HEALTH TIPS

ಅದಾನಿ ಕಂಪನಿಯಿಂದ ಹೊರಬಂದ ನಾರ್ವೆ ಬ್ಯಾಂಕ್

ನವದೆಹಲಿ (PTI): ₹109 ಲಕ್ಷ ಕೋಟಿ (1.2 ಟ್ರಿಲಿಯಲ್‌ ಡಾಲರ್‌) ಸಂಪತ್ತು ನಿಧಿ ಹೊಂದಿರುವ ನಾರ್ವೆಯ ಸಾವರಿನ್‌ ವೆಲ್ತ್‌ ಫಂಡ್ ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ನಿಂದ (ಎಜಿಇಎಲ್‌) ಬಂಡವಾಳ ಹೂಡಿಕೆ ವಾಪಸ್ ಪಡೆಯಲು ನಿರ್ಧರಿಸಿದೆ. ಆರ್ಥಿಕ ಅಪರಾಧಗಳ ನಂಟಿನ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಸಂಸ್ಥೆ ತಿಳಿಸಿದೆ.

2024ರಲ್ಲಿ ಗೌತಮ್‌ ಅದಾನಿ ಒಡೆತನದ ಅದಾನಿ ಪೋರ್ಟ್ಸ್ ಆಯಂಡ್ ಸ್ಪೆಷಲ್ ಎಕನಾಮಿಕ್ ಜೋನ್‌ ಲಿಮಿಟೆಡ್‌ನಿಂದ ನಾರ್ವೆ ಬ್ಯಾಂಕ್‌ ಬಂಡವಾಳ ವಾಪಸ್ ಪಡೆದಿತ್ತು. ಇದೀಗ ಭ್ರಷ್ಟಾಚಾರ ಮತ್ತು ಗಂಭೀರ ಆರ್ಥಿಕ ಅಪರಾಧಗಳ ಕಾರಣದಿಂದಾಗಿ ಎಜಿಇಎಲ್‌ನಿಂದ ಹೊರ ಬಂದಿರುವುದಾಗಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

2020ರಲ್ಲಿ ನೋರ್ಜೆಸ್ ಬ್ಯಾಂಕ್‌ ಹೂಡಿಕೆ ಮಾಡಿದಾಗ ಎಜಿಎಲ್‌ ಷೇರಿನ ಮುಖಬೆಲೆ ₹341ನಷ್ಟಿತ್ತು. ಸದ್ಯ ಷೇರಿನ ಮೌಲ್ಯ ₹944ಕ್ಕೆ ತಲುಪಿದೆ.

ನಾರ್ವೆ ಸಾವರಿನ್‌ ಸಂಸ್ಥೆಯ ಈ ನಿರ್ಧಾರದ ಬಗ್ಗೆ ಅದಾನಿ ಕಂಪನಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಉದ್ಯಮದ ಮೂಲಗಳು ಸಾವರಿನ್ ಫಂಡ್ ಸಂಸ್ಥೆಯು ನವೀಕರಿಸಬಹುದಾದ ಇಂಧನ ಕಂಪನಿ ಬಗ್ಗೆ ಸಲ್ಲದ ಅಪಪ್ರಚಾರ ಮಾಡುತ್ತಿದೆ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries