HEALTH TIPS

ಆಗ್ರಾ ವಾಯುಪಡೆ ನಿಲ್ದಾಣದೊಳಗೆ ಪಾಕಿಸ್ತಾನ ಬಲೂನ್ ಪತ್ತೆ

ಆಗ್ರಾ: ಪಾಕಿಸ್ತಾನ ಅಂತರರಾಷ್ಟ್ರೀಯ ವಿಮಾನಯಾನ (Pakistan International Airlines) ಸಂಸ್ಥೆ ಹೆಸರಿರುವ ಬಲೂನ್ (PIA Balloon) ಆಗ್ರಾದ (Agra) ವಾಯುಪಡೆ ನಿಲ್ದಾಣದ (Air Force Station) ತಾಂತ್ರಿಕ ಪ್ರದೇಶದೊಳಗೆ ಪತ್ತೆಯಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.

ಪ್ರಾಥಮಿಕ ತನಿಖೆಯಲ್ಲಿ ಇದರಲ್ಲಿ ಯಾವುದೇ ಸಾಧನ ಅಥವಾ ವಿಷಕಾರಿ ವಸ್ತು ಪತ್ತೆಯಾಗಿಲ್ಲ. ಆದರೂ ಇದು ಇಲ್ಲಿಗೆ ಹೇಗೆ ಮತ್ತು ಯಾಕೆ ಬಂತು ಎನ್ನುವ ಕುರಿತು ತೀವ್ರ ತನಿಖೆಯನ್ನು ನಡೆಸಲಾಗುತ್ತಿದೆ. ಇದೇ ರೀತಿಯ ಹಲವು ಘಟನೆಗಳು ಗಡಿ ನಿಯಂತ್ರಣ ರೇಖೆಯ ಬಳಿ ಕಳೆದ ಕೆಲವು ತಿಂಗಳಿನಿಂದ ಹಲವು ಬಾರಿ ನಡೆದಿದ್ದು, ಇದನ್ನು ಭಾರತೀಯ ಸೇನೆಯು (Indian army) ಗಂಭೀರವಾಗಿ ಪರಿಗಣಿಸಿದೆ.

ಆಗ್ರಾದ ವಾಯುಪಡೆ ನಿಲ್ದಾಣದ ತಾಂತ್ರಿಕ ಪ್ರದೇಶದೊಳಗೆ ಫೆಬ್ರವರಿ 12ರಂದು ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಹೆಸರಿರುವ ಬಲೂನ್ ಪತ್ತೆಯಾಗಿತ್ತು. ಈ ಕುರಿತು ರಕ್ಷಣಾ ಇಲಾಖೆ ಹಲವು ದೃಷ್ಟಿಕೋನಗಳಿಂದ ತನಿಖೆಯನ್ನು ಪ್ರಾರಂಭಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ವಿಮಾನ ಆಕಾರದ ಬಲೂನ್ ವಾಯುನೆಲೆಯ ನಿರ್ಬಂಧಿತ ತಾಂತ್ರಿಕ ವಲಯದಲ್ಲಿ ಫೆಬ್ರವರಿ 12ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಪತ್ತೆಯಾಗಿದೆ. ಬಲೂನ್ ಹಸಿರು ಮತ್ತು ಬಿಳಿ ಬಣ್ಣದ್ದಾಗಿದ್ದು ಉರ್ದು ಭಾಷೆಯಲ್ಲಿ ಕೆಲವು ಬರಹಗಳನ್ನು ಹೊಂದಿದೆ. ಅದನ್ನು ವಶಪಡಿಸಿಕೊಂಡು ಶಹಗಂಜ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು. ವಾಯುಪಡೆಯ ದೂರಿನ ಮೇರೆಗೆ ಅಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯ ಕುರಿತು ಪೊಲೀಸರು, ಗುಪ್ತಚರ ಸಂಸ್ಥೆಗಳು ಮತ್ತು ಭಾರತೀಯ ವಾಯುಪಡೆಯು ತನಿಖೆ ನಡೆಸುತ್ತಿದೆ. ಬಲೂನ್ ಹೇಗೆ ಹೈ-ಸೆಕ್ಯುರಿಟಿ ತಾಂತ್ರಿಕ ವಲಯವನ್ನು ಪ್ರವೇಶಿಸಿತು ಎಂಬುದನ್ನು ನಿರ್ಧರಿಸಲು ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಬಲೂನ್ ದೊಡ್ಡದಾಗಿದ್ದು ಸುಮಾರು 10 ಮೀಟರ್ ಉದ್ದದ ದಾರವನ್ನು ಇದಕ್ಕೆ ಜೋಡಿಸಲಾಗಿದೆ. ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಹೆಸರು ಮತ್ತು ಲೋಗೋ ಇರುವುದು ಭದ್ರತಾ ಕಳವಳವನ್ನು ಹೆಚ್ಚಿಸಿದೆ ಎಂದು ಅವರು ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಗೌರವ್ ಸಿಂಗ್ ಮಾತನಾಡಿ, ಬಲೂನ್ ಒಳಗೆ ಯಾವುದೇ ತಾಂತ್ರಿಕ ಸಾಧನ ಅಥವಾ ವಿಷಕಾರಿ ಅನಿಲ ಪತ್ತೆಯಾಗಿಲ್ಲ. ತನಿಖೆ ಮುಂದುವರಿಸಲಾಗಿದೆ ಎಂದು ಹೇಳಿದರು.

ಈ ಹಿಂದೆಯೂ ಗಡಿ ಪ್ರದೇಶಗಳಲ್ಲಿ ಇದೇ ರೀತಿಯ ಬಲೂನ್‌ಗಳು ಪತ್ತೆಯಾಗಿತ್ತು. ಇತ್ತೀಚೆಗೆ ರಾಜಸ್ಥಾನದ ಬಿಕಾನೇರ್‌ನಲ್ಲಿ ಇದೇ ರೀತಿಯ ಬಲೂನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. 2025ರ ಜೂನ್ ನಲ್ಲಿ ಪಿಐಎ ಲೋಗೋವನ್ನು ಹೊಂದಿರುವ ಮತ್ತೊಂದು ಬಲೂನ್ ಶ್ರೀ ಗಂಗಾನಗರದಲ್ಲಿ ಕಂಡು ಬಂದಿತ್ತು. ಆಗಸ್ಟ್ ನಲ್ಲಿ ಜಮ್ಮುವಿನ ನೈ ಬಸ್ತಿ ಪ್ರದೇಶದಲ್ಲಿ ಕಂಡು ಬಂದಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries