HEALTH TIPS

ಸೌದಿ ಅರೇಬಿಯಾದಿಂದ ತೈಲ ಆಮದು ಹೆಚ್ಚಳ, ರಷ್ಯಾದಿಂದ ಇಳಿಕೆ

ನವದೆಹಲಿ: ಫೆಬ್ರುವರಿ ತಿಂಗಳಿನಲ್ಲಿ ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲ ಆಮದು ಇಳಿಕೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ಸೌದಿ ಅರೇಬಿಯಾದಿಂದ ಆಮದು ಹೆಚ್ಚಳವಾಗಿದೆ.

ಪ್ರಸಕ್ತ ವರ್ಷದ ಫೆಬ್ರುವರಿ 1ರಿಂದ 18ರವರೆಗೆ ದೇಶಕ್ಕೆ ಪ್ರತಿ ದಿನ ಸರಾಸರಿ 48.5 ಲಕ್ಷ ಬ್ಯಾರಲ್‌ನಷ್ಟು ಕಚ್ಚಾ ತೈಲ ಆಮದಾಗಿದೆ.

ಜನವರಿಯಲ್ಲಿ ಕಚ್ಚಾ ತೈಲ ಆಮದು ಪ್ರತಿದಿನ 52.5 ಲಕ್ಷ ಬ್ಯಾರಲ್‌ನಷ್ಟಿತ್ತು. ಇದಕ್ಕೆ ಹೋಲಿಸಿದರೆ ಫೆಬ್ರುವರಿಯಲ್ಲಿ ಕಚ್ಚಾ ತೈಲದ ಆಮದು ಶೇ 8ರಷ್ಟು ಇಳಿಕೆ ಆಗಿದೆ.

ಕಚ್ಚಾ ತೈಲ ಉತ್ಪನ್ನ ಮಾಡುವ ರಷ್ಯಾದ ಪ್ರಮುಖ ತೈಲ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಇದರಿಂದಾಗಿ ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲ ಆಮದು ಪ್ರಮಾಣವು ಕಡಿಮೆ ಆಗಿದೆ. ಆದರೆ, ಇದೇ ಅವಧಿಯಲ್ಲಿ ಸೌದಿ ಅರೇಬಿಯಾದಿಂದ ಆಮದು ಹೆಚ್ಚಳವಾಗಿದೆ.

2025ರ ಡಿಸೆಂಬರ್‌ನಲ್ಲಿ ರಷ್ಯಾದಿಂದ ಭಾರತಕ್ಕೆ ಪ್ರತಿದಿನ 12.8 ಲಕ್ಷ ಬ್ಯಾರಲ್‌ ಕಚ್ಚಾ ತೈಲ ಆಮದಾಗಿತ್ತು. ಇದು ಜನವರಿಯಲ್ಲಿ 12.2 ಲಕ್ಷ ಮತ್ತು ಫೆಬ್ರುವರಿ ಆರಂಭದಲ್ಲಿ ಅಂದಾಜು 10.9 ಲಕ್ಷ ಬ್ಯಾರಲ್‌ಗೆ ಇಳಿದಿದ್ದು, ಶೇ 10ರಷ್ಟು ಕಡಿಮೆ ಆಗಿದೆ ಎಂದು ಜಾಗತಿಕ ವ್ಯಾಪಾರ ವಿಶ್ಲೇಷಕ ಸಂಸ್ಥೆ ಕೆಫ್ಲೆರ್‌ ತಿಳಿಸಿದೆ.

'ಫೆಬ್ರುವರಿಯಲ್ಲಿ ಭಾರತವು ರಷ್ಯಾದಿಂದ ಆಮದು ಮಾಡಿಕೊಂಡಿರುವ ಕಚ್ಚಾ ತೈಲ ದಿನವೊಂದಕ್ಕೆ ಅಂದಾಜು 10 ಲಕ್ಷದಿಂದ 12 ಲಕ್ಷ ಬ್ಯಾರಲ್‌ನಷ್ಟು ಇರಬಹುದು. ಇದು ಮಾರ್ಚ್‌ ವೇಳೆಗೆ 8 ಲಕ್ಷದಿಂದ 10 ಲಕ್ಷ ಬ್ಯಾರಲ್‌ಗೆ ಇಳಿಕೆ ಆಗಬಹುದು' ಎಂದು ಕೆಫ್ಲೆರ್‌ನ ಸಂಶೋಧನಾ ವಿಶ್ಲೇಷಕ (ಸಂಸ್ಕರಣೆ ಮತ್ತು ಮಾಡೆಲಿಂಗ್) ಸುಮಿತ್ ರಿಟೋಲಿಯಾ ಹೇಳಿದ್ದಾರೆ.

ರಷ್ಯಾದಿಂದ ಕಚ್ಚಾ ತೈಲ ಆಮದು ಪ್ರಮಾಣ ಇಳಿಕೆ ಆಗಿದ್ದರೆ, ಸೌದಿ ಅರೇಬಿಯಾದಿಂದ ಕಚ್ಚಾ ತೈಲ ಆಮದು ಫೆಬ್ರುವರಿಯಲ್ಲಿ ಪ್ರತಿದಿನ 10 ಲಕ್ಷದಿಂದ 11 ಲಕ್ಷ ಬ್ಯಾರಲ್‌ಗೆ ಹೆಚ್ಚಳವಾಗಿದೆ. ಮಾರ್ಚ್‌ನಲ್ಲಿ ಆಮದು 14 ಲಕ್ಷ ಬ್ಯಾರಲ್‌ಗೆ ತಲುಪಲಿದೆ ಎಂದು ತಿಳಿಸಿದ್ದಾರೆ.

ಈ ಅಂಕಿ ಅಂಶಗಳನ್ನು ಗಮನಿಸಿದಾಗ ಸೌದಿ ಅರೇಬಿಯಾ ಫೆಬ್ರುವರಿ ತಿಂಗಳಲ್ಲಿ ಇದುವರೆಗೆ ದೇಶದ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರನಾಗಿ ಹೊರಹೊಮ್ಮಿದೆ. ನಂತರದ ಸ್ಥಾನದಲ್ಲಿ ರಷ್ಯಾ ಮತ್ತು ಇರಾಕ್‌ ಇವೆ ಎಂದು ಹೇಳಿದ್ದಾರೆ.

ಭಾರತವು ರಷ್ಯಾದ ಕಚ್ಚಾ ತೈಲ ಆಮದನ್ನು ಕಡಿಮೆ ಮಾಡುವುದರಿಂದ, ಒಟ್ಟಾರೆ ಕಚ್ಚಾ ತೈಲದ ಮೇಲಿನ ವೆಚ್ಚವು ಬ್ಯಾರಲ್‌ಗೆ 2-3 ಡಾಲರ್‌ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ, ವೆನೆಜುವೆಲಾದ ಅಗ್ಗದ ಕಚ್ಚಾ ತೈಲ ಖರೀದಿಯು ಇದನ್ನು ಭಾಗಶಃ ಸರಿದೂಗಿಸಬಹುದು ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries