ದುಬೈ: 'ಕೊಲ್ಲಿ ರಾಷ್ಟ್ರಗಳಿಂದ ಕಚ್ಚಾತೈಲ ಹಾಗೂ ಗ್ಯಾಸ್ ಸಾಗಣೆ ಮತ್ತೆ ಮರುಸ್ಥಾಪನೆಯಾಗಲು ಆರು ತಿಂಗಳು ಬೇಕಾಗಬಹುದು' ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ ಮುಖ್ಯಸ್ಥ ಫತೀಹ್ ಬಿರೋಲ್ ಶುಕ್ರವಾರ ಹೇಳಿದ್ದಾರೆ.
'ಫೈನಾನ್ಸಿಯಲ್ ಟೈಮ್ಸ್'ಗೆ ನೀಡಿದ ಸಂದರ್ಶನದಲ್ಲಿ ಈ ಮಾತು ಹೇಳಿರುವ ಅವರು, 'ಇತಿಹಾಸದಲ್ಲಿಯೇ ಇಡೀ ಜಗತ್ತು ಎದುರಿಸುತ್ತಿರುವ ಅತ್ಯಂತ ಭೀಕರ ಇಂಧನ ಬಿಕ್ಕಟ್ಟು ಇದಾಗಿದೆ' ಎಂದಿದ್ದಾರೆ.
'ರಾಜಕಾರಣಿಗಳು ಹಾಗೂ ಮಾರುಕಟ್ಟೆಯ ತಜ್ಞರು ಈಗ ಉಂಟಾಗಿರುವ ಅಡ್ಡಿಯನ್ನು ಕಡಿಮೆ ಅಂದಾಜು ಮಾಡಿದ್ದರು. ಜಾಗತಿಕವಾಗಿ, ಐದನೇ ಒಂದರಷ್ಟು ಕಚ್ಚಾತೈಲ ಹಾಗೂ ಅನಿಲ ಸಾಗಣೆ ಇದೇ ಮಾರ್ಗವನ್ನು ಅವಲಂಬಿಸಿದೆ' ಎಂದು ತಿಳಿಸಿದ್ದಾರೆ.

