HEALTH TIPS

ಗ್ರ್ಯಾಮಿ ನಿರೂಪಕನ ವಿರುದ್ಧ ಕಾನೂನು ಕ್ರಮ: ಟ್ರಂ‍ಪ್‌

ವಾಷಿಂಗ್ಟನ್‌: 68ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದ ನಿರೂಪಕ ಟ್ರಿವರ್‌ ನೋಹ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

'ನಾನು ಬಿಲ್‌ ಕ್ಲಿಂಟನ್‌ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ನಾನು ಎಂದಿಗೂ ಎಪ್‌ಸ್ಟೀನ್‌ ದ್ವೀಪಕ್ಕೆ ಹೋಗಿಲ್ಲ.

ನೋಹ್‌ ಹೇಳಿಕೆಯು ಸುಳ್ಳು ಮತ್ತು ಮಾನಹಾನಿಕರ. ಅವರ ವಿರುದ್ಧ ದೂರು ದಾಖಲಿಸಲಾಗುವುದು' ಎಂದು ಟ್ರಂಪ್‌ ಅವರು ಸಾಮಾಜಿಕ ಮಾಧ್ಯಮ ಟ್ರೂಥ್‌ನಲ್ಲಿ ಸೋಮವಾರ ತಿಳಿಸಿದ್ದಾರೆ.

'ಈ ಬಡ, ಕರುಣಾಜನಕ, ಪ್ರತಿಭೆಯಿಲ್ಲದ, ಮಾದಕ ವ್ಯಸನಿಯ ವಿರುದ್ಧ ಮೊಕದ್ದಮೆ ಹೂಡಲು ನಾನು ನನ್ನ ವಕೀಲರನ್ನು ಕಳುಹಿಸುತ್ತೇನೆ. ಸಿದ್ಧರಾಗಿ ನೋಹ್, ನಾನು ನಿಮ್ಮೊಂದಿಗೆ ಸ್ವಲ್ಪ ಮೋಜು ಮಾಡುತ್ತೇನೆ!' ಎಂದು ಹೇಳಿದ್ದಾರೆ.

ಟ್ರಂಪ್‌ ಅವರು ನೋಹ್‌ ಅವರನ್ನು ಟೀಕಿಸುವ ಮೊದಲು, 'ಗ್ರ್ಯಾಮಿ ಪ್ರಶಸ್ತಿಗಳು ಅತ್ಯಂತ ಕೆಟ್ಟವು. ವೀಕ್ಷಿಸಲು ಅರ್ಹವಾದವಲ್ಲ' ಎಂದು ಹೇಳಿದ್ದರು.

'ವೈಲ್ಡ್‌ಫ್ಲವರ್‌' ಹಾಡಿಗಾಗಿ 'ಸಾಂಗ್‌ ಆಫ್‌ ದಿ ಇಯರ್‌' ಗ್ರ್ಯಾಮಿ ಪ್ರಶಸ್ತಿ ಗೆದ್ದ ಬಿಲ್ಲಿ ಐಲಿಶ್‌ ಅವರನ್ನು ಅಭಿನಂದಿಸಿದ ನಂತರ ಮಾತನಾಡಿದ್ದ ನೋಹ್‌, 'ವಾವ್‌. ಟ್ರಂಪ್‌ ಗ್ರೀನ್‌ಲ್ಯಾಂಡ್ ಅನ್ನು ಬಯಸುವಂತೆ ಪ್ರತಿಯೊಬ್ಬ ಕಲಾವಿದ ಬಯಸುವ ಪ್ರಶಸ್ತಿ ಎಂದರೆ ಅದು ಗ್ಯಾಮಿ' ಎಂದು ಹಾಸ್ಯಮಯವಾಗಿ ಹೇಳಿದ್ದರು.

ಮಾತು ಮುಂದುವರಿಸಿದ್ದ ಅವರು, 'ಇದು ಸಮಂಜಸವಾಗಿದೆ. ಏಕೆಂದರೆ, ಎಪ್‌ಸ್ಟೀನ್‌ ಹೋದಾಗಿನಿಂದ ಬಿಲ್‌ ಕ್ಲಿಂಟನ್‌ ಜೊತೆ ಕಾಲ ಕಳೆಯಲು ಅವನಿಗೆ ಹೊಸ ದ್ವೀಪದ ಅಗತ್ಯವಿದೆ' ಎಂದಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries