ನವದೆಹಲಿ: ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಮೊದಲು ಬಜೆಟ್ ಮಂಡಿಸಿದ್ದು 1947ರ ನವೆಂಬರ್ 26ರಂದು. ದೇಶದ ಮೊದಲ ಹಣಕಾಸು ಸಚಿವ ಆರ್.ಕೆ. ಷಣ್ಮುಗಂ ಚೆಟ್ಟಿ ಅವರು ಮೊದಲ ಬಜೆಟ್ ಮಂಡಿಸಿದ್ದರು. ಅಂದಿನಿಂದ 2020ರವರೆಗೂ ಬ್ರೀಫ್‌ಕೇಸ್‌ನಲ್ಲಿಟ್ಟ ಮುದ್ರಿತ ಬಜೆಟ್ ಪ್ರತಿಗಳನ್ನು ಓದುವ ಮೂಲಕ ಹಣಕಾಸು ಸಚಿವರು ವರ್ಷದ ಆಯವ್ಯಯ ಮಂಡಿಸುತ್ತಿದ್ದರು.
ಪ್ರಪ್ರಥಮ ಬಾರಿಗೆ ಕಾಗದರಹಿತ ಬಜೆಟ್; ಕೇಂದ್ರ ಬಜೆಟ್ ಆಯಪ್‌ನಲ್ಲಿ ಮಾಹಿತಿ ಲಭ್ಯBudget 2025 | ಸ್ವಾತಂತ್ರ್ಯಾ ನಂತರ ಮಂಡನೆಯಾದ ಬಜೆಟ್‌ಗಳ ವಿಶೇಷತೆಗಳಿವು
ಆದರೆ, 2019ರಲ್ಲಿ ಮೊದಲ ಬಾರಿ ಬಜೆಟ್ ಮಂಡಿಸಿದ್ದ ನಿರ್ಮಲಾ, ಬ್ರೀಫ್‌ಕೇಸ್ ಬಜೆಟ್ ಸಾಂಪ್ರದಾಯಕ್ಕೆ ಇತಿಶ್ರೀ ಹಾಡಿದ್ದರು. ಅದರ ನಂತರ ಕೋವಿಡ್ ಬಳಿಕ 2021-22ನೇ ಸಾಲಿನಲ್ಲಿ ಮೊದಲ ಬಾರಿಗೆ ದೇಶದಲ್ಲಿ ಕಾಗದ ರಹಿತ ಬಜೆಟ್ ಪರಿಚಯಿಸಲಾಯಿತು. ಕೋವಿಡ್-19 ಹಿನ್ನೆಲೆಯಲ್ಲಿ ಬಜೆಟ್ ಪ್ರತಿಗಳನ್ನು ಮುದ್ರಿಸಲಿಲ್ಲ. ಬಜೆಟ್ ಮಂಡನೆಯ ಬಳಿಕ ಸಾಫ್ಟ್ ಕಾಪಿಗಳನ್ನು ಸಂಸದರಿಗೆ ಹಂಚಲಾಗಿತ್ತು. ಸಾರ್ವಜನಿಕರು ಆಯಪ್ ಮೂಲಕವೂ ಬಜೆಟ್ ಪ್ರತಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಕೇಂದ್ರ ತಿಳಿಸಿತ್ತು.
2021ರಲ್ಲಿ ಕೋವಿಡ್ ಸಾಂಕ್ರಾಮಿಕದ ಬಳಿಕ ಮೊದಲ ಬಾರಿ ಕಾಗದ ಪತ್ರಗಳನ್ನು ಬಿಟ್ಟು ಡಿಜಿಟಲ್ ಟ್ಯಾಬ್ಲೆಟ್ ಬಳಸಿ ಬಜೆಟ್ ಮಂಡಿಸಿದ್ದರು. ಅಂದಿನಿಂದ ಸಾಂಪ್ರದಾಯಿಕ ಮಾದರಿಯಲ್ಲಿ ಬಜೆಟ್ ಭಾಷಣವನ್ನು ಪುಸ್ತಕದ ಬದಲಾಗಿ 'ಬಹಿ-ಖಾತಾ' ಶೈಲಿಯ ಚೀಲದಲ್ಲಿ ಡಿಜಿಟಲ್ ಟ್ಯಾಬ್ಲೆಟ್ ಅನ್ನು ಹಿಡಿದು ಬರುತ್ತಿದ್ದಾರೆ ನಿರ್ಮಲಾ ಸೀತಾರಾಮನ್. ಈ ಮೂಲಕ ಕಾಗದ ರಹಿತ ಬಜೆಟ್ ಮಂಡನೆ ಮಾಡಿರುವ ಮೊದಲ ಹಣಕಾಸು ಸಚಿವೆ ಎನ್ನುವ ಖ್ಯಾತಿಯೂ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲುತ್ತದೆ.

