HEALTH TIPS

ಮುಂದಿನ 5 ವರ್ಷಗಳಲ್ಲಿ 50 ವಿಮಾನ ನಿಲ್ದಾಣ ನಿರ್ಮಿಸುವ ಗುರಿ: ವಿಮಾನಯಾನ ಸಚಿವಾಲಯ

ನವದೆಹಲಿ: 'ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ 50ಕ್ಕೂ ಅಧಿಕ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಇದು ದೇಶದ ರಿಯಲ್ ಎಸ್ಟೇಟ್‌ ವಯಲಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲಿದೆ' ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್‌ ನಾಯ್ಡು ಹೇಳಿದ್ದಾರೆ.

ಜಗತ್ತಿನ ನಾಗರಿಕ ವಿಮಾನಯಾನ ಉದ್ಯಮದ ಮಾರುಕಟ್ಟೆಯಲ್ಲಿ ಭಾರತವು ವೇಗವಾಗಿ ಬೆಳವಣಿಗೆ ಸಾಧಿಸುತ್ತಿದೆ. ಪ್ರಸ್ತುತ ದೇಶದಲ್ಲಿ 165 ವಿಮಾನ ನಿಲ್ದಾಣಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಶುಕ್ರವಾರ ತಿಳಿಸಿದ್ದಾರೆ.

ವಿಮಾನಯಾನ ವಲಯವು ನಿರಂತರವಾಗಿ ಬೆಳೆಯುತ್ತಿದ್ದರೂ, ವಿಮಾನ ನಿಲ್ದಾಣಗಳ ಸುತ್ತಮುತ್ತಲಿನ ಕಟ್ಟಡಗಳ ಎತ್ತರವು ಸವಾಲಾಗಿವೆ. ವಿಶೇಷವಾಗಿ ಮುಂಬೈ, ಹೈದರಾಬಾದ್, ಕೋಲ್ಕತ್ತ ಮತ್ತು ಚೆನ್ನೈನಂತಹ ನಗರಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಈ ಸಮಸ್ಯೆ ಬಗೆಹರಿಸಲು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) ಜೊತೆಗೂಡಿ ಅಧ್ಯಯನ ನಡೆಸಲು ಆರಂಭಿಸಲಾಗಿದೆ. ಈ ತಂಡವು ನೀಡುವ ವರದಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

2030ರ ವೇಳೆಗೆ ದೇಶದ ರಿಯಲ್ ಎಸ್ಟೇಟ್‌ ವಲಯವು ಅಂದಾಜು ₹90 ಲಕ್ಷ ಕೋಟಿ (1 ಟ್ರಿಲಿಯನ್ ಡಾಲರ್) ಮೌಲ್ಯ ಹೊಂದಲಿದೆ. ಇದು 2047ರ ವೇಳೆಗೆ ₹635 ಲಕ್ಷ ಕೋಟಿಯಷ್ಟಾಗಲಿದೆ (7 ಟ್ರಿಲಿಯನ್ ಡಾಲರ್) ಎಂದು ತಿಳಿಸಿದ್ದಾರೆ.

ಕೆ. ರಾಮಮೋಹನ್‌ ನಾಯ್ಡು ಕೇಂದ್ರ ನಾಗರಿಕ ವಿಮಾನಯಾನ ಸಚಿವಸರಾಸರಿ ಪ್ರತಿ 33 ದಿನಗಳಿಗೊಮ್ಮೆ ಹೊಸ ವಿಮಾನ ನಿಲ್ದಾಣ ಅಥವಾ ಹೊಸ ಟರ್ಮಿನಲ್‌ ದೇಶದಲ್ಲಿ ನಿರ್ಮಾಣವಾಗುತ್ತಿದೆ

ದೇಶದಲ್ಲಿ 25001 ಪೈಲಟ್‌ಗಳು

ದೇಶದಲ್ಲಿ ಒಟ್ಟು 25001 ಸಕ್ರಿಯ ಪೈಲಟ್‌ಗಳಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಖಾತೆ ಸಚಿವ ಮುರಳೀಧರ್ ಮೊಹೋಲ್ ಲೋಕಸಭೆಗೆ ತಿಳಿಸಿದ್ದಾರೆ. ಏರ್‌ಲೈನ್‌ ಟ್ರಾನ್ಸ್‌ಪೋರ್ಟ್ ಪೈಲಟ್ ಲೈಸೆನ್ಸ್ (ಎಟಿಪಿಎಲ್) ಹೊಂದಿರುವ 10051 ವಿಮಾನದ ಪೈಲಟ್‌ಗಳಿದ್ದಾರೆ. 210 ಹೆಲಿಕಾಪ್ಟರ್‌ ಪೈಲಟ್‌ಗಳು ಕಮರ್ಷಿಯಲ್‌ ಪೈಲಟ್ ಲೈಸೆನ್ಸ್ (ಸಿಪಿಎಲ್-ವಿಮಾನ ಮಾತ್ರ) ಮತ್ತು ಕಮರ್ಷಿಯಲ್‌ ಪೈಲಟ್ ಲೈಸೆನ್ಸ್ (ಸಿಪಿಎಲ್-ಹೆಲಿಕಾಪ್ಟರ್‌) ಹೊಂದಿರುವವರು ಕ್ರಮವಾಗಿ 12480 ಮತ್ತು 777 ಇದ್ದಾರೆ. ಇದಲ್ಲದೆ 1477 ಪೈಲಟ್‌ಗಳು ಪ್ರೈವೆಟ್ ಪೈಲಟ್‌ ಲೈಸೆನ್ಸ್‌ (ವಿಮಾನ) ಮತ್ತು 6 ಪ್ರೈವೆಟ್ ಪೈಲಟ್ ಲೈಸೆನ್ಸ್ (ಪಿಪಿಎಲ್-ಹೆಲಿಕಾಪ್ಟರ್‌) ಪಡೆದ ಪೈಲಟ್‌ಗಳಿದ್ದಾರೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries