HEALTH TIPS

ಹಿಮಾಲಯ ಚಾರಣಿಗರಿಗೆ ಸಿಹಿ ಸುದ್ದಿ: ಉತ್ತರಾಖಂಡದ 83 ಶಿಖರಗಳು ಏರಲು ಮುಕ್ತ

ಉತ್ತರಾಖಂಡ: ಉತ್ತರ ಭಾರತಕ್ಕೆ ಹೋಗಬೇಕು, ಹಿಮಾಲಯದಲ್ಲಿ ಚಾರಣ ಮಾಡಬೇಕು, ಸಾಹಸಮಯ ಅನ್ವೇಷಣೆಯನ್ನು ಕೈಗೊಳ್ಳಬೇಕು ಎನ್ನುವ ಪರ್ವತಾರೋಹಿಗಳಿಗೆ ಉತ್ತರಾಖಂಡ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. 83 ಪ್ರಮುಖ ಹಿಮಾಲಯ ಶಿಖರಗಳನ್ನು ಪರ್ವತಾರೋಹಿಗಳ ಚಾರಣಕ್ಕೆ ಮುಕ್ತವಾಗಿಸಿದೆ.

ಸಾಹಸ ಪ್ರವಾಸೋದ್ಯಮವನ್ನು ಬಲಪಡಿಸಲು, ಭಾರತ ಮತ್ತು ವಿದೇಶಗಳಿಂದ ಪರ್ವತಾರೋಹಿಗಳನ್ನು ಆಕರ್ಷಿಸಲು ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ.

ಮುಖ್ಯವಾಗಿ ಪರ್ವತಾರೋಹಣಕ್ಕೆ ರಾಜ್ಯ ಮಟ್ಟದಲ್ಲಿ ವಿಧಿಸಲಾಗುತ್ತಿದ್ದ ಹೆಚ್ಚುವರಿ ಶುಲ್ಕಗಳನ್ನು ತೆಗೆದುಹಾಕಿದೆ.

ಪರ್ವತಾರೋಹಣ ಅಥವಾ ಚಾರಣಕ್ಕೆ ಸಂಬಂಧಿಸಿದ ಅನುಮತಿಯನ್ನು ಉತ್ತರಾಖಂಡ ಮೌಂಟೇನಿಯರಿಂಗ್ ಪರ್ಮಿಷನ್ ಸಿಸ್ಟಮ್' (UKMPS) ಆನ್‌ಲೈನ್ ಪೋರ್ಟಲ್ ಮೂಲಕ ಪಡೆಯಬಹುದು ಎಂದು ಸರ್ಕಾರ ತಿಳಿಸಿದೆ. ಆದರೆ ವಿದೇಶಿ ಪರ್ವತಾರೋಹಿಗಳು ಭಾರತೀಯ ಪರ್ವತಾರೋಹಣ ಪ್ರತಿಷ್ಠಾನ (Indian Mountaineering Foundation - IMF) ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಹಿಮಾಲಯ

ಪರ್ವತಾರೋಹಣಕ್ಕೆ ಮುಕ್ತವಾಗಿರುವ ಪ್ರಮುಖ ಶಿಖರಗಳು

ಹಿಮಾಲಯ

ಆರ್ಥಿಕತೆಗೆ ಬಲ ತುಂಬುವ ಭರವಸೆ

83 ಹಿಮಾಲಯ ಶಿಖರಗಳನ್ನು ಚಾರಣಕ್ಕೆ ಮುಕ್ತವಾಗಿಸುವ ಮೂಲಕ, ರಾಜ್ಯವು ದೂರದ ಮತ್ತು ಗಡಿ ಹಳ್ಳಿಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನು ಹೆಚ್ಚಿಸುವ ಮತ್ತು ಸ್ಥಳೀಯ ಸಮುದಾಯಗಳಿಗೆ ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಜತೆಗೆ ಈ ಉಪಕ್ರಮವು ಗುಡ್ಡಗಾಡು ಪ್ರದೇಶಗಳಲ್ಲಿರುವ ಜನರ ವಲಸೆಯನ್ನು ತಡೆಯಲು, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ನೆರವಾಗಲಿದೆ.

ಈ ಕ್ರಮದಿಂದಾಗಿ ಚಾರಣ ಮಾರ್ಗದರ್ಶಕರು ಮತ್ತು ಪರ್ವತಾರೋಹಣ ಸಹಾಯಕರಿಗೆ ಉದ್ಯೋಗ, ಪೋರ್ಟರ್‌ಗಳು ಮತ್ತು ಲಾಜಿಸ್ಟಿಕ್ಸ್ ಸಿಬ್ಬಂದಿಗೆ ಕೆಲಸ ಸಿಗುವ ಭರವಸೆ, ಹೋಂಸ್ಟೇ ಮತ್ತು ಅತಿಥಿಗೃಹಗಳ ನಿರ್ವಾಹಕರಿಗೆ ಆದಾಯ, ಸಾರಿಗೆಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries