ವಾಷಿಂಗ್ಟನ್: ಇರಾನ್ ತೈಲ ನೆಲೆಯ ಮೇಲಿನ ಇಸ್ರೇಲ್ ದಾಳಿಯ ಕುರಿತು ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಶ್ವೇತಭವನ ತಿಳಿಸಿದೆ ಎಂದು ವರದಿಯಾಗಿದೆ.
ಅಮೆರಿಕ ಹಾಗೂ ಇಸ್ರೇಲ್ ಸೇರಿಕೊಂಡು ಫೆ.28ರಿಂದ ಇರಾನ್ ಮೇಲೆ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಇದರಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಇತ್ತೀಚೆಗೆ ಟೆಹರಾನ್ ಸಮೀಪದ ಮೂರು ತೈಲ ನೆಲೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು.
ಇರಾನ್ ತನ್ನ ತೈಲ ಘಟಕವನ್ನು ಕ್ಷಿಪಣಿ ನೆಲೆಯಾಗಿಸಿಕೊಂಡಿದೆ ಎಂದು ಆರೋಪಿಸಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದರು. ಈ ಕುರಿತು ಅಮೆರಿಕ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದೆ.
'ಇದನ್ನು ಅಮೆರಿಕ ಎದುರು ನೋಡಿರಲಿಲ್ಲ. ಇದು ಒಳ್ಳೆಯ ನಿರ್ಧಾರ ಕೂಡ ಅಲ್ಲ' ಎಂದು ಅಲ್ಲಿನ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.
ಆದರೆ, ಈ ಕುರಿತು ಅಮೆರಿಕ ಹಾಗೂ ಇಸ್ರೇಲ್ ವಕ್ತಾರರು ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

