಮೌಲ್ಯದ್ದಾಗಿವೆ.
ಅಪಾರ ಸಂಪತ್ತಿನ ಹೊರತಾಗಿಯೂ ವ್ಯಾಲೆಂಟಿನೋ ಗರವಾನಿ ತನ್ನದೇ ಆದ ರೀತಿಯಲ್ಲಿ ಬದುಕುವುದಕ್ಕೆ ಹೆಸರುವಾಸಿಯಾಗಿದ್ದರು. ಅವರು ಆಗಾಗ್ಗೆ ತಮ್ಮ ಮನೆಗಳ ನಡುವೆ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ಜಾಗತಿಕ ಗಣ್ಯರು ಭಾಗವಹಿಸುವ ವಿಶೇಷ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು ಎನ್ನಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries