HEALTH TIPS

T20 ವಿಶ್ವಕಪ್ | ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ ಭಾರತ

ಕೊಲಂಬೊ: ಆರಂಭಿಕ ಆಟಗಾರ ಇಶಾನ್ ಕಿಶನ್(77 ರನ್, 40 ಎಸೆತ, 10 ಬೌಂಡರಿ, 3 ಸಿಕ್ಸರ್)ಬಿರುಸಿನ ಬ್ಯಾಟಿಂಗ್ ಹಾಗೂ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಏಕಪಕ್ಷೀಯವಾಗಿ ಸಾಗಿದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ 'ಎ' ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 61 ರನ್ಗಳ ಅಂತರದಿಂದ ಮಣಿಸಿದೆ.

ಪ್ರೇಮದಾಸ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 175 ರನ್ ಗಳಿಸಿತು. ಗೆಲ್ಲಲು 176 ರನ್ ಗುರಿ ಪಡೆದಿದ್ದ ಪಾಕಿಸ್ತಾನ ತಂಡ 18 ಓವರ್ಗಳಲ್ಲಿ 114 ರನ್ ಗಳಿಸಿ ಆಲೌಟಾಗಿದೆ.

ಪಾಕಿಸ್ತಾನದ ಪರ ವಿಕೆಟ್‌ಕೀಪರ್‌ ಉಸ್ಮಾನ್ ಖಾನ್(44 ರನ್, 34 ಎಸೆತ,6 ಬೌಂಡರಿ,1 ಸಿಕ್ಸರ್) ಏಕಾಂಗಿ ಹೋರಾಟ ನೀಡಿದರು. 2ನೇ ಓವರ್‌ನಲ್ಲಿ 13 ರನ್‌ಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ಪಾಕಿಸ್ತಾನ ಮತ್ತೆ ಪುಟಿದೇಳುವಲ್ಲಿ ವಿಫಲವಾಯಿತು. ಶಾಹೀನ್ ಅಫ್ರಿದಿ ಔಟಾಗದೆ 23 ರನ್ ಗಳಿಸಿದರು.

ಭಾರತದ ಪರ ಹಾರ್ದಿಕ್ ಪಾಂಡ್ಯ(2-16), ಜಸ್ಪ್ರಿತ್ ಬುಮ್ರಾ(2-17),ವರುಣ್ ಚಕ್ರವರ್ತಿ(2-17) ಹಾಗೂ ಅಕ್ಷರ್ಪಟೇಲ್(2-29)ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಈ ಮೊದಲು ಇಶಾನ್ ಕಿಶನ್ರೊಂದಿಗೆ ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ(0) ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ಸಲ್ಮಾನ್ ಅಲಿಗೆ ವಿಕೆಟ್ ಒಪ್ಪಿಸಿದರು.

ಆಗ ಜೊತೆಯಾದ ಕಿಶನ್ ಹಾಗೂ ತಿಲಕ್ ವರ್ಮಾ(25 ರನ್, 24 ಎಸೆತ, 2 ಬೌಂಡರಿ,1 ಸಿಕ್ಸರ್)ಎರಡನೇ ವಿಕೆಟ್‌ಗೆ 87 ರನ್ ಸೇರಿಸಿ ತಂಡವನ್ನು ಆರಂಭಿಕ ಕುಸಿತದಿಂದ ಮೇಲೆತ್ತಿದರು.

27 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಾಯದಿಂದ 50 ರನ್ ಪೂರೈಸಿ ಪಾಕಿಸ್ತಾನ ಬೌಲರ್‌ಗಳನ್ನು ದಂಡಿಸಿದ ಕಿಶನ್ ಅವರನ್ನು ಪಾಕಿಸ್ತಾನದ ಯಶಸ್ವಿ ಬೌಲರ್ ಸಯೀಮ್ ಅಯ್ಯೂಬ್(3-25)ಕ್ಲೀಬ್‌ ಬೌಲ್ಡ್‌ ಮಾಡಿದರು.

ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ(0)ಅಯ್ಯೂಬ್ ಬೌಲಿಂಗ್‌ನಲ್ಲಿ ಸತತ ಎಸೆತಗಳಲ್ಲಿ ಔಟಾದರು.

ನಾಯಕ ಸೂರ್ಯಕುಮಾರ್ 29 ಎಸೆತಗಳಲ್ಲಿ 3 ಬೌಂಡರಿಗಳ ಸಹಿತ 32 ರನ್ ಗಳಿಸಿದರು. ಶಿವಂ ದುಬೆ ಅವರೊಂದಿಗೆ ಐದನೇ ವಿಕೆಟ್‌ಗೆ 33 ರನ್ ಸೇರಿಸಿ ತಂಡದ ಮೊತ್ತವನ್ನು 159ಕ್ಕೆ ತಲುಪಿಸಿದರು.

ಸೂರ್ಯಕುಮಾರ್‌ 19ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ 20ನೇ ಓವರ್‌ನಲ್ಲಿ ಕೊನೆಯ ಎರಡು ಎಸೆತಗಳಲ್ಲಿ ವಿಕೆಟ್ ಕೈಚೆಲ್ಲಿದರು. ಶಿವಂ ದುಬೆ ರನೌಟಾದರು. ಪಟೇಲ್ ಮೊದಲ ಎಸೆತದಲ್ಲಿ ಔಟಾದರು.

ರಿಂಕು ಸಿಂಗ್(ಔಟಾಗದೆ 11, 1 ಬೌಂಡರಿ, 1 ಸಿಕ್ಸರ್)ಭಾರತ ತಂಡವು ಸ್ಪರ್ಧಾತ್ಮಕ ಸ್ಕೋರ್ ಗಳಿಸುವಲ್ಲಿ ನೆರವಾದರು.

ಪಾಕಿಸ್ತಾನದ ಬೌಲಿಂಗ್ ವಿಭಾಗದಲ್ಲಿ ಅಯ್ಯೂಬ್ ಯಶಸ್ವಿ ಪ್ರದರ್ಶನ ನೀಡಿದರು. ಸಲ್ಮಾನ್ ಅಲಿ(1-10), ಉಸ್ಮಾನ್ ತಾರೀಕ್(1-24)ಹಾಗೂ ಶಾಹೀನ್ ಅಫ್ರಿದಿ(1-31)ತಲಾ ಒಂದು ವಿಕೆಟ್ಗಳನ್ನು ಉರುಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries