HEALTH TIPS

ರೇಮಂಡ್‌ ಸಮೂಹದ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ನಿಧನ

ಮುಂಬೈ: ರೇಮಂಡ್ ಸಮೂಹದ ಮಾಜಿ ಅಧ್ಯಕ್ಷ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ವಿಜಯಪತ್ ಸಿಂಘಾನಿಯಾ(87) ಅವರು ಶನಿವಾರ ಸಂಜೆ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. 

ನಿಧನದ ವಿಚಾರವನ್ನು ಅವರ ಪುತ್ರ ಹಾಗೂ ಸಂಸ್ಥೆಯ ಹಾಲಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಗೌತಮ್ ಸಿಂಘಾನಿಯಾ ಅವರು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಪ್ರಕಟಿಸಿದ್ದಾರೆ.

ರಾಜಿ ಆಗಲ್ಲ; ಜೆಕೆ ಹೌಸ್‌ಗೆ ಮತ್ತೆ ಕಾಲಿಡಲ್ಲ- ರೇಮಂಡ್‌ ಸಮೂಹದ ಮಾಜಿ ಅಧ್ಯಕ್ಷ ಸಿಂಘಾನಿಯಾ ಅವರು ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಅಂತ್ಯಕ್ರಿಯೆ ಭಾನುವಾರ ನೆರವೇರಲಿದೆ ಎಂದು ರೇಮಂಡ್ ಸಮೂಹದ ವಕ್ತಾರರು ತಿಳಿಸಿದ್ದಾರೆ.

ಪದ್ಮಭೂಷಣ ಪುರಸ್ಕೃತರಾದ ವಿಜಯಪತ್ ಸಿಂಘಾನಿಯಾ ಅವರು ವಿಮಾನಯಾನದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಅಲ್ಲದೇ ಬಿಸಿ ಗಾಳಿಯ ಬಲೂನ್‌ನಲ್ಲಿ (hot air balloon) ಅತಿ ಎತ್ತರಕ್ಕೆ ಏರಿದ ವಿಶ್ವ ದಾಖಲೆಯನ್ನು ಅವರು ಹೊಂದಿದ್ದಾರೆ.

ವಿಜಯಪತ್ ಸಿಂಘಾನಿಯಾ ಅವರು, 2000ನೇ ಇಸವಿಯವರೆಗೆ ಸುಮಾರು ಎರಡು ದಶಕಗಳ ಕಾಲ ರೇಮಂಡ್ ಸಮೂಹದ ಅಧ್ಯಕ್ಷರಾಗಿದ್ದರು. ಬಳಿಕ ಕಂಪನಿಯ ಜವಾಬ್ದಾರಿಯನ್ನು ಪುತ್ರ ಗೌತಮ್ ಅವರಿಗೆ ಹಸ್ತಾಂತರಿಸಿ, ಸಂಸ್ಥೆಯಲ್ಲಿದ್ದ ತಮ್ಮ ಸಂಪೂರ್ಣ ಶೇ37 ರಷ್ಟು ಪಾಲನ್ನು ಅವರ(ಗೌತಮ್) ಹೆಸರಿಗೆ ವರ್ಗಾಯಿಸಿದ್ದರು.

ಕೆಲವು ವರ್ಷಗಳ ಹಿಂದೆ ವಿಜಯಪತ್ ಸಿಂಘಾನಿಯಾ ಮತ್ತು ಅವರ ಮಗನ ನಡುವೆ ಕೌಟುಂಬಿಕ ವಿವಾದಗಳು ನಡೆದಿದ್ದವು. ಬಳಿಕ ಅವರು ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries