HEALTH TIPS

West Bengal Elections: ಟಿಎಂಸಿ ಸೇರಿದ ಸಿಪಿಎಂ ನಾಯಕ ಪ್ರತೀಕ್ ಉರ್ ರೆಹಮಾನ್

ಕೋಲ್ಕತ್ತ: ಪಕ್ಷಕ್ಕೆ ಈಚೆಗಷ್ಟೇ ರಾಜೀನಾಮೆ ನೀಡಿದ್ದ ಸಿಪಿಎಂ ಹಿರಿಯ ನಾಯಕ ಪ್ರತೀಕ್ ಉರ್ ರೆಹಮಾನ್ ಅವರು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಶನಿವಾರ ಸೇರ್ಪಡೆಯಾದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಡೈಮಂಡ್ ಹಾರ್ಬರ್‌ ಕ್ಷೇತ್ರದಿಂದ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿದ್ದ ಪ್ರತೀಕ್ ಅವರು, ಅಭಿಷೇಕ್ ಸಮ್ಮುಖದಲ್ಲೇ ಟಿಎಂಸಿಗೆ ಸೇರ್ಪಡೆಗೊಂಡರು.

'ಮಾರ್ಕ್ಸ್‌ವಾದಿ ಪಕ್ಷದೊಳಗೆ ಉಸಿರುಗಟ್ಟುವ ವಾತಾವರಣವಿದೆ' ಎಂದು ಟಿಎಂಸಿಗೆ ಸೇರ್ಪಡೆಗೊಂಡ ಬಳಿಕ ಬ್ಯಾನರ್ಜಿ ಅವರ ಅಮ್ತಾಲಾ ಕಚೇರಿಯಲ್ಲಿ ಪ್ರತೀಕ್ ಅವರು ಸುದ್ದಿಗಾರರಿಗೆ ತಿಳಿಸಿದರು.

'ಬಿಜೆಪಿಯ ನಿರಂಕುಶ ಆಡಳಿತದ ವಿರುದ್ಧ ಹೋರಾಟ ನಡೆಸಲು ಬಯಸುತ್ತೇನೆ. ಜನರನ್ನು ವಿಭಜಿಸಲು ಬಯಸುವ ಶಕ್ತಿಗಳ ಸವಾಲು ಎದುರಿಸುವ ಸಾಮರ್ಥ್ಯ ಟಿಎಂಸಿಗೆ ಮಾತ್ರ ಇದೆ ಎಂದು ನಂಬಿದ್ದೇನೆ' ಎಂದು ಸಿಪಿಎಂ ರಾಜ್ಯ ಸಮಿತಿ ಸದಸ್ಯರಾಗಿದ್ದ ರೆಹಮಾನ್ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries