HEALTH TIPS

ಶಾಂತಿ, ಸ್ಥಿರತೆಯ ಸುಳಿಯಲ್ಲಿ ನೇಪಾಳ: ರಾಜಕೀಯ ಪಕ್ಷಗಳ ಪಡಿಪಾಟಲು...

ಕಠ್ಮಂಡು: ದಕ್ಷಿಣ ಏಷ್ಯಾದ ಹಿಮಾಲಯದ ತಪ್ಪಲಿನಲ್ಲಿರುವ ಪ್ರಮುಖ ಪರ್ವತ ದೇಶ ನೇಪಾಳದಲ್ಲಿ ಜೆನ್‌-ಜಿಗಳ (ಯುವಪಡೆ) ಪ್ರತಿಭಟನೆ ಬಳಿಕ ಚುನಾವಣೆ ಪರ್ವ ಆರಂಭವಾಗಿದೆ. 

ರಾಜತಂತ್ರ ವ್ಯವಸ್ಥೆಯಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಮರಳಿದ್ದ ನೇಪಾಳದಲ್ಲಿ ಇತ್ತೀಚೆಗೆ ಜೆನ್‌-ಜಿಗಳು ಆಡಳಿತ ಸರ್ಕಾರದ ವಿರುದ್ಧ ಭ್ರಷ್ಟಚಾರ, ಸ್ವಜನಪಕ್ಷಪಾತದ ಆರೋಪ ಮಾಡಿ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದರು.

ಇದರ ಪರಿಣಾಮ ಆಡಳಿತರೂಢ ಸರ್ಕಾರ ಅಧಿಕಾರ ಕಳೆದುಕೊಂಡಿತ್ತು.

ಚುನಾವಣೆ ಆಯೋಗ ಗಣತಂತ್ರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಾರ್ವತ್ರಿಕ ಚುನಾವಣೆಯನ್ನು ಘೋಷಣೆ ಮಾಡಿದೆ. ಮಾರ್ಚ್‌ 5ರಂದು ಮತದಾನ ನಡೆಯಲಿದ್ದು ಮುಂದಿನ 24 ಗಂಟೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಚುನಾವಣೆ ಆಯೋಗ ತಿಳಿಸಿದೆ.

ನೇಪಾಳ ಫೆಡರಲ್‌ ಸಂಸತ್ತಿನ ಕೆಳಮನೆಯಾಗಿರುವ ಹೌಸ್‌ ಆಫ್‌ ರೆಪ್ರಸೆಂಟೇಟಿವ್ಸ್‌ಗೆ 275 ಸದಸ್ಯರನ್ನು ಆಯ್ಕೆ ಮಾಡಲು 1.89 ಕೋಟಿ ಮತದಾರರು ಅರ್ಹರಾಗಿದ್ದಾರೆ. ಇಲ್ಲಿನ ರಾಜಕೀಯ ಪಕ್ಷಗಳು ಸಹ ಚುನಾವಣೆ ಎದುರಿಸಲು ಸಜ್ಜುಗೊಂಡಿವೆ.

ನೇಪಾಳದ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಪ್ರಮುಖ ನಾಯಕರ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ...

ನೇಪಾಳಿ ಕಾಂಗ್ರೆಸ್

1. ನೇಪಾಳಿ ಕಾಂಗ್ರೆಸ್

ನೇಪಾಳದ ಅತ್ಯಂತ ಹಳೆಯ ಹಾಗೂ ಪ್ರಭಾವಿ ಪ್ರಜಾಸತ್ತಾತ್ಮಕ ಪಕ್ಷ ನೇಪಾಳಿ ಕಾಂಗ್ರೆಸ್. 1940ರಲ್ಲಿ ಸ್ಥಾಪನೆಯಾದ ಈ ಪಕ್ಷ ರಾಜತಂತ್ರದ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದೆ.

ನೇಪಾಳದ ಮಧ್ಯಮ ವರ್ಗದ ಜನರ ಪರ ಇರುವ ಈ ಪಕ್ಷ ಸ್ಥಳೀಯ ಮಾರುಕಟ್ಟೆ ನೀತಿಗಳನ್ನು ಬೆಂಬಲಿಸುತ್ತದೆ. ಈ ಪಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರಸ್ತಂಭವಾಗಿದೆ.

ನೇಪಾಳಿ ಕಾಂಗ್ರೆಸ್‌ನಲ್ಲಿ ಗಿರಿಜಾ ಪ್ರಸಾದ್ ಕೊಯೀರಾಲ, ಶೇರ್‌ ಬಹದ್ದೂರ ದೆಬ್ಬಾ, ಸುಶೀಲ ಕೊಯೀರಾಲ ಸೇರಿದಂತೆ ಪ್ರಮುಖರು ನೇಪಾಳಿ ಕಾಂಗ್ರೆಸ್‌ ಕಾಂಗ್ರೆಸ್‌ ಬೆಳೆಸಿದ ನಾಯಕರು.ಇವರು ಪ್ರಧಾನ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

ಸೈದ್ಧಾಂತಿಕ ನಿಲುವು: ಪ್ರಜಾಪ್ರಭುತ್ವ ಮತ್ತು ಸಮಾಜವಾದ

2. ಕಮ್ಯೂನಿಷ್ಟ್‌ ಪಾರ್ಟಿ ಆಪ್‌ ನೇಪಾಳ (ಸಿಪಿಎನ್‌-ಯುಎಂಎಲ್)

ಯುಎಂಎಲ್‌ ಎಂದು ಕರೆಯುವ ಸಿಪಿಎನ್‌ ಕೂಡ ನೇಪಾಳದ ಹಳೆಯ ಪಕ್ಷವಾಗಿದೆ. ಎಡಪಂಥೀಯ ಧೋರಣೆ ಹೊಂದಿರುವ ಇದು ನೇಪಾಳದ ಪ್ರಮುಖ ಕಮ್ಯುನಿಸ್ಟ್ ಪಕ್ಷಗಳಲ್ಲಿ ಒಂದಾಗಿದೆ.

ರಾಷ್ಟ್ರೀಯತೆ, ಆರ್ಥಿಕ ಅಭಿವೃದ್ಧಿ ಮತ್ತು ಎಡಪಂಥೀಯ ಧೋರಣೆಗಳ ಬಗ್ಗೆ ಈ ಪಕ್ಷ ಒತ್ತಿ ಹೇಳುತ್ತದೆ. ರಾಜಕೀಯವಾಗಿ ಹಲವು ಸಲ ಯುಎಂಎಲ್‌ ಅಧಿಕಾರಕ್ಕೆ ಬಂದಿದೆ.

ಕೆ.ಪಿ. ಶರ್ಮಾ ಓಲಿ ಹಾಗೂ ಮಾಧವ್‌ ಕುಮಾರ್‌ ಯುಎಂಎಲ್‌ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ. ಇವರು ಪ್ರಧಾನಿಗಳಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಸೈದ್ಧಾಂತಿಕ ನಿಲುವು: ಎಡ ಪಂಥೀಯ ಧೋರಣೆ ಇರುವ ಪಕ್ಷ

ಸಿಪಿಎನ್‌-ಯುಎಂಎಲ್

3. ಕಮ್ಯೂನಿಷ್ಟ್‌ ಪಾರ್ಟಿ ಆಪ್‌ ನೇಪಾಳ (ಮಾವೋವಾದಿ)

ಸಿಪಿಎನ್‌-ಎಂ ಪಕ್ಷ ತೊಂಬತ್ತರ ದಶಕದಲ್ಲಿ ಮಾವೋವಾದಿ ಚಳವಳಿ ಮೂಲಕ ರಾಜಕೀಯ ಪ್ರವೇಶ ಮಾಡಿತು. ಸಮಾಜವಾದಿ ಚಿಂತನೆಗಳ ಮೂಲಕ ರಾಜಕೀಯ ಅಸ್ತಿತ್ವಕಂಡ ಈ ಪಕ್ಷ ಸಾಮಾಜಿಕ ನ್ಯಾಯಾದ ಪರವಾಗಿ ಹೋರಾಟ ಮಾಡುತ್ತಿದೆ.

ಪ್ರಚಂಡ ಎಂದೇ ಪ್ರಸಿದ್ಧರಾಗಿರುವ ಪುಷ್ಪ ಕಮಾಲ್‌ ಹಾಗೂ ಬಾಬು ರಾಂ ಭಟ್ಟರಾಯ್‌ ಸಿಪಿಎನ್‌-ಎಂ ಪಕ್ಷದ ಪ್ರಮುಖ ನಾಯಕರು. ಈಗಾಗಲೇ ಪ್ರಚಂಡ ಅವರು ಪ್ರಧಾನಿಯಾಗಿ ಕೆಲಸ ಮಾಡಿದ್ದಾರೆ. ಭಟ್ಟರಾಯ್‌ ಅವರ ಬೌದ್ಧ ಸಮುದಾಯದ ಪ್ರಮುಖ ಮುಖಂಡರಾಗಿದ್ದಾರೆ.

ಸೈದ್ಧಾಂತಿಕ ನಿಲುವು: ಎಡ ಪಂಥೀಯ ಧೋರಣೆ ಇರುವ ಪಕ್ಷ

4. ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ)

ನೇಪಾಳದಲ್ಲಿ 2022ರಲ್ಲಿ ಸ್ಥಾಪನೆಯಾದ ಆರ್‌ಎಸ್‌ಪಿ ಪಕ್ಷ ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಆರ್‌ಎಸ್‌ಪಿ ಹೊಸ ಛಾಪು ಮೂಡಿಸಿದೆ. ಈ ಪಕ್ಷ ಎಡ ಪಂಥೀಯ ಧೋರಣೆಯನ್ನು ಹೊಂದಿದೆ.

ಹಳೆಯ ರಾಜಕೀಯ ಪಕ್ಷಗಳ ಮೇಲೆ ಜನರಿಗಿದ್ದ ಅಸಮಾಧಾನ, ಭ್ರಷ್ಟಾಚಾರ ಆರೋಪಗಳು ಯುವಜನರು ಆರ್‌ಎಸ್‌ಪಿ ಕೈಹಿಡಿಯಲು ಕಾರಣ ಎಂದು ಹೇಳಲಾಗುತ್ತಿದೆ.

ರಾಬಿ ಲಮಿಚ್ಛಾನೆ, ಪ್ರಸಾದ್‌ ಆರ್ಯಲ್‌, ಶಿಶಿರ್ ಖಾನಲ್‌ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ. ರಾಬಿ ಲಮಿಚ್ಛಾನೆ ಪಕ್ಷದ ಸ್ಥಾ‍ಪಕರಾಗಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ರಾಬಿ ಪತ್ರಕರ್ತರಾಗಿದ್ದರು.

2022ರಲ್ಲಿ ಉಪಪ್ರಧಾನಿ ಹಾಗೂ ಗೃಹ ಸಚಿವರಾಗಿ ರಾಬಿ ಸೇವೆ ಸಲ್ಲಿಸಿದ್ದರು. ನಂತರ ರಾಜಕೀಯ ಕಾರಣಗಳಿಂದ ರಾಜೀನಾಮೆ ನೀಡಿದ್ದರು.

ಸೈದ್ಧಾಂತಿಕ ನಿಲುವು: ಸಮಾಜವಾದಿ ಧೋರಣೆ ಇರುವ ಪಕ್ಷ

ಆರ್‌ಎಸ್‌ಪಿ

5. ರಾಷ್ಟ್ರೀಯ ಪ್ರಜಾತಂತ್ರ ಪಕ್ಷ (ಆರ್‌ಪಿಪಿ)

ನೇಪಾಳದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ. ಆದಾಗ್ಯೂ ಆರ್‌ಪಿಪಿ ಪಕ್ಷವು ಸಂವಿಧಾನಾತ್ಮಕ ರಾಜತಂತ್ರ ವ್ಯವಸ್ಥೆಯನ್ನು ಪುನರ್‌ ಸ್ಥಾಪಿಸುವ ಆಶಯವನ್ನು ಹೊಂದಿದೆ. ರಾಜತಂತ್ರ ವ್ಯವಸ್ಥೆಯನ್ನು ರದ್ದುಪಡಿಸಿದ ನಂತರವೂ ಈ ಪಕ್ಷವು ತನ್ನ ವೈಚಾರಿಕ ಧೋರಣೆಯನ್ನು ಮುಂದುವರಿಸಿದೆ.

ಕಮಲ್‌ ಥಾಪ ಹಾಗೂ ರಾಜೇಂದ್ರನ್‌ ಲಿಂಗ್ಡೆ ಈ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ. ಇಲ್ಲಿಯವರೆಗೂ ಈ ಪಕ್ಷ ಆಡಳಿತಕ್ಕೆ ಬಂದಿಲ್ಲ.

ಸೈದ್ಧಾಂತಿಕ ನಿಲುವು: ಹಿಂದುತ್ವ ಹಾಗೂ ಬಲ ಪಂಥೀಯ ಧೋರಣೆ ಇರುವ ಪಕ್ಷ

ನೇಪಾಳದ ರಾಜಕೀಯ ವ್ಯವಸ್ಥೆ ಬಹುಪಕ್ಷೀಯವಾಗಿದೆ. ಖ್ಯಾತ ಹೋರಾಟಗಾರ ಪೃಥ್ವಿ ನಾರಾಯಣ ಶಾ ಸ್ಥಾಪಿಸಿದ ಏಕೀಕೃತ ರಾಜ್ಯ ಈಗ ಪ್ರಜಾಪ್ರಭುತ್ವ ದೇಶವಾಗಿ ರೂಪಾಂತರಗೊಂಡಿದೆ. ರಾಜತಂತ್ರದಿಂದ ಗಣರಾಜ್ಯಕ್ಕೆ ಬದಲಾದ ನಂತರ ರಾಜಕೀಯ ಪಕ್ಷಗಳ ಆಡಳಿತ, ಸಂವಿಧಾನ ರಚನೆ ಮತ್ತು ಶಾಂತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗಳಾಗಿವೆ.

ಆದಾಗ್ಯೂ, ಸರ್ಕಾರಗಳ ಅಸ್ಥಿರತೆ, ಪಕ್ಷಗಳ ನಡುವಿನ ಮೈತ್ರಿ ರಾಜಕೀಯ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳು ಇನ್ನೂ ಸವಾಲಾಗಿವೆ. ಭವಿಷ್ಯದಲ್ಲಿ ರಾಜಕೀಯ ಸ್ಥಿರತೆ, ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸಮಾನತೆ ಸಾಧಿಸುವುದು ನೇಪಾಳದ ಪ್ರಮುಖ ಗುರಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries