HEALTH TIPS

ದೇಶದಲ್ಲಿ ನಿರುದ್ಯೋಗ ಪ್ರಮಾಣ ಇಳಿಕೆ: ಸಮೀಕ್ಷಾ ವರದಿ

ನವದೆಹಲಿ: ದೇಶದಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಒಟ್ಟಾರೆ ನಿರುದ್ಯೋಗ ಪ್ರಮಾಣವು 2025ರಲ್ಲಿ ಶೇಕಡ 3.1ಕ್ಕೆ ಇಳಿದಿದೆ. ಇದು 2024ರಲ್ಲಿ ಶೇ 3.2ರಷ್ಟಿತ್ತು ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಸಮೀಕ್ಷೆ ತಿಳಿಸಿದೆ.

ಪುರುಷರ ನಿರುದ್ಯೋಗ ಪ್ರಮಾಣವು ಶೇ 3.3ರಿಂದ ಶೇ 3.1ಕ್ಕೆ ಇಳಿದಿದ್ದರೆ, ಮಹಿಳೆಯರ ನಿರುದ್ಯೋಗ ಪ್ರಮಾಣವು ಯಥಾಸ್ಥಿತಿಯಲ್ಲಿದ್ದು ಶೇ 3.1ರಷ್ಟಿದೆ ಎಂದು ತಿಳಿಸಿದೆ.

ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ದರವು 2024ರಲ್ಲಿ ಶೇ 2.5ರಷ್ಟಿತ್ತು. ಇದು 2025ರಲ್ಲಿ ಶೇ 2.4ಕ್ಕೆ ಇಳಿದಿದೆ. ಈ ಭಾಗದಲ್ಲಿ ಪುರುಷರ ನಿರುದ್ಯೋಗ ಪ್ರಮಾಣ ಶೇ 2.6ರಷ್ಟಿದ್ದರೆ, ಮಹಿಳೆಯರ ಪ್ರಮಾಣ ಶೇ 2.1ರಷ್ಟಿದೆ.

2024ರಲ್ಲಿ ಸ್ವ-ಉದ್ಯೋಗ ಮಾಡುವವರ ಪ್ರಮಾಣ ಶೇ 57.5ರಷ್ಟಿತ್ತು. 2025ರಲ್ಲಿ ಶೇ 56.2ಕ್ಕೆ ಇಳಿದಿದೆ. ನಿಯಮಿತ ವೇತನ/ಸಂಬಳ ಪಡೆಯುವ ಉದ್ಯೋಗಿಗಳ ಪ್ರಮಾಣ ಶೇ 22.4ರಿಂದ ಶೇ 23.6ಕ್ಕೆ ಏರಿಕೆ ಆಗಿದೆ.

ನಿಯಮಿತ ವೇತನ/ಸಂಬಳ ಪಡೆಯುವ ಉದ್ಯೋಗಿಗಳ ಸರಾಸರಿ ಗಳಿಕೆಯು ಪುರುಷರಲ್ಲಿ ₹22,891ರಿಂದ ₹24,217ಕ್ಕೆ ಹೆಚ್ಚಳವಾಗಿದೆ. ಮಹಿಳೆಯರಲ್ಲಿ ₹17,126ರಿಂದ ₹18,353ಕ್ಕೆ ಏರಿಕೆಯಾಗಿದೆ. ಪುರುಷರ ವೇತನದಲ್ಲಿ ಶೇ 5.8ರಷ್ಟು ಮತ್ತು ಮಹಿಳೆಯರಲ್ಲಿ ಶೇ 7.2ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

ದೇಶದ 2.70 ಲಕ್ಷ ಕುಟುಂಬಗಳಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ, ಈ ವರದಿ ಸಿದ್ಧಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries