ಈ ಬಾರಿ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಇನ್ನು ತೆರಿಗೆ ವಿಳಂಬಕ್ಕೆ ಇನ್ಮುಂದೆ ಯಾವುದೇ ದಂಡ ಇರುವುದಿಲ್ಲ, ಶಿಕ್ಷೆ ಮಾತ್ರ ಇರಲಿದೆ ಎಂದು ಹೇಳಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಫೆಬ್ರವರಿ 1, 2026 ರಂದು ಮಂಡಿಸಲಾದ ಕೇಂದ್ರ ಬಜೆಟ್ 2026 ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ರ ಹಣಕಾಸು ವರ್ಷಕ್ಕೆ (ಮೌಲ್ಯಮಾಪನ ವರ್ಷ 2027-28) ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಹೊಸ ಬದಲಾವಣೆಯನ್ನೂ ಸಹ ಘೋಷಿಸಲಿಲ್ಲ. ತೆರಿಗೆ ರಚನೆಯು ಬಹುತೇಕ ಹಿಂದಿನ ಬಜೆಟ್ ಮಾದರಿಯಲ್ಲಿಯೇ ಮುಂದುವರಿಯಲಿವೆ. ಆದರೆ ಕೆಲವೊಂದು ವಿನಾಯಿತಿಗಳನ್ನು ಈ ಬಾರಿ ನೀಡಲಾಗಿದೆ.
ಹಳೆಯ ತೆರಿಗೆ ಪದ್ಧತಿಗೆ ಆದಾಯ ತೆರಿಗೆ ಸ್ಲ್ಯಾಬ್‌ಗಳ ವಿವರ
| ವಾರ್ಷಿಕ ಆದಾಯ (ರೂ.) | ತೆರಿಗೆ ದರ (%) |
|---|---|
| 4 ಲಕ್ಷ ರೂ. ವರೆಗೆ | 0% |
| 4 ಲಕ್ಷ ರೂ. ರಿಂದ 8 ಲಕ್ಷ ರೂ. | 5% |
| 8 ಲಕ್ಷ ರೂ. ರಿಂದ 12 ಲಕ್ಷ ರೂ. | 10% |
| 12 ಲಕ್ಷ ರೂ. ರಿಂದ 16 ಲಕ್ಷ ರೂ. | 15% |
| 16 ಲಕ್ಷ ರೂ. ರಿಂದ 20 ಲಕ್ಷ ರೂ. | 20% |
| 20 ಲಕ್ಷ ರೂ. ರಿಂದ 24 ಲಕ್ಷ ರೂ. | 25% |
| 24 ಲಕ್ಷ ರೂ.ಗಿಂತ ಹೆಚ್ಚು | 30% |
ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ ತೆರಿಗೆ ಸ್ಲ್ಯಾಬ್‌ಗಳ ವಿವರ
| ವಾರ್ಷಿಕ ಆದಾಯ (ರೂ.) | ತೆರಿಗೆ ದರ (%) |
|---|---|
| 2,50,000 ರೂ. ವರೆಗೆ | 0% |
| 2,50,001 ರೂ. ರಿಂದ 5,00,000 ರೂ. | 5% |
| 5,00,001 ರೂ. ರಿಂದ 10,00,000 ರೂ. | 20% |
| 10,00,000 ರೂ.ಗಿಂತ ಹೆಚ್ಚು | 30% |
2025 - 2026ನೇ ಸಾಲಿನಲ್ಲಿ ಆದಾಯ ತೆರಿಗೆ ವ್ಯವಸ್ಥೆ ಹೇಗಿತ್ತು?
ಅಲ್ಪಾವಧಿಯ ಬಂಡವಾಳ ಲಾಭ (STCG) ತೆರಿಗೆ
ಕಳೆದ ಆರ್ಥಿಕ ವರ್ಷದಲ್ಲಿ ಪಟ್ಟಿ ಮಾಡಲಾದ ಈಕ್ವಿಟಿ ಷೇರುಗಳು ಮತ್ತು ಈಕ್ವಿಟಿ-ಆಧಾರಿತ ಮ್ಯೂಚುವಲ್ ಫಂಡ್‌ಗಳ ಮೇಲಿನ ಅಲ್ಪಾವಧಿಯ ಬಂಡವಾಳ ಲಾಭ (STCG) ತೆರಿಗೆ ದರವನ್ನು 15ರಷ್ಟು ಇದ್ದದ್ದನ್ನು ಶೇ. 20ರಷ್ಟಕ್ಕೆ ಹೆಚ್ಚಿಸಲಾಗಿತ್ತು. ಈ ತೆರಿಗೆ ದರುವ ಒಂದು ವರ್ಷದ (12 ತಿಂಗಳ) ವರೆಗೆ ಹೊಂದಿರುವ ಸ್ವತ್ತುಗಳ ಮೇಲಿನ ಲಾಭಗಳಿಗೆ ಅನ್ವಯ ಆಗುವಂತೆ ಜಾರಿಗೆ ಮಾಡಲಾಗಿತ್ತು.
ದೀರ್ಘಾವಧಿಯ ಬಂಡವಾಳ ಲಾಭ (LTCG) ತೆರಿಗೆ
2025-26ನೇ ಕಳೆದ ಹಣಕಾಸು ವರ್ಷದಲ್ಲಿ ದೇಶದಲ್ಲಿ ದೀರ್ಘಾವಧಿಯ ಬಂಡವಾಳ ಲಾಭ (LTCG) ತೆರಿಗೆಯನ್ನು ಪಟ್ಟಿ ಮಾಡಲಾದ ಈಕ್ವಿಟಿ ಷೇರುಗಳು, ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳು ಮತ್ತು ರಿಯಲ್ ಎಸ್ಟೇಟ್ ಆಸ್ತಿಗಳ ಮೇಲೆ ಶೇಕಡಾ 12.5ರಷ್ಟು ಏಕರೂಪದ ದರದಲ್ಲಿ ನಿಗದಿಪಡಿಸಲಾಗಿತ್ತು. ಪಟ್ಟಿ ಮಾಡಲಾದ ಈಕ್ವಿಟಿ/ಮ್ಯೂಚುಯಲ್ ಫಂಡ್‌ಗಳಿಗೆ ಪ್ರತಿ ಆರ್ಥಿಕ ವರ್ಷಕ್ಕೆ ರೂ.1.25 ಲಕ್ಷ ವಿನಾಯಿತಿ ಘೋಷಿಸಿತ್ತು. ಈ ನಿರ್ದಿಷ್ಟ ಮೊತ್ತಕ್ಕೂ ಮೀರಿದ ಲಾಭಗಳಿಗೆ ತೆರಿಗೆ ಪಾವತಿ ಕಡ್ಡಾಯವಾಗಿತ್ತು.
2025-26ನೇ ಹಣಕಾಸು ವರ್ಷದಲ್ಲಿ ಕೇಂದ್ರ ಆದಾಯ ತೆರಿಗೆ ಕೆಲವೊಂದು ಬದಲಾವಣೆಗಳು ಆಗಿದ್ದವು. ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಕೇಂದ್ರ ಆದಾಯ ತೆರಿಗೆಯು 12 ಲಕ್ಷದವರೆಗಿನ ನಿವ್ವಳ ತೆರಿಗೆ ವಿಧಿಸಬಹುದಾದ ಆದಾಯಕ್ಕೆ ತೆರಿಗೆ ರಿಯಾಯಿತಿ ನೀಡಲಾಗಿತ್ತು.
2025-26ನೇ ಹಣಕಾಸು ವರ್ಷದ ಆದಾಯ ತೆರಿಗೆಯಲ್ಲೂ ಕೆಲವೊಂದು ವಿನಾಯಿತಿಗಳನ್ನು ನೀಡಲಾಗಿತ್ತು.
ಶೂನ್ಯ ತೆರಿಗೆ ಮಿತಿ: ರಿಯಾಯಿತಿಯಿಂದಾಗಿ 12 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ವಿಧಿಸಿರಲಿಲ್ಲ.
ಪ್ರಮಾಣಿತ ಕಡಿತ: ಸಂಬಳ ಪಡೆಯುವ ವ್ಯಕ್ತಿಗಳಿಗೆ 75,000 ಪ್ರಮಾಣಿತ ಕಡಿತ ಲಭ್ಯವಿದ್ದು, ಸಂಭಾವ್ಯವಾಗಿ 12.75 ಲಕ್ಷದವರೆಗಿನ ಸಂಬಳವನ್ನು ತೆರಿಗೆ ಮುಕ್ತಗೊಳಿಸಲಾಗಿತ್ತು.
ಹೆಚ್ಚುವರಿ ಶುಲ್ಕ: ತೆರಿಗೆ ಮೊತ್ತಕ್ಕೆ 4% ಆರೋಗ್ಯ ಮತ್ತು ಶಿಕ್ಷಣ ಸೆಸ್ ಅನ್ನು ಸೇರಿಸಲಾಗಿತ್ತು.
ಗರಿಷ್ಠ ದರ: 24 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ. 30ರಷ್ಟು ಟ್ಯಾಕ್ಸ್ ಅನ್ವಯವಾಗುತ್ತಿದೆ. ಇದೀಗ 2026 - 2027ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.

