HEALTH TIPS

ಪಾಲಕ್ಕಾಡ್ ಬಳಿಕ ಮಲಪ್ಪುರಂನಲ್ಲಿ ಈರುಳ್ಳಿ ಸಾಗಿಸುತ್ತಿದ್ದ ಲಾರಿಯಲ್ಲಿ ಅಡಗಿಸಿಟ್ಟಿದ್ದ ಸ್ಫೋಟಕಗಳ ವಶಕ್ಕೆ ಪಡೆದ ಪೋಲೀಸರು

ಮಲಪ್ಪುರಂ:  ಮಲಪ್ಪುರಂನಲ್ಲಿ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈರುಳ್ಳಿ ಹೇರಿಕೊಂಡು ಬಂದ ಲಾರಿಯಿಂದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 


ಪಾಲಕ್ಕಾಡ್‍ನಲ್ಲಿ ಕಲ್ಲಂಗಡಿ ಲಾರಿಯ ನಂತರ ಮಲಪ್ಪುರಂನಲ್ಲಿ ಈರುಳ್ಳಿ ಸಾಗಿಸುತ್ತಿದ್ದ ಲಾರಿಯಲ್ಲಿ ಅಡಗಿಸಿಟ್ಟಿದ್ದ ಸ್ಫೋಟಕಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಚೆಮ್ಮಾಡ್ ನಿಂದ ಲಾರಿ ಬರುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ. ತಪಾಸಣೆಯ ವೇಳೆ, ಜೆಲಾಟಿನ್ ಸ್ಟಿಕ್‍ಗಳು ಮತ್ತು ಡಿಟೋನೇಟರ್ ವೈರ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಫೋಟಕಗಳನ್ನು ಲಾರಿಯಲ್ಲಿ ಪೆಟ್ಟಿಗೆಗಳಲ್ಲಿ ಮರೆಮಾಡಲಾಗಿತ್ತು. ಗೌಪ್ಯ ಮಾಹಿತಿಯ ಆಧಾರದ ಮೇಲೆ ತಪಾಸಣೆ ನಡೆಸಲಾಯಿತು. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಚೆಮ್ಮಾಡ್£ Àಲ್ಲಿರುವ ಹೋಲೋಬ್ರಿಕ್ಸ್ ಅಂಗಡಿ ಬಳಿ ಲಾರಿ ನಿಂತಿತ್ತು.

ಈರುಳ್ಳಿಯನ್ನು ಸಣ್ಣ ಲಾರಿಗೆ ವರ್ಗಾಯಿಸಲು ರಾತ್ರಿ ವಾಹನವೊಂದು ಬಂದಿತ್ತು. ಜನರು ಕಾರಿನಲ್ಲಿ ಬಂದರು. ಈ ಮಧ್ಯೆ, ಪೆÇಲೀಸರು ಸ್ಥಳಕ್ಕೆ ತಲುಪಿದರು. ಇದರೊಂದಿಗೆ, ಸ್ಥಳದಲ್ಲಿದ್ದ ಎಲ್ಲರೂ ಪರಾರಿಯಾಗಿದ್ದಾರೆ. ತರುವಾಯ, ಪೋಲೀಸರು ನಡೆಸಿದ ತಪಾಸಣೆಯ ಸಮಯದಲ್ಲಿ, ಈರುಳ್ಳಿಯ ಕೆಳಗೆ ಅಡಗಿಸಿಟ್ಟಿದ್ದ ಸ್ಫೋಟಕಗಳು ಕಂಡುಬಂದಿವೆ.

ಮತ್ತೊಂದು ಘಟನೆಯಲ್ಲಿ, ಪಾಲಕ್ಕಾಡ್‍ನಲ್ಲಿ ಪಿಕಪ್ ವ್ಯಾನ್‍ನಲ್ಲಿ ಕಳ್ಳಸಾಗಣೆ ಮಾಡಲಾಗಿದ್ದ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ನಿನ್ನೆ ವಶಪಡಿಸಿಕೊಳ್ಳಲಾಗಿತ್ತು. ಈ ಘಟನೆ ಪಾಲಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕಲ್ಲಂಗಡಿ ಲೋಡ್ ಮರೆಯಲ್ಲಿ ಕಳ್ಳಸಾಗಣೆ ಮಾಡಲಾಗಿದ್ದ ಸ್ಫೋಟಕಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಪಾಲಕ್ಕಾಡ್ ನಗರ ಪೋಲೀಸರು ರಾತ್ರಿ 8:30 ರ ಸುಮಾರಿಗೆ ವೈದ್ಯಕೀಯ ಕಾಲೇಜು ಬಳಿ ಸ್ಫೋಟಕಗಳನ್ನು ವಶಪಡಿಸಿಕೊಂಡರು. ನಿಲ್ಲಿಸದ ವಾಹನವನ್ನು ಬೆನ್ನಟ್ಟಿದ ಪೋಲೀಸರು ಅದನ್ನು ಸುತ್ತುವರೆದು ಬಂಧಿಸಿದರು.

ವಾಹನದ ಚಾಲಕನನ್ನು ಪೆÇಲೀಸರು ವಶಕ್ಕೆ ಪಡೆದರು. ಕಲ್ಲಂಗಡಿ ಲೋಡಿನ ಕೆಳಗೆ ಒಂದು ಪೆಟ್ಟಿಗೆಯಲ್ಲಿ ಸ್ಫೋಟಕಗಳನ್ನು ಇರಿಸಲಾಗಿತ್ತು. ಡಿಟೋನೇಟರ್‍ಗಳು ಮತ್ತು ಜೆಲಾಟಿನ್ ಸ್ಟಿಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ನೂರಕ್ಕೂ ಹೆಚ್ಚು ಪೆಟ್ಟಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries