HEALTH TIPS

Gen Z ದಂಗೆಯ ಬಳಿಕದ ಮೊದಲ ಚುನಾವಣೆ: ಬಾಂಗ್ಲಾದೇಶದಲ್ಲಿ ಬಿಎನ್‌ಪಿ ಗೆ ಭರ್ಜರಿ ಬಹುಮತ

ಢಾಕಾ: 2024ರಲ್ಲಿ ನಡೆದ Gen Z ನೇತೃತ್ವದ ದಂಗೆಯ ಬಳಿಕ ಮೊದಲ ಬಾರಿಗೆ ನಡೆದ ಬಾಂಗ್ಲಾದೇಶ ಸಂಸತ್ ಚುನಾವಣೆಯಲ್ಲಿ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಭರ್ಜರಿ ಬಹುಮತ ಸಾಧಿಸಿದೆ . ದಕ್ಷಿಣ ಏಷ್ಯಾದ ರಾಷ್ಟ್ರದಲ್ಲಿ ರಾಜಕೀಯ ಸ್ಥಿರತೆ ಮರುಸ್ಥಾಪನೆಗೆ ಮಹತ್ವದ್ದಾಗಿ ಪರಿಗಣಿಸಲಾದ ಈ ಮತದಾನದಲ್ಲಿ ಬಿಎನ್ಪಿ ಸ್ಪಷ್ಟ ಜನಾದೇಶ ಪಡೆದಿದೆ.

ಗುರುವಾರ ನಡೆದ ಈ ಸಂಸತ್ ಚುನಾವಣೆ, ದೀರ್ಘಕಾಲ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ 2024ರ ಯುವಜನರ ದಂಗೆಯ ನಂತರ ನಡೆದ ಮೊದಲ ರಾಷ್ಟ್ರೀಯ ಚುನಾವಣೆಯಾಗಿದೆ. ಹಸೀನಾ ವಿರೋಧಿ ಅಶಾಂತಿಯು ಹಲವು ತಿಂಗಳುಗಳ ಕಾಲ ದೇಶದ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ವಿಶ್ವದ ಎರಡನೇ ಅತಿದೊಡ್ಡ ಗಾರ್ಮೆಂಟ್ ರಫ್ತುದಾರ ರಾಷ್ಟ್ರಗಳಲ್ಲಿ ಒಂದಾದ ಬಾಂಗ್ಲಾದೇಶದಲ್ಲಿ ಗಾರ್ಮೆಂಟ್ ವಲಯ ಸೇರಿದಂತೆ ಪ್ರಮುಖ ಕೈಗಾರಿಕೆಗಳ ಮೇಲೂ ಪರಿಣಾಮ ಬೀರಿತ್ತು. 175 ಮಿಲಿಯನ್ ಜನಸಂಖ್ಯೆಯಿರುವ ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಸ್ಥಿರ ಆಡಳಿತ ಮರಳಲು ಈ ಚುನಾವಣೆಯ ಸ್ಪಷ್ಟ ಫಲಿತಾಂಶ ನಿರ್ಣಾಯಕವೆಂದು ರಾಜಕೀಯ ವಲಯ ಅಂದಾಜಿಸಿತ್ತು.

ತಾರಿಕ್ ರೆಹಮಾನ್ ನೇತೃತ್ವದ ಬಿಎನ್ಪಿ ಗುರುವಾರ ನಡೆದ ಮಹತ್ವದ ಚುನಾವಣೆಯಲ್ಲಿ ಬಹುಮತ ಗಳಿಸಿರುವುದಾಗಿ ಘೋಷಿಸಿ, ಮುಂದಿನ ಸರ್ಕಾರವನ್ನು ರಚಿಸುವುದಾಗಿ ತಿಳಿಸಿದೆ. ಜಮುನಾ ಟಿವಿ ವರದಿ ಪ್ರಕಾರ, ಒಟ್ಟು 299 ಕ್ಷೇತ್ರಗಳಲ್ಲಿ ಬಿಎನ್ಪಿ ಹಾಗೂ ಅದರ ಮಿತ್ರಪಕ್ಷಗಳು 211 ಸ್ಥಾನಗಳನ್ನು ಗೆದ್ದಿದ್ದರೆ, ಪ್ರತಿಸ್ಪರ್ಧಿ ಜಮಾತ್-ಇ-ಇಸ್ಲಾಮಿ ಮೈತ್ರಿಕೂಟ 70 ಸ್ಥಾನಗಳನ್ನು ಪಡೆದಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷವು ತನ್ನ ವಿಜಯವನ್ನು ಸಂಭ್ರಮಿಸಿದ್ದು, "ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿಯು ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚಿಸಲು ಸಜ್ಜಾಗಿದೆ" ಎಂದು ಬಿಎನ್ಪಿ ಮಾಧ್ಯಮ ಘಟಕ ತನ್ನ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.

সংখ্যাগরিষ্ঠ আসনে জয়ী হয়ে সরকার গঠন করতে যাচ্ছে বাংলাদেশ জাতীয়তাবাদী দল-বিএনপি। #BNP #BNPMediaCell #KhaledaZia #Zia #TariqueRahman

215
Reply
Copy link

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries