ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಕಾಡು ಬೆಕ್ಕು ಅಥವಾ ಘೋಸ್ಟ್ ಕ್ಯಾಟ್ ಎಂದು ಕರೆಯಲ್ಪುಡವ ಕ್ಯಾರಕಲ್‌ಗಳು ಭಾರತ-ಪಾಕಿಸ್ತಾನ ಗಡಿಯಲ್ಲಿ ಪತ್ತೆಯಾಗಿವೆ.
ಅಲ್ಲದೇ ಕುರುಚಲು ಪ್ರದೇಶದಲ್ಲಿ ಅಲೆದಾಡುತ್ತಿರುವ ಕಾಡುಬೆಕ್ಕುಗಳ ವಿಡಿಯೊ ಹಂಚಿಕೊಂಡಿದ್ದಾರೆ. ರಾಜಸ್ಥಾನದಲ್ಲಿ ಕೈಗೊಂಡಿರುವ ಅರಣ್ಯ ರಕ್ಷಣೆಯ ಫಲವಾಗಿ ಕಾಡುಬೆಕ್ಕುಗಳ ದರ್ಶನವಾಗುತ್ತಿದೆ ಎಂದು ಅರಣ್ಯ ಇಲಾಖೆ ಹೇಳಿದೆ.
ಭಾರತದಲ್ಲಿ ಕ್ಯಾರಕಲ್ (Caracal) ಅತ್ಯಂತ ವಿರಳವಾಗಿ ಕಂಡುಬರುವ, ಮಧ್ಯಮ ಗಾತ್ರದ ಕಾಡು ಬೆಕ್ಕು. ಇದನ್ನು ಸ್ಥಳೀಯವಾಗಿ 'ಸಿಯಾ ಘುಷ್' (Siya-gush) ಎಂದೂ ಕರೆಯುತ್ತಾರೆ.
ಮುಖ್ಯವಾಗಿ ರಾಜಸ್ಥಾನ, ಗುಜರಾತ್ (ಕಚ್) ಮತ್ತು ಮಧ್ಯಪ್ರದೇಶದ ಕುರುಚಲು ಕಾಡುಗಲ್ಲಿಇವು ವಾಸಿಸುತ್ತವೆ. ಕಪ್ಪು ಬಣ್ಣದ ಉದ್ದನೆಯ ಕಿವಿಗಳು ಮತ್ತು ಚುರುಕಾದ ಬೇಟೆಯ ಕೌಶಲ್ಯ ಇವುಗಳ ವಿಶೇಷತೆ. ಆವಾಸಸ್ಥಾನಗಳ ನಾಶದಿಂದಾಗಿ ಇವು ತೀವ್ರ ಅಳಿವಿನಂಚಿನಲ್ಲಿವೆ.
ಭಾರತದಲ್ಲಿ ಕ್ಯಾರಕಲ್‌ಗಳ ಒಟ್ಟು ಸಂಖ್ಯೆಯೇ 90ರಿಂದ 100 ಎನ್ನಲಾಗಿದೆ.

