HEALTH TIPS

ʼTaipei 101ʼ ಕಟ್ಟಡ ಏರಿದ್ದಕ್ಕೆ ಅಲೆಕ್ಸ್ ಹೊನಾಲ್ಡ್ ಗೆ 5 ಲಕ್ಷ ಡಾಲರ್ ಸಂಭಾವನೆ; ಅದಕ್ಕಿಂತ ಹೆಚ್ಚು ಮೊತ್ತ ನೀಡುತ್ತಿದ್ದೆ ಎಂದ ಯೂಟ್ಯೂಬರ್ MrBeast

ನವದೆಹಲಿ: ಖ್ಯಾತ ರಾಕ್ ಕ್ಲೈಂಬರ್ ಅಲೆಕ್ಸ್ ಹೊನಾಲ್ಡ್ 508 ಮೀಟರ್ ಎತ್ತರದ ತೈಪೇಯಿ 101 ಕಟ್ಟಡವನ್ನು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಏರಿ ದಾಖಲೆ ನಿರ್ಮಿಸಿದ್ದಾರೆ. ಈ ಸಾಹಸ ದೃಶ್ಯವನ್ನು ನನ್ನ ಯೂಟ್ಯೂಬ್ ಚಾನೆಲ್ನಲ್ಲಿ ನೇರ ಪ್ರಸಾರ ಮಾಡಿದ್ದರೆ, ನಾನು 5 ಲಕ್ಷ ಡಾಲರ್ಗಿಂತಲೂ ಹೆಚ್ಚು ಮೊತ್ತ ನೀಡುತ್ತಿದ್ದೆ ಎಂದು MrBeast ಎಂದೇ ಖ್ಯಾತರಾಗಿರುವ ಯೂಟ್ಯೂಬರ್ ಜಿಮ್ಮಿ ಡೊನಾಲ್ಡ್ಸನ್ ಹೇಳಿದ್ದಾರೆ.

ಜನವರಿ 25ರಂದು 1667 ಅಡಿ ಎತ್ತರದ ತೈವಾನ್ನಲ್ಲಿರುವ ಈ ಸ್ಕೈಸ್ಕ್ರೇಪರ್ ಅನ್ನು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಅಲೆಕ್ಸ್ ಹೊನಾಲ್ಡ್ ಕೇವಲ ಒಂದು ಗಂಟೆ 32 ನಿಮಿಷಗಳಲ್ಲಿ ಏರಿದ್ದರು. ಈ ಸಾಹಸ ದೃಶ್ಯವನ್ನು ಸ್ಕೈಸ್ಕ್ರೇಪರ್ ಯೋಜನೆಯ ಭಾಗವಾಗಿ ನೆಟ್ಫ್ಲಿಕ್ಸ್ ಒಟಿಟಿ ನೇರ ಪ್ರಸಾರ ಮಾಡಿತ್ತು.

The New York Times ಸುದ್ದಿ ಸಂಸ್ಥೆಯ ಪ್ರಕಾರ, ನೆಟ್ಫ್ಲಿಕ್ಸ್ ಒಟಿಟಿ ವೇದಿಕೆ ಅಲೆಕ್ಸ್ ಹೊನಾಲ್ಡ್ಗೆ 5 ಲಕ್ಷ ಡಾಲರ್ ಸಂಭಾವನೆ ನೀಡಿತ್ತು. ಬಳಿಕ ಮಾತನಾಡಿದ ಹೊನಾಲ್ಡ್, "ಈ ಮೊತ್ತ ಬೇರೆ ಪ್ರಮುಖ ವೃತ್ತಿಪರ ಕ್ರೀಡೆಗಳಲ್ಲಿನ ವೇತನಕ್ಕೆ ಹೋಲಿಸಿದರೆ ಮುಜುಗರವಾಗುವಷ್ಟು ಸಣ್ಣದಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದರ ಹೊರತಾಗಿಯೂ ತಮಗೆ ನೀಡಿದ ಸಂಭಾವನೆಯ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದ ಹೊನಾಲ್ಡ್, ಈ ಮೊತ್ತದಿಂದ ನನ್ನ ಕ್ಯಾಮೆರಾ ತಂಡ ಹಾಗೂ ಆತ್ಮೀಯ ಮಿತ್ರರಿಗೆ ನೆರವು ನೀಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಅಲ್ಲದೆ, ನಾನು ಸಂಭಾವನೆ ಇಲ್ಲದಿದ್ದರೂ ರಾಕ್ ಕ್ಲೈಂಬಿಂಗ್ ಮಾಡುತ್ತಿದ್ದೆ ಎಂದೂ ತಿಳಿಸಿದ್ದಾರೆ.

ಈ ಸುದ್ದಿಗೆ ಸಂಬಂಧಿಸಿದಂತೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ MrBeast, ನನ್ನ ಯೂಟ್ಯೂಬ್ ವೇದಿಕೆಯಲ್ಲಿ ಈ ಸಾಹಸ ಪ್ರಸಾರವಾಗಿದ್ದರೆ, ನಾನು ಇನ್ನೂ ಹೆಚ್ಚು ಮೊತ್ತ ನೀಡುತ್ತಿದ್ದೆ ಎಂದು ಹೇಳಿದ್ದಾರೆ.

ಈ ಪೋಸ್ಟ್ಗೆ ಪ್ರತಿಕ್ರಿಯೆಗಳ ಮಹಾಪೂರ ಹರಿದು ಬರುತ್ತಿದ್ದು, "ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ಸಾಹಸಕ್ಕೆ ಮುಂದಾಗಿರಬಹುದು. ಆದರೆ, ಈ ಸಾಹಸವನ್ನು ದಾರಿಹೋಕರಿಗೆ ಯಾವುದೇ ಅಪಾಯವಾಗದಂತೆ ಕಾನೂನುಬದ್ಧವಾಗಿ ನಡೆಸಿದ್ದಾರೆ" ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು, "ಅವರಿಗೆ ಬಹುಶಃ ಇನ್ನಷ್ಟು ಲೈಕ್ ಗಳು ದೊರೆಯಬಹುದು ಹಾಗೂ ಮತ್ತಷ್ಟು ಸಾಹಸ ದೃಶ್ಯಗಳನ್ನು ಪೋಸ್ಟ್ ಮಾಡಬಹುದು. ಅದರಿಂದ ಅವರಿಗೆ ಹೂಡಿಕೆಯೂ ಮರಳಬಹುದು" ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries