ಮಲಪ್ಪುರಂ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಲಪ್ಪುರಂ ಜಿಲ್ಲೆಯಲ್ಲಿ ವಿವಿಧ ತಂಡಗಳು ನಡೆಸಿದ ಶೋಧದಲ್ಲಿ ನಗದು, ಮದ್ಯ ಮತ್ತು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
1.365 ಕೋಟಿ ರೂ. ನಗದು ಮತ್ತು 1.916 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣೆ ಘೋಷಣೆಯಾದ ಮಾರ್ಚ್ 15 ರಿಂದ 23 ರವರೆಗಿನ ಅಂಕಿ ಅಂಶವಾಗಿದೆ. ಪೋಲೀಸ್, ಅಬಕಾರಿ, ಆದಾಯ ತೆರಿಗೆ, ಡಿಆರ್‍ಐ ಮತ್ತು ಫ್ಲೈಯಿಂಗ್ ಸ್ಕ್ವಾಡ್ ನಡೆಸಿದ ಶೋಧದಲ್ಲಿ ನೀತಿ ಸಂಹಿತೆಯ ಉಲ್ಲಂಘನೆ ಕಂಡುಬಂದಿದೆ.
ಪೋಲೀಸ್ ತಪಾಸಣೆಯಲ್ಲಿ 11.245 ಲಕ್ಷ ರೂ., ಆರು ಲೀಟರ್ ಮದ್ಯ, 685.50 ಗ್ರಾಂ ಮಾದಕ ದ್ರವ್ಯ, 4383 ಹ್ಯಾನ್ಸ್ ಪ್ಯಾಕೆಟ್‍ಗಳು ಮತ್ತು 30 ಐಫೆÇೀನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 29.5260 ಲಕ್ಷ ರೂ. ಮೌಲ್ಯದ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆದಾಯ ತೆರಿಗೆ ತಪಾಸಣೆಯಲ್ಲಿ 62,64,800 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ತಪಾಸಣೆಯಲ್ಲಿ 62,67,800 ರೂ.ಗಳು, 461.30 ಲೀಟರ್ ಮದ್ಯ ಮತ್ತು 8784.07 ಗ್ರಾಂ ಮಾದಕ ದ್ರವ್ಯಗಳು ಪತ್ತೆಯಾಗಿವೆ. ಎರಡು ಗಾಂಜಾ ಗಿಡಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಒಟ್ಟು 70,87,030 ರೂ. ಮೌಲ್ಯದ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಆರ್‍ಐ ತಪಾಸಣೆಯಲ್ಲಿ 1,65,06,000 ರೂ.ಗಳ ಸಿಗರೇಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. 16 ವಿಧಾನಸಭಾ ಕ್ಷೇತ್ರಗಳು ಮತ್ತು ಗಡಿ ಪ್ರದೇಶಗಳಲ್ಲಿ ಕಣ್ಗಾವಲು ಮತ್ತು ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.

