HEALTH TIPS

ಇರಾನ್ ದಾಳಿ ಆತಂಕ: ಅಬುಧಾಬಿಯಲ್ಲಿ ನಿವಾಸಿಗಳ ಫೋನ್ಗಳಿಗೆ ತುರ್ತು ಎಚ್ಚರಿಕೆ ಸಂದೇಶ

ಅಬುಧಾಬಿ: ಇರಾನ್ ದಾಳಿ ಸಂಬಂಧಿತ ಆತಂಕದ ನಡುವೆ ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಯಲ್ಲಿ ಶನಿವಾರ ಮಧ್ಯಾಹ್ನ ಸ್ಫೋಟಗಳ ವರದಿಗಳು ಕೇಳಿಬಂದ ಹಿನ್ನೆಲೆಯಲ್ಲಿ ನಿವಾಸಿಗಳು ಹಾಗೂ ವಲಸಿಗರ ಮೊಬೈಲ್ ಫೋನ್ಗಳಿಗೆ ತುರ್ತು ಎಚ್ಚರಿಕೆ ಸಂದೇಶಗಳು ರವಾನೆಯಾದವು.

ಸಂಭಾವ್ಯ ಕ್ಷಿಪಣಿ ಬೆದರಿಕೆಗಳು ಇರುವ ಸಾಧ್ಯತೆ ಕುರಿತು ಸಂದೇಶಗಳಲ್ಲಿ ಎಚ್ಚರಿಕೆ ನೀಡಲಾಗಿತ್ತು.

ಎಚ್ಚರಿಕೆ ಸಂದೇಶಗಳು ಪ್ರಸಾರವಾಗುತ್ತಿದ್ದಂತೆ ನಗರಾದ್ಯಂತ ಮೊಬೈಲ್ ಫೋನ್ಗಳು ಅಲಾರಂ ಧ್ವನಿಯಲ್ಲಿ ಮೊಳಗಿದವು. ಇದರಿಂದ ಸಾರ್ವಜನಿಕರಲ್ಲಿ ಕ್ಷಣಿಕ ಆತಂಕ ಉಂಟಾದರೂ, ಅಧಿಕಾರಿಗಳ ಸೂಚನೆಗಳಂತೆ ಜನರು ತಕ್ಷಣದ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಕೈಗೊಂಡರು.

ಆಂತರಿಕ ಸಚಿವಾಲಯ ಹಂಚಿಕೊಂಡಿರುವ ಸಂದೇಶದಲ್ಲಿ, "ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸಂಭಾವ್ಯ ಕ್ಷಿಪಣಿ ಬೆದರಿಕೆಗಳ ಹಿನ್ನೆಲೆ ಹತ್ತಿರದ ಸುರಕ್ಷಿತ ಕಟ್ಟಡದಲ್ಲಿ ತಕ್ಷಣ ಆಶ್ರಯ ಪಡೆಯಿರಿ. ಕಿಟಕಿಗಳು, ಬಾಗಿಲುಗಳು ಹಾಗೂ ತೆರೆದ ಪ್ರದೇಶಗಳಿಂದ ದೂರವಿರಿ. ಹೆಚ್ಚಿನ ಸೂಚನೆಗಳಿಗಾಗಿ ಕಾಯಿರಿ" ಎಂದು ತಿಳಿಸಲಾಗಿದೆ.

ಎಚ್ಚರಿಕೆ ಸಂದೇಶ ಹೊರಬಂದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬಳಕೆದಾರರು ಸ್ಕ್ರೀನ್ಶಾಟ್ಗಳು ಹಾಗೂ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ನಗರದಲ್ಲಿನ ಪರಿಸ್ಥಿತಿಯನ್ನು ವಿವರಿಸುವ ಅನೇಕ ಪೋಸ್ಟ್ಗಳು ಆನ್ಲೈನ್ನಲ್ಲಿ ವೈರಲ್ ಆಗಿದೆ. 

{Matt} $XRPatriot
🚨🇦🇪 Emergency alert issued in Abu Dhabi, the UAE with Iranian missiles approaching 💥💥💥💥💥💥💥💥
7
Reply
Copy link

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries