HEALTH TIPS

ಗೂಗಲ್ ಜೆಮಿನಿ ಮತ್ತು ಚಾಟ್‌ ಜಿಪಿಟಿಯನ್ನು ಮೀರಿಸಿದ ಭಾರತದ ಸರ್ವಂ AI

ಈ ಮೊದಲು ಭಾರತೀಯ ಭಾಷಾ ಮಾಡೆಲ್‌ ಗಳತ್ತ ಮಾತ್ರ ಗಮನವಿಟ್ಟಿದೆ ಎನ್ನುವ ಅಪಖ್ಯಾತಿಗೆ ಗುರಿಯಾಗಿದ್ದ ಸರ್ವಂ ವಿಷನ್ ಇದೀಗ ಜಾಗತಿಕವಾಗಿ ತನ್ನ ಸಾಧನೆಯಿಂದ ಗಮನ ಸೆಳೆದಿದೆ.

ಭಾರತದಲ್ಲಿ ಅಂತಿಮವಾಗಿ ವಿಶ್ವದರ್ಜೆಯ AI ಮಾಡೆಲ್ ಒಂದನ್ನು ಸೃಷ್ಟಿಸಲಾಗಿದೆ. ಕನಿಷ್ಠ ಕೆಲವು ಭಾರತಕ್ಕೇ ಸೀಮಿತವಾದ ಕಾರ್ಯಗಳನ್ನು ಮಾಡಲು ಇದು ಉತ್ತಮ AI ಮಾಡೆಲ್ ಆಗಿದೆ.

ಸರ್ವಂ AI ಯು Vision ಎನ್ನುವ OCR ಟೂಲ್ ಅನ್ನು ತಂದಿದೆ. ಅದು ಭಾರತೀಯ ಭಾಷೆಗಳಲ್ಲಿ ದಾಖಲೆಗಳನ್ನು ಓದುವಲ್ಲಿ ಜೆಮಿನಿ ಮತ್ತು ಚಾಟ್‌ ಜಿಪಿಟಿ ಯನ್ನು ಮೀರಿಸಿದೆ. ಮತ್ತೊಂದು ಟೂಲ್ ಆಗಿರುವ Bulbul V3 ಯು AI ಧ್ವನಿ ಉತ್ಪಾದನೆಯಲ್ಲಿ ಇತರರನ್ನು ಹಿಂದಿಕ್ಕಿದೆ.

AI ಮಾದರಿಗಳ ವಿಚಾರಕ್ಕೆ ಬಂದಾಗ ಅಮೆರಿಕ ಮತ್ತು ಚೀನಾ ಮುಂಚೂಣಿಯಲ್ಲಿವೆ. ಭಾರತದಲ್ಲಿ ಪ್ರತಿಭೆಗೆ ಕೊರತೆ ಇಲ್ಲದಿದ್ದರೂ, ಮೂಲ AI ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವುದು ವಿರಳವಾಗಿ ಕಂಡುಬರುತ್ತದೆ. ಆದರೆ ಬೆಂಗಳೂರು ಮೂಲದ ಸ್ಟಾರ್ಟಪ್ ಸರ್ವಂ AI ತಮ್ಮ 'Sovereign AI'ನೊಂದಿಗೆ ಇದನ್ನು ಬದಲಿಸುತ್ತಿದ್ದಾರೆ. ಕಂಪೆನಿ ಭಾರತದಲ್ಲಿ ಮೂಲದಿಂದಲೇ ಫಂಡಮೆಂಟಲ್ AI ಮಾಡೆಲ್‌ ಗಳನ್ನು ಸೃಷ್ಟಿಸುತ್ತಿದೆ. ಈ ವಾರ ಕಂಪೆನಿ ತಯಾರಿಸಿದ ಎರಡು ಟೂಲ್‌ ಗಳಾದ 'ಸರ್ವಂ ವಿಷನ್' ಮತ್ತು 'ಬುಲ್ಬುಲ್' ಸುದ್ದಿಯಲ್ಲಿವೆ.

ಸರ್ವಂ ವಿಷನ್ ಜನಪ್ರಿಯ AI ಮಾಡೆಲ್‌ ಗಳಾದ ಚಾಟ್‌ ಜಿಪಿಟಿ , ಗೂಗಲ್ ಜೆಮಿನಿ ಹಾಗೂ ಆಂಥ್ರೋಪಿಕ್ ಕ್ಲೌಡ್ ಮೊದಲಾದವುಗಳನ್ನು ಕೆಲವು ಮಾನದಂಡಗಳಾದ ಆಪ್ಟಿಕಲ್ ಕ್ಯಾರೆಕ್ಟರ್ ರೆಕೊಗ್ನಿಶನ್ (OCR) ನಲ್ಲಿ ಹಿಂದಿಕ್ಕಿದೆ. ಸರ್ವಂ ವಿಷನ್‌ ನ ಕಾರ್ಯಕ್ಷಮತೆಗಾಗಿ ತಜ್ಞರಿಂದ ಮತ್ತು ಬಳಕೆದಾರರಿಂದಲೂ ಪ್ರಶಂಸೆ ಗಳಿಸುತ್ತಿದೆ.

ಈ ಬಗ್ಗೆ ಸರ್ವಂ AI ನ ಸಹ ಸಂಸ್ಥಾಪಕರಾದ ಪ್ರತ್ಯುಷ್ ಕುಮಾರ್ ಇತ್ತೀಚೆಗೆ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಂಪೆನಿಯ ಸಾಧನೆಯನ್ನು ಟ್ವೀಟ್ ಮಾಡಿದ್ದಾರೆ. ಕಂಪೆನಿಯ ಪ್ರಕಾರ olmOCR-Bench ನಲ್ಲಿ ಸರ್ವಂ ವಿಷನ್ ಶೇ. 84.3 ರಷ್ಟು ನಿಖರತೆ ಸಾಧಿಸಿದೆ. ಈ ಸ್ಕೋರ್ Gemini 3 Pro ಗಿಂತ ಉನ್ನತ ಮಟ್ಟದಲ್ಲಿದೆ. ಇತ್ತೀಚಿನ OCR ಮಾಡೆಲ್‌ ಗಳಾದ DeepSeek OCR v2 ಮತ್ತು ChatGPT ಬಹಳ ಕೆಳಗಿನ ಶ್ರೇಣಿಯಲ್ಲಿವೆ.

ಮಾತ್ರವಲ್ಲದೆ, AI ವ್ಯವಸ್ಥೆಗಳು ನಿಜವಾದ ದಾಖಲೆಗಳನ್ನು ಹೇಗೆ ಓದಿ ಅರ್ಥಮಾಡಿಕೊಳ್ಳುತ್ತವೆ ಎನ್ನುವ ವಿಷಯವಾದ OmniDocBench v1.5 ಮಾನದಂಡದಲ್ಲೂ ಸರ್ವಂ ವಿಷನ್ ಉತ್ತಮ ಸಾಧನೆ ತೋರಿಸಿದೆ. ಅದು ಈ ಮಾನದಂಡದಲ್ಲಿ ಶೇ. 93.28 ರಷ್ಟು ನಿಖರತೆ ತೋರಿಸಿದೆ. ಮುಖ್ಯವಾಗಿ ಸಂಕೀರ್ಣ ಲೇಔಟ್‌ಗಳು, ತಾಂತ್ರಿಕ ಟೇಬಲ್‌ ಗಳು ಮತ್ತು ಗಣಿತದ ಸಿದ್ಧಾಂತಗಳನ್ನು ಚೆನ್ನಾಗಿ ಗುರುತಿಸಿದೆ.

ಈ ಮೊದಲು ಭಾರತೀಯ ಭಾಷಾ ಮಾಡೆಲ್‌ ಗಳ ಮೇಲೆ ಮಾತ್ರ ಗಮನವಿಟ್ಟಿದೆ ಎನ್ನುವ ಅಪಖ್ಯಾತಿಗೆ ಗುರಿಯಾಗಿದ್ದ ಸರ್ವಂ ಇದೀಗ ಜಾಗತಿಕ ಗಮನವನ್ನು ಪಡೆದಿದೆ. ತಂತ್ರಜ್ಞಾನ ವಿಶ್ಲೇಷಕ ಡೀಡಿ ದಾಸ್ ಸಣ್ಣ ಭಾಷಾ ಮಾಡೆಲ್‌ ಗಳನ್ನು ನಿರ್ಮಿಸುವುದೇಕೆ ಎಂದು ಪ್ರಶ್ನಿಸಿದ್ದರು. ಇದೀಗ ಅವರು ಕಂಪೆನಿಯ ಬಗ್ಗೆ ಕಡಿಮೆ ಅಂದಾಜು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ದಾಸ್ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಸರ್ವಂನ OCR ಮತ್ತು ಭಾರತೀಯ ಭಾಷೆಗಳ ಸ್ಪೀಚ್ ಮಾಡೆಲ್‌ ಗಳು ಬಲಿಷ್ಠವಾಗಿವೆ ಮತ್ತು ಜಾಗತಿಕವಾಗಿ ಬೃಹತ್ AI ಪ್ರಯೋಗಾಲಯಗಳು ಅಲಕ್ಷಿಸಿದ ವಿಚಾರದಲ್ಲಿ ಸರ್ವಂ ಯಶಸ್ಸು ಸಾಧಿಸಿದೆ ಎಂದು ಹೇಳಿದ್ದಾರೆ.

"ಸರ್ವಂ ಕುರಿತ ನನ್ನ ಅಭಿಪ್ರಾಯ ತಪ್ಪು. ವರ್ಷದ ಹಿಂದೆ ಅವರ ಬಗ್ಗೆ ಬರೆದಾಗ ಸಣ್ಣ ಭಾರತೀಯ ಭಾಷಾ ಮಾಡೆಲ್‌ ಗಳಿಗೆ ತರಬೇತಿ ನೀಡುವ ದಿಕ್ಕು ತಪ್ಪು ಎಂದು ಹೇಳಿದ್ದೆ. ಆದರೆ ಅವರು ಯಶಸ್ಸು ಸಾಧಿಸಿದ್ದಾರೆ. ಪಠ್ಯದಿಂದ ಮಾತು, ಮಾತಿನಿಂದ ಪಠ್ಯದಲ್ಲಿ ಅವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಭಾರತೀಯ ಭಾಷೆಗಳಿಗೆ ಅವರ OCR ಮಾಡೆಲ್‌ ಗಳು ಅತ್ಯುತ್ತಮವಾಗಿವೆ. ಬೆಲೆಯೂ ಅಗ್ಗವಾಗಿಯೇ ಇದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

OCR ಟೂಲ್‌ ಗೆ ಹೆಚ್ಚುವರಿಯಾಗಿ ಸರ್ವಂ ಹೊಸ AI ಧ್ವನಿ ಮಾಡೆಲ್ ಆಗಿರುವ Bulbul V3 ಅನ್ನೂ ತಂದಿದೆ. ಇದು ಪಠ್ಯದಿಂದ ಮಾತು (Text-to-Speech) AI ಮಾಡೆಲ್ ಆಗಿದೆ. AI ಬಳಸಿ ಆಡಿಯೊ ಉತ್ಪಾದಿಸುವ ಉದ್ದೇಶ ಹೊಂದಿದೆ. ಸದ್ಯ ಈ ಟೂಲ್ 35ಕ್ಕೂ ಹೆಚ್ಚು ಭಾಷೆಗಳು ಮತ್ತು 11 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಒಟ್ಟು 22 ಭಾರತೀಯ ಭಾಷೆಗಳನ್ನು ಸೇರಿಸುವ ಉದ್ದೇಶವನ್ನು ಕಂಪೆನಿ ಹೊಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries