ಕಾಸರಗೋಡು: ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯು ತಲಶ್ಶೇರಿ ಎನ್‍ಟಿಟಿಎಫ್ ಸಹಯೋಗದೊಂದಿಗೆ ಜಿಲ್ಲಾ ಪಂಚಾಯಿತಿ ಕೌಶಲ್ಯ ಅಭಿವೃದ್ಧಿ ಯೋಜನೆಯನ್ವಯ ಜಾರಿಗೊಳಿಸುತ್ತಿರುವ ಉಚಿತ ಕೌಶಲ್ಯ ತರಬೇತಿ ಕೋರ್ಸ್‍ಗೆ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಪರಿಶಿಷ್ಟ ಜಾತಿ ವಿಭಾಗದಲ್ಲಿ ಎಸ್ಸೆಸೆಲ್ಸಿ ಉತ್ತೀರ್ಣರಾದ 18 ರಿಂದ 24 ವರ್ಷದೊಳಗಿನ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆಯು ಫೆಬ್ರವರಿ 9ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯಲ್ಲಿ ನಡೆಯಲಿದೆ.
ಹತ್ತು ತಿಂಗಳ ವೃತ್ತಿಪರ ಸಾಂಪ್ರದಾಯಿಕ ಮತ್ತು ಸಿಎನ್‍ಸಿ ಮೆಷಿನಿಸ್ಟ್ ಕೋರ್ಸ್‍ಗೆ ಪ್ರವೇಶವಿದೆ. ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ಪ್ರವೇಶ ಪಡೆಯುವವರಿಗೆ ಹಾಸ್ಟೆಲ್ ಸೇರಿದಂತೆ ಎಲ್ಲಾ ಶುಲ್ಕಗಳು ಉಚಿತವಾಗಿರಲಿದೆ. ಈ ಕೋರ್ಸ್ ಪೂರ್ಣಗೊಳಿಸಿದವರಿಗೆ ಪ್ರಮುಖ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯಲು ಸಹಾಯ ನೀಡಲಾಗುವುದು. ಆಸಕ್ತರು ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿ ಅಥವಾ ತಲಶ್ಶೇರಿ ಎನ್‍ಟಿಟಿಎಫ್ ಕೇಂದ್ರವನ್ನು ಸಂಪರ್ಕಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ(9846514781, 8130972588)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

