HEALTH TIPS

ʼಗಾಝಾಗೆ 100 ದೋಣಿಗಳ ಮೂಲಕ ನೆರವುʼ: ಗ್ರೇಟಾ ಥನ್‌ಬರ್ಗ್, ಮಾಂಡ್ಲಾ ಮಂಡೇಲಾರಿಂದ ʼಗ್ಲೋಬಲ್ ಸುಮುದ್ ಫ್ಲೋಟಿಲ್ಲಾʼ ಘೋಷಣೆ

ಗಾಝಾ : ಯುದ್ಧದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಗಾಝಾಗೆ ಮಾನವೀಯ ನೆರವು ತಲುಪಿಸಲು ಗ್ರೇಟಾ ಥನ್‌ಬರ್ಗ್, ಮಾಂಡ್ಲಾ ಮಂಡೇಲಾ ಅವರ ನೇತೃತ್ವದಲ್ಲಿ "ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ" ಹೊಸ ಮಹಾ ಕಾರ್ಯಾಚರಣೆಯನ್ನು ಘೋಷಿಸಿದೆ.

ಈ ಕಾರ್ಯಾಚರಣೆಯಲ್ಲಿ ಸಮುದ್ರಮಾರ್ಗದ ಮೂಲಕ 100 ದೋಣಿಗಳನ್ನು ಕಳುಹಿಸುವ ಯೋಜನೆ ರೂಪಿಸಲಾಗಿದೆ.

ಇದರ ಜೊತೆಗೆ ಭೂಮಾರ್ಗದಲ್ಲಿಯೂ ಮಾನವೀಯ ನೆರವು ಕಳುಹಿಸಲು ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಂಘಟನೆ ತಿಳಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿದ ವೀಡಿಯೊದಲ್ಲಿ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ರಾಷ್ಟ್ರಪತಿ ನೆಲ್ಸನ್ ಮಂಡೇಲಾ ಅವರ ಮೊಮ್ಮಗ ಮಾಂಡ್ಲಾ ಮಂಡೇಲಾ ಸೇರಿದಂತೆ ಫ್ಲೋಟಿಲ್ಲಾ ಚಳವಳಿಯಲ್ಲಿ ಭಾಗವಹಿಸಿದ್ದವರು ಕಾರ್ಯಾಚರಣೆಯನ್ನು ಘೋಷಿಸಿದ್ದಾರೆ.

"100 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಗಾಝಾದ ಮೇಲಿನ ಇಸ್ರೇಲ್ ಮುತ್ತಿಗೆಯನ್ನು ಪ್ರಶ್ನಿಸಲು ಒಗ್ಗೂಡಿದ್ದಾರೆ," ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಗಾಝಾದಲ್ಲಿ ಮುಂದುವರಿಯುತ್ತಿರುವ ಮಾನವೀಯ ಸಂಕಷ್ಟದ ನಡುವೆ ಈ ಕಾರ್ಯಾಚರಣೆ ಅಂತರರಾಷ್ಟ್ರೀಯ ಗಮನ ಸೆಳೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries